ETV Bharat / sports

WTC ಫೈನಲ್​ನಲ್ಲಿ ಮುಂದುವರಿದ ವರುಣನಾಟ, 5ನೇ ದಿನದಾಟವೂ ವಿಳಂಬ.. ಮಳೆಯದ್ದೇ ಮೇಲುಗೈ! - southampton rain

ಈಗಾಗಲೇ ವರುಣನ ಅಬ್ಬರಕ್ಕೆ ಮೊದಲ ದಿನದ ಆಟ ಕೂಡ ಸಂಪೂರ್ಣ ಆಹುತಿಯಾಗಿತ್ತು. ಎರಡನೇ ದಿನ ಮಂದ ಬೆಳಕಿನ ಕಾರಣ ಕೇವಲ 65 ಓವರ್​ಗಳ ಆಟ ಮಾತ್ರ ನಡೆದಿತ್ತು. 3ನೇ ದಿನ ಇನ್ನು 19 ಓವರ್​ಗಳ ಆಟ ಬಾಕಿಯಿದ್ದಾಗ, ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ನಾಲ್ಕನೇ ದಿನವೂ ಸಂಪೂರ್ಣ ಮಳೆಯ ಆಟವೇ ನಡೆದಿತ್ತು..

WTC ಫೈನಲ್
WTC ಫೈನಲ್
author img

By

Published : Jun 22, 2021, 3:33 PM IST

ಸೌತಾಂಪ್ಟನ್ ​: ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಸೌತಾಂಪ್ಟನ್​ನ ಏಜಿಯಸ್ ಬೌಲ್​ನಲ್ಲಿ ನಡೆಯುತ್ತಿರುವ ಚೊಚ್ಚಲ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪಂದ್ಯದ 5ನೇ ದಿನದಾಟಕ್ಕೂ ಮಳೆ ಅಡಚಣೆಯೊಡ್ಡಿದೆ.

ನಾಲ್ಕನೇ ದಿನ ಸಂಪೂರ್ಣ ಮಳೆಗೆ ಆಹುತಿಯಾಗಿತ್ತು. ಆದರೆ, 5ನೇ ದಿನ ಬಿಸಿಲು ಬಂದಿದ್ದರಿಂದ ಪಂದ್ಯಾರಂಭವಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಆರಂಭಕ್ಕೆ ಕೆಲವು ನಿಮಿಷಗಳಿದ್ದಾಗ ತುಂತುರು ಮಳೆ ಆರಂಭವಾದ ಕಾರಣ ಈ ದಿನವೂ ಕೂಡ ಪಂದ್ಯ ಆರಂಭದಲ್ಲಿ ವಿಳಂಬವಾಗಲಿದೆ ಎಂದು ಐಸಿಸಿ ಟ್ವೀಟ್​ ಮೂಲಕ ದೃಢಪಡಿಸಿದೆ.

ಈಗಾಗಲೇ ವರುಣನ ಅಬ್ಬರಕ್ಕೆ ಮೊದಲ ದಿನದ ಆಟ ಕೂಡ ಸಂಪೂರ್ಣ ಆಹುತಿಯಾಗಿತ್ತು. ಎರಡನೇ ದಿನ ಮಂದ ಬೆಳಕಿನ ಕಾರಣ ಕೇವಲ 65 ಓವರ್​ಗಳ ಆಟ ಮಾತ್ರ ನಡೆದಿತ್ತು. 3ನೇ ದಿನ ಇನ್ನು 19 ಓವರ್​ಗಳ ಆಟ ಬಾಕಿಯಿದ್ದಾಗ, ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ನಾಲ್ಕನೇ ದಿನವೂ ಸಂಪೂರ್ಣ ಮಳೆಯ ಆಟವೇ ನಡೆದಿತ್ತು.

ಇನ್ನು, ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಮೊದಲ ಇನ್ನಿಂಗ್ಸ್​ನಲ್ಲಿ 217 ರನ್​ಗಳಿಗೆ ಆಲೌಟ್ ಆದರೆ, ನ್ಯೂಜಿಲ್ಯಾಂಡ್ ಮೊದಲ ಇನ್ನಿಂಗ್ಸ್​ನಲ್ಲಿ 2 ವಿಕೆಟ್ ಕಳೆದುಕೊಂಡು 102 ರನ್​ಗಳಿಸಿದೆ. ಡಿವೋನ್ ಕಾನ್ವೆ 54 ಮತ್ತು ಟಾಮ್ ಲಾಥಮ್ 30 ರನ್​ಗಳಿಸಿ ವಿಕೆಟ್​ ಒಪ್ಪಿಸಿದರೆ, ವಿಲಿಯಮ್ಸನ್ ಅಜೇಯ 12 ಮತ್ತು ರಾಸ್ ಟೇಲರ್ ಖಾತೆ ತೆರೆಯದೇ ಕ್ರೀಸ್​ನಲ್ಲಿದ್ದಾರೆ.

ಇದನ್ನು ಓದಿ:ಮಹರಾಜ್ ಹ್ಯಾಟ್ರಿಕ್: 4 ವರ್ಷಗಳ ನಂತರ ವಿದೇಶದಲ್ಲಿ ಟೆಸ್ಟ್​ ಸರಣಿ ಗೆದ್ದ ದಕ್ಷಿಣ ಆಫ್ರಿಕಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.