ಮುಂಬೈ(ಮಹಾರಾಷ್ಟ್ರ): ಟಿ20 ಸರಣಿ ಗೆದ್ದು ಬೀಗಿದ್ದ ಇಂಗ್ಲೆಂಡ್ ತಂಡಕ್ಕೆ ಟೆಸ್ಟ್ನಲ್ಲಿ ಭಾರತೀಯ ವನಿತೆಯರು ಕಠಿಣ ಸವಾಲಾಗಿದ್ದಾರೆ. 9 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಆಡುತ್ತಿದ್ದರೂ ತಂಡ ಉತ್ತಮ ಲಯದಲ್ಲಿದೆ. ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ನ ಎರಡನೇ ದಿನದ ಮುಕ್ತಾಯಕ್ಕೆ ಭಾರತ 478 ರನ್‌ಗಳ ಮುನ್ನಡೆ ಗಳಿಸಿತು.
-
𝗦𝘁𝘂𝗺𝗽𝘀!#TeamIndia finish Day 2 with a lead by 478 runs 👍
— BCCI Women (@BCCIWomen) December 15, 2023 " class="align-text-top noRightClick twitterSection" data="
Captain @ImHarmanpreet remains unbeaten on 44 🙌#INDvENG pic.twitter.com/H47JvJKtPu
">𝗦𝘁𝘂𝗺𝗽𝘀!#TeamIndia finish Day 2 with a lead by 478 runs 👍
— BCCI Women (@BCCIWomen) December 15, 2023
Captain @ImHarmanpreet remains unbeaten on 44 🙌#INDvENG pic.twitter.com/H47JvJKtPu𝗦𝘁𝘂𝗺𝗽𝘀!#TeamIndia finish Day 2 with a lead by 478 runs 👍
— BCCI Women (@BCCIWomen) December 15, 2023
Captain @ImHarmanpreet remains unbeaten on 44 🙌#INDvENG pic.twitter.com/H47JvJKtPu
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 428 ರನ್ ಪೇರಿಸಿತು. ನಂತರ ಮೈದಾನಕ್ಕಿಳಿದ ಇಂಗ್ಲೆಂಡ್ ತಂಡವನ್ನು 136 ರನ್‌ಗಳಿಗೆ ಭಾರತೀಯ ಬೌಲರ್ಗಳು ಕಟ್ಟಿ ಹಾಕಿದರು. ಇದರಿಂದಾಗಿ 292 ರನ್‌ಗಳ ಮುನ್ನಡೆಯೊಂದಿಗೆ ಭಾರತ ಎರಡನೇ ಇನ್ನಿಂಗ್ಸ್ ಆರಂಭಿಸಿತು.
ಇಂದು 42 ಓವರ್ ಆಡಿದ ಭಾರತ 6 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿದೆ. ಇದರೊಂದಿಗೆ 478 ರನ್‌ಗಳ ಮುನ್ನಡೆಯಲ್ಲಿದೆ. ಇನ್ನೂ ಎರಡು ದಿನದ ಆಟ ಬಾಕಿ ಇದ್ದು, 500ಕ್ಕೂ ಹೆಚ್ಚಿನ ಗುರಿ ನೀಡುವ ನಿರೀಕ್ಷೆ ಇದೆ.
ಉತ್ತಮ ಆರಂಭ: ಎರಡನೇ ಇನ್ನಿಂಗ್ಸ್‌ನಲ್ಲಿ ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಉತ್ತಮ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್ಗೆ ಅರ್ಧಶತಕದ (61) ಪಾಲುದಾರಿಕೆ ಹಂಚಿಕೊಂಡಿತು. ಉಪನಾಯಕಿ ಸ್ಮೃತಿ ಮಂಧಾನ (26) ಎರಡನೇ ಇನ್ನಿಂಗ್ಸ್ನಲ್ಲೂ ದೊಡ್ಡ ಮೊತ್ತವನ್ನು ಕಲೆಹಾಕುವಲ್ಲಿ ಎಡವಿದರು. ಮಂಧಾನ ಬೆನ್ನಲ್ಲೇ ಶಫಾಲಿ ವರ್ಮಾ (33) ಸಹ ವಿಕೆಟ್ ಕೊಟ್ಟರು. ಮೊದಲ ಇನ್ನಿಂಗ್ಸ್‌ನಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅರ್ಧಶತಕ ಗಳಿಸಿದ್ದ ಯಾಸ್ತಿಕಾ ಭಾಟಿಯಾ ಬಡ್ತಿ ಪಡೆದು ಮೂರನೇ ಕ್ರಮಾಂಕದಲ್ಲಿ ಬಂದು ಕೇವಲ 9 ರನ್ ಗಳಿಸಿ ಔಟಾದರು.
ನಾಯಕಿ ಕೌರ್ ಬಲ: 3 ವಿಕೆಟ್ ಕಳೆದುಕೊಂಡ ಭಾರತಕ್ಕೆ ನಾಯಕಿ ಕೌರ್ ಆಸರೆಯಾದರು. ಜೆಮಿಮಾ ರಾಡ್ರಿಗಸ್ ಮತ್ತು ದೀಪ್ತಿ ಶರ್ಮಾ ಜೊತೆ ಹರ್ಮನ್‌ಪ್ರೀತ್ ಕೌರ್ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿ ಪಾಲುದಾರಿಕೆ ಹಂಚಿಕೊಂಡರು. ಬಿರುಸಿನ ಇನ್ನಿಂಗ್ಸ್ ಕಟ್ಟುತ್ತಿದ್ದ ಜೆಮಿಮಾ ರಾಡ್ರಿಗಸ್ 29 ಬಾಲ್ನಲ್ಲಿ 5 ಬೌಂಡರಿಸಹಿತ 27 ರನ್ ಗಳಿಸಿ ವಿಕೆಟ್ ಕೊಟ್ಟರೆ, ಬೌಲಿಂಗ್ನಲ್ಲಿ ಕಮಾಲ್ ಮಾಡಿದ ದೀಪ್ತಿ 18 ಬಾಲ್ನಲ್ಲಿ 20 ರನ್ ಗಳಿಸಿ ಔಟಾದರು. ನಂತರ ಬಂದ ಸ್ನೇಹ ರಾಣಾ ಶೂನ್ಯಕ್ಕೆ ವಿಕೆಟ್ ಕೊಟ್ಟರು. ದಿನದ ಕೊನೆಯ ಓವರ್ಗಳಲ್ಲಿ ಹರ್ಮನ್‌ಪ್ರೀತ್ ಕೌರ್ ಜೊತೆಗೆ ಪೂಜಾ ವಸ್ತ್ರಾಕರ್ ಅರ್ಧಶತಕದ ಇನ್ನಿಂಗ್ಸ್ ಹಂಚಿಕೊಂಡರು. 44 ರನ್ ಗಳಿಸಿ ಕೌರ್ ಮತ್ತು 17 ರನ್ನಿಂದ ಪೂಜಾ ವಸ್ತ್ರಾಕರ್ ದಿನದಾಟದ ಅಂತ್ಯದ ವೇಳೆಗೆ ಅಜೇಯವಾಗುಳಿದರು.
ಟೀಮ್ ಇಂಡಿಯಾವನ್ನು ಕಾಡಿದ ಡೀನ್: ಭಾರತಕ್ಕೆ ಬೌಲಿಂಗ್ ವೇಳೆ ಸ್ಪಿನ್ನರ್ಗೆ ಪಿಚ್ ಸಹಕರಿಸಿದಂತೆ ಇಂಗ್ಲೆಂಡ್ಗೂ ಸಹಕಾರಿಯಾಯಿತು. ಆಂಗ್ಲರ ಷಾರ್ಲೆಟ್ ಡೀನ್ ಮತ್ತು ಸೋಫಿ ಎಕ್ಲೆಸ್ಟೋನ್ ಕಠಿಣ ಸವಾಲಾಗಿದ್ದಲ್ಲದೇ ವಿಕೆಟ್ ಪಡೆದರು. ಷಾರ್ಲೆಟ್ ಡೀನ್ ಭಾರತದ ಪ್ರಮುಖ ನಾಲ್ವರನ್ನು ಪೆವಿಲಿಯನ್‌ಗೆ ಕಳಿಸಿದರೆ, ಸೋಫಿ ಎಕ್ಲೆಸ್ಟೋನ್ 2 ವಿಕೆಟ್ ಪಡೆದರು.
ಇದನ್ನೂ ಓದಿ: ಮಹಿಳಾ ಕ್ರಿಕೆಟ್ ಟೆಸ್ಟ್: ದೀಪ್ತಿಗೆ 'ಪಂಚ'ಕಜ್ಜಾಯ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭಾರಿ ಮುನ್ನಡೆ