ETV Bharat / sports

IND vs SA: ದ.ಆಫ್ರಿಕಾ ಗೆಲುವಿಗೆ ಬೇಕು ಕೇವಲ 122ರನ್​​, ಕುತೂಹಲ ಘಟ್ಟದತ್ತ 2ನೇ ಟೆಸ್ಟ್​​

ದಕ್ಷಿಣ ಆಫ್ರಿಕಾ ವಿರುದ್ಧದ ಜೋಹಾನ್ಸ್​ಬರ್ಗ್​ ಟೆಸ್ಟ್​​ ಕುತೂಹಲ ಘಟ್ಟ ತಲುಪಿದೆ. ಐತಿಹಾಸಿಕ ಟೆಸ್ಟ್​​ ಪಂದ್ಯದಲ್ಲಿ ಗೆಲುವು ದಾಖಲಿಸಲು ಕೆ.ಎಲ್‌.ರಾಹುಲ್​ ಪಡೆಗೆ ಎದುರಾಳಿ ತಂಡದ 8 ವಿಕೆಟ್​ಗಳ ಅಗತ್ಯವಿದೆ.

India vs South Africa 2nd Test
India vs South Africa 2nd Test
author img

By

Published : Jan 5, 2022, 10:08 PM IST

Updated : Jan 5, 2022, 10:13 PM IST

ಜೋಹಾನ್ಸ್​ಬರ್ಗ್​​(ದಕ್ಷಿಣ ಆಫ್ರಿಕಾ): ಟೀಂ ಇಂಡಿಯಾ ನೀಡಿರುವ 240 ರನ್​ಗಳ ಸುಲಭ ಗುರಿ ಬೆನ್ನತ್ತಿರುವ ದಕ್ಷಿಣ ಆಫ್ರಿಕಾ ತಂಡ ಮೂರನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ​​ನಷ್ಟಕ್ಕೆ 118 ರನ್​​ಗಳಿಸಿದ್ದು, ಗೆಲುವಿಗೆ 122 ರನ್​ಗಳ ಅಗತ್ಯವಿದೆ.

ವಾಂಡರರ್ಸ್​​​​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐತಿಹಾಸಿಕ ಟೆಸ್ಟ್​​ ಪಂದ್ಯದಲ್ಲಿ ಗೆಲುವಿನ ನಗೆ ಬೀರಲು ಭಾರತಕ್ಕೆ 8 ವಿಕೆಟ್ ಬೇಕಿದೆ. ಮತ್ತೊಂದೆಡೆ, 118 ರನ್​ ಕಲೆ ಹಾಕಿದರೆ ದ.ಆಫ್ರಿಕಾ ಗೆದ್ದು ಬೀಗಲಿದೆ.

  • An engrossing day of play in Johannesburg!

    Dean Elgar leads from the front with a gritty 46*, taking South Africa to stumps with just two wickets down.

    A scintillating fourth day awaits 🤩#WTC23 | #SAvIND pic.twitter.com/hyzyimZzNr

    — ICC (@ICC) January 5, 2022 " class="align-text-top noRightClick twitterSection" data=" ">

ಎರಡನೇ ಇನ್ನಿಂಗ್ಸ್​​ನಲ್ಲಿ ಚೇತೇಶ್ವರ್ ಪೂಜಾರಾ (53), ಅಂಜಿಕ್ಯ ರಹಾನೆ (58) ಹಾಗೂ ಹನುಮ ವಿಹಾರಿ (40*)ರನ್​ಗಳ ನೆರವಿನಿಂದ 10 ವಿಕೆಟ್​ ​ನಷ್ಟಕ್ಕೆ 266 ರನ್ ​ಗಳಿಗೆ ಆಲೌಟ್​​ ಆಗಿದ್ದು, ಈ ಮೂಲಕ ಎದುರಾಳಿ ತಂಡಕ್ಕೆ 240 ರನ್​ಗಳ ಗುರಿ ನೀಡಿತು. ಈ ಗುರಿ​​ ಬೆನ್ನತ್ತಿರುವ ದ.ಆಫ್ರಿಕಾ ಎರಡನೇ ಇನ್ನಿಂಗ್ಸ್​​ನಲ್ಲಿ ಉತ್ತಮ ಆರಂಭ ಪಡೆದುಕೊಂಡಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮರ್ಕ್ರಾಮ್​​(31) ಹಾಗೂ ಎಲ್ಗರ್​(46*) ಉತ್ತಮ ಜೊತೆಯಾಟ ಆಡಿದರು. 31 ರನ್ ​ಗಳಿಕೆ ಮಾಡಿದ್ದ ವೇಳೆ ಶಾರ್ದೂಲ್​ ಓವರ್​​ನಲ್ಲಿ ಮರ್ಕ್ರಾಮ್​ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಬಂದ ಪಿಟರ್ಸನ್​​ 28 ರನ್​ಗಳಿಸಿ ಅಶ್ವಿನ್ ಓವರ್​​ನಲ್ಲಿ ಎಲ್​ಬಿ ಬಲೆಗೆ ಬಿದ್ದರು.

ಬ್ಯಾಟಿಂಗ್ ಕಾಯ್ದುಕೊಂಡಿರುವ ಎಲ್ಗರ್​​-ಡುಸ್ಸೆನ್​

ದಕ್ಷಿಣ ಆಫ್ರಿಕಾ ಎರಡು ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ರಕ್ಷಣಾತ್ಮಕ ಆಟದ ಮೊರೆ ಹೋಗಿರುವ ಎಲ್ಗರ್​​-ಡುಸ್ಸೆನ್​ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಅಜೇಯ 46 ರನ್​ಗಳಿಕೆ ಮಾಡಿರುವ ಎಲ್ಗರ್​​ ಹಾಗೂ 11 ರನ್ ​ಗಳಿಸಿರುವ ಡುಸ್ಸೆನ್​ ವಿಕೆಟ್​ ಆದಷ್ಟು ಬೇಗ ಪಡೆದುಕೊಂಡರೆ ಮಾತ್ರ ಭಾರತ ಈ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿದೆ.

Last Updated : Jan 5, 2022, 10:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.