ಜೋಹಾನ್ಸ್‌ಬರ್ಗ್(ದಕ್ಷಿಣ ಆಫ್ರಿಕಾ): ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಇಂದಿನಿಂದ ಆರಂಭವಾಗಿದೆ. ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳ ಬಿಗು ದಾಳಿಗೆ ತರಗಲೆಗಳಂತೆ ಉದುರಿದ ದಕ್ಷಿಣ ಆಫ್ರಿಕಾ ಕೇವಲ 116 ರನ್ಗಳಿಗೆ ಆಲೌಟ್ ಆಯಿತು. ಹೀಗಾಗಿ ಭಾರತದ ಗೆಲುವಿಗೆ 117 ರನ್ ಬೇಕಿದೆ.
ಅರ್ಷದೀಪ್ ಸಿಂಗ್ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ ಮಾಡಿದರು. ಅವೇಶ್ ಖಾನ್ 4 ವಿಕೆಟ್ ಉರುಳಿಸಿದರು. ಭಾರತೀಯರ ಕರಾರುವಾಕ್ ಬೌಲಿಂಗ್ ದಾಳಿಗೆ ಪರದಾಡಿದ ದಕ್ಷಿಣ ಆಫ್ರಿಕಾ ಕಡಿಮೆ ರನ್ ಗಳಿಕೆ ಮಾಡಿತು.
-
Maiden 5⃣-wicket haul in international cricket! 👏 👏
— BCCI (@BCCI) December 17, 2023 " class="align-text-top noRightClick twitterSection" data="
Take A Bow - @arshdeepsinghh 🙌 🙌
Follow the Match ▶️ https://t.co/tHxu0nUwwH #TeamIndia | #SAvIND pic.twitter.com/xhWmAxmNgK
">Maiden 5⃣-wicket haul in international cricket! 👏 👏
— BCCI (@BCCI) December 17, 2023
Take A Bow - @arshdeepsinghh 🙌 🙌
Follow the Match ▶️ https://t.co/tHxu0nUwwH #TeamIndia | #SAvIND pic.twitter.com/xhWmAxmNgKMaiden 5⃣-wicket haul in international cricket! 👏 👏
— BCCI (@BCCI) December 17, 2023
Take A Bow - @arshdeepsinghh 🙌 🙌
Follow the Match ▶️ https://t.co/tHxu0nUwwH #TeamIndia | #SAvIND pic.twitter.com/xhWmAxmNgK
ದ.ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಕಣಕ್ಕಿಳಿದ ರೀಜಾ ಹೆಂಡ್ರಿಕ್ಸ್ ಮತ್ತು ಟೋನಿ ಡಿ ಜೋರ್ಜಿ ಜೋಡಿ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಅರ್ಷದೀಪ್ ಅವರ ಮೊದಲ ಓವರ್ನ ನಾಲ್ಕನೇ ಎಸೆತದಲ್ಲೇ ರೀಜಾ ಹೆಂಡ್ರಿಕ್ಸ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಬಳಿಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (0) ಕೂಡ ಅರ್ಷದೀಪ್‌ಗೆ ವಿಕೆಟ್ ಒಪ್ಪಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
ಒಂದೆಡೆ, 3 ವಿಕೆಟ್ ಕಳೆದುಕೊಂಡರೂ ಕೂಡಾ ಎಡಗೈ ಬ್ಯಾಟರ್ ಜೋರ್ಜಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಕೆಲವು ಪವರ್ ಹಿಟ್ಟಿಂಗ್ ಮೂಲಕ ಮಾರ್ಕ್ರಾಮ್‌ರೊಂದಿಗೆ 39 ರನ್ ಜೊತೆಯಾಟವಾಡಿದರು. ಆದರೆ ಮತ್ತೆ ದಾಳಿಗಿಳಿದ ಅರ್ಷದೀಪ್ ಸಿಂಗ್ ಅಪಾಯಕಾರಿಯಾಗಿ ಕಾಣುತ್ತಿದ್ದ ಜೋರ್ಜಿ(28) ಅವರನ್ನು ಔಟ್ ಮಾಡಿದರು. ಹೆನ್ರಿಚ್ ಕ್ಲಾಸೆನ್ (6) ಹಾಗು ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಂಡಿಲೆ ಫೆಹ್ಲುಕ್ವಾಯೊ (33) ಕೂಡ ವಿಕೆಟ್ ಚೆಲ್ಲಿದರು.
ಮಾರ್ಕ್ರಾಮ್ (12), ಡೇವಿಡ್ ಮಿಲ್ಲರ್ (2), ವಿಯಾನ್ ಮುಲ್ಡರ್ (0) ಮತ್ತು ಕೇಶವ್ ಮಹಾರಾಜ್ (4) ವಿಕೆಟ್ ಪಡೆಯುವ ಮೂಲಕ ಆವೇಶ್ ಖಾನ್ ದ.ಆಫ್ರಿಕಾ ಬ್ಯಾಟಿಂಗ್ ಬಲ ಮುರಿದರು. ಇನ್ನು ನಾಂದ್ರೆ ಬರ್ಗರ್ (7) ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಬಲಿಯಾದರು.
ತಂಡಗಳು ಇಂತಿವೆ- ಭಾರತ: ಕೆ.ಎಲ್.ರಾಹುಲ್ (ವಿಕೆಟ್‌ಕೀಪರ್/ನಾಯಕ), ರುತುರಾಜ್ ಗಾಯಕ್‌ವಾಡ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್,ಅರ್ಷದೀಪ್ ಸಿಂಗ್, ಅವೇಶ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್
ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೋರ್ಜಿ, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಏಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲೆ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ.
ಇದನ್ನೂ ಓದಿ: ಹರಿಣಗಳ ವಿರುದ್ಧ ಏಕದಿನ ಸರಣಿ: ವಿಶ್ವಕಪ್ ನಂತರದ ಹೊಸ ಆರಂಭದ ಮೇಲೆ ಯುವ ಭಾರತದ ಕಣ್ಣು