ಬ್ರಿಡ್ಜ್‌ಟೌನ್ (ವೆಸ್ಟ್ ಇಂಡೀಸ್): ವಿಶ್ವಕಪ್ ಹಿನ್ನಲೆಯಲ್ಲಿ ಭಾರತ ತಂಡ ಪ್ರಯೋಗಕ್ಕೆ ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ಅನುಭವಿಗಳನ್ನು ಕೈಬಿಟ್ಟು ಉಪನಾಯಕ ಹಾರ್ದಿಕ್ಗೆ ಟೀಮ್ನ ಮುಂದಾಳತ್ವ ನೀಡಲಾಗಿದೆ. ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಮಾಡುವ ನಿರ್ಧಾರ ಮಾಡಿದೆ.
ನಾಯಕ ರೋಹಿತ್ ಶರ್ಮಾ ಮತ್ತು ಅನುಭವಿ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಈ ಪಂದ್ಯದಿಂದ ಕೈಬಿಡಲಾಗಿದ್ದು, ಸಂಜು ಸ್ಯಾಮ್ಸನ್ ಮತ್ತು ಅಕ್ಷರ್ ಪಟೇಲ್ಗೆ ತಂಡದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಉಪನಾಯಕ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ.
-
🚨 Toss Update 🚨
— BCCI (@BCCI) July 29, 2023 " class="align-text-top noRightClick twitterSection" data="
West Indies win the toss and elect to field first in the 2nd ODI.
Follow the match - https://t.co/k4FosiRmuT#TeamIndia | #WIvIND pic.twitter.com/tEUAw1b07b
">🚨 Toss Update 🚨
— BCCI (@BCCI) July 29, 2023
West Indies win the toss and elect to field first in the 2nd ODI.
Follow the match - https://t.co/k4FosiRmuT#TeamIndia | #WIvIND pic.twitter.com/tEUAw1b07b🚨 Toss Update 🚨
— BCCI (@BCCI) July 29, 2023
West Indies win the toss and elect to field first in the 2nd ODI.
Follow the match - https://t.co/k4FosiRmuT#TeamIndia | #WIvIND pic.twitter.com/tEUAw1b07b
ಹಾರ್ದಿಕ್, ಉಮ್ರಾನ್, ಶಾರ್ದೂಲ್ ಮತ್ತು ಮುಖೇಶ್ ಕುಮಾರ್ ವೇಗದ ವಿಭಾಗದಲ್ಲಿ ಕಾರ್ಯನಿರ್ವಹಿಸಿದರೆ, ಅಕ್ಷರ್, ಜಡೇಜಾ ಮತ್ತು ಕುಲದೀಪ್ ಯಾದವ್ ಸ್ಪಿನ್ನಿಂಗ್ ವಿಭಾಗ ನೋಡಿಕೊಳ್ಳಲಿದ್ದಾರೆ.
ಮೊದಲ ಪಂದ್ಯದಲ್ಲಿ ಕೆರಿಬಿಯನ್ ಪಡೆ ಕಳಪೆ ಪ್ರದರ್ಶನ ನೀಡಿದ್ದು, 114ಕ್ಕೆ ಸರ್ವ ಪತನ ಕಂಡು ಭಾರತಕ್ಕೆ ಅಲ್ಪ ಮೊತ್ತದ ಗುರಿ ನೀಡಿತ್ತು. ಈ ಪಂದ್ಯವನ್ನು ಭಾರತ ನಿರಾಯಾಸವಾಗಿ ಗೆದ್ದುಕೊಂಡಿದೆ. ಇದರಿಂದ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಈ ಪಂದ್ಯವನ್ನು ರೋಹಿತ್ ಪಡೆ ಗೆದ್ದುಕೊಂಡಲ್ಲಿ ಸರಣಿ ಕೈವಶವಾಗಲಿದೆ. ಅಲ್ಲದೇ ವೆಸ್ಟ್ ಇಂಡೀಸ್ ವಿರುದ್ಧದ 13ನೇ ಸರಣಿ ಇದಾಗಿರಲಿದೆ.
ತವರಿನಲ್ಲೇ ಕಳಪೆ ಪ್ರದರ್ಶನ ನೀಡುತ್ತಿರುವ ಕೆರಿಬಿಯನ್ನರು: ವೆಸ್ಟ್ ಇಂಡೀಸ್ ತಂಡ ಕಳೆದ ಐದು ಸರಣಿಗಳನ್ನು ತವರಿನಲ್ಲಿ ಸೋತಿದೆ. ಇಂದಿನ ಪಂದ್ಯವನ್ನು ಕೈಚೆಲ್ಲಿದಲ್ಲಿ 6ನೇ ಸರಣಿ ಸೋತಂತಾಗುತ್ತದೆ. ತವರು ನೆಲದಲ್ಲೇ ಎಡವುತ್ತಿರುವ ತಂಡ ಕಮ್ಬ್ಯಾಕ್ ಮಾಡಬೇಕಿದೆ. ಶೈ ಹೋಪ್ ನಾಯಕತ್ವದಲ್ಲಿ ಇಂದು ಅದೇ ಭರವಸೆಯೊಂದಿಗೆ ಕೆರಿಬಿಯನ್ ಪಡೆ ಮೈದಾನಕ್ಕಿಳಿದಿದೆ.
ಪಿಚ್: ಮೊದಲ ಪಂದ್ಯದಲ್ಲಿ ಬಳಸಿದ ಪಿಚ್ನಲ್ಲೇ ಇಂದಿನ ಪಂದ್ಯವೂ ನಡೆಯುತ್ತಿದೆ. ಹೀಗಾಗಿ ಸ್ಪಿನ್ನರ್ಗಳು ಕಮಾಲ್ ಮಾಡುವ ನಿರೀಕ್ಷೆ ಇದೆ. ಅದರಂತೆ ಭಾರತ ತಂಡದಲ್ಲಿ ಇಂದು ಮೂವರು ಸ್ಪಿನ್ನರ್ಗಳು ಕಣಕ್ಕಿಳಿದಿದ್ದಾರೆ.
ತಂಡ ಇಂತಿದೆ.. ಭಾರತ: ಶುಭಮನ್ ಗಿಲ್, ಇಶಾನ್ ಕಿಶನ್(ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್
ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಾಯ್ ಹೋಪ್(ನಾಯಕ/ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಕೀಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಗುಡಕೇಶ್ ಮೋಟಿ, ಅಲ್ಜಾರಿ ಜೋಸೆಫ್, ಜೇಡನ್ ಸೀಲ್ಸ್