ರಾಂಚಿ(ಜಾರ್ಖಂಡ್): ಭಾರತ ನ್ಯೂಜಿಲ್ಯಾಂಡ್ ಎದುರಿನ ಮೊದಲ ಟಿ20 ಪಂದ್ಯದಲ್ಲಿ 21 ರನ್ಗಳಿಂದ ಸೋಲನಿಭವಿಸಿತು. ಇದುವರೆಗೂ ರಾಂಚಿ ಕ್ರೀಡಾಂಗಣದಲ್ಲಿ ಸೋಲು ಕಂಡಿರದ ಬ್ಲೂ ಬಾಯ್ಸ್ ನಿನ್ನೆ ಅಂತಿಮ ಓವರ್ನ ಬೌಲಿಂಗ್ ಮತ್ತು ಬ್ಯಾಟಿಂಗ್ ವೈಫಲ್ಯ ಕಂಡು ಸಾಧಾರಣ ಗುರಿ ಮುಟ್ಟುವಲ್ಲಿ ಎಡವಿದರು. ವಾಷಿಂಗ್ಟನ್ ಸುಂದರ್(50), ಸೂರ್ಯಕುಮಾರ್ ಯಾದವ್ (47) ಮತ್ತು ನಾಯಕ ಹಾರ್ದಿಕ್ (21) ಬಿಟ್ಟರೆ ಮತ್ತಾರು ಬ್ಯಾಟಿಂಗ್ ಮಾಡದೇ ಬಾಲಂಗೋಚಿಗಳಂತೆ ಪೆವಿಲಿಯನ್ ಪರೇಡ್ ನಡೆಸಿದರು.
ಮುಳುವಾದ ಕೊನೆಯ ಓವರ್: ಬಾಂಗ್ಲ ಮತ್ತು ಲಂಕಾದ ಎದುರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಅರ್ಷದೀಪ್ ಸಿಂಗ್ ನಿನ್ನೆ ಕೊನೆಯ ಓವರ್‌ನಲ್ಲಿ ದುಬಾರಿಯಾದರು. ಪಂದ್ಯದಲ್ಲಿ ಡೆವೊನ್ ಕಾನ್ವೇ ಮತ್ತು ಡೇರಿಲ್ ಮಿಚೆಲ್ ಅವರ ವಿಕೆಟ್ ತೆಗೆಯಲು ಏಳು ಜನ ಬೌಲರ್ಗಳನ್ನು ಹಾರ್ದಿಕ್ ಆಡಿಸಿದರು. ಆರಂಭಿಕ ಮೂರು ಓವರ್ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಮಾಡಿದ ಸಿಂಗ್ ಅಂತಿಮ ಆರು ಬಾಲ್ಗಳಲ್ಲಿ ಎಡವಿದರು.
ಆರು ಬಾಲ್ಗೆ 27ರನ್ ನೀಡಿದ ಅರ್ಷದೀಪ್ ನಿನ್ನೆ 4 ಓವರ್ಗೆ 51 ರನ್ ಬಿಟ್ಟುಕೊಟ್ಟರು. ಮೊದಲ ಮೂರು ಓವರ್ಗಳಲ್ಲಿ 24 ರನ್ ಮಾತ್ರ ನೀಡಿ ಎಫೆಕ್ಟೀವ್ ಎನಿಸಿಕೊಂಡಿದ್ದರು. ಆದರೆ, ಕೊನೆಯ ಓವರ್ ಆರಂಭವೇ ನೋ ಬಾಲ್ನಿಂದ ಮಾಡಿದರು ಇದನ್ನು ಬಳಸಿಕೊಂಡ ಡೇರಿಲ್ ಮಿಚೆಲ್ ಸಿಕ್ಸ್ಗೆ ಅಟ್ಟಿದರು. ಇದರ ಜೊತೆಗೆ ಮತ್ತೆರಡು ಸಿಕ್ಸರ್, ಒಂದು ಫೋರ್ ಹಾಗೂ ನಾಲ್ಕು ಓಟಗಳನ್ನು ಮಾಡಿ ಒಟ್ಟು 27 ರನ್ ಕೊನೆ ಒಂದು ಓವರ್ನಲ್ಲೆ ಗಳಿಸಿಕೊಂಡರು.
ಸುಂದರ್ ಅದ್ಭುತ ಆಲ್ರೌಂಡ್ ಆಟ: ಒಂದೆಡೆ ತಂಡ ಕುಸಿತ ಕಂಡಿದ್ದರು ವಾಷಿಂಗ್ಟನ್ ಸುಂದರ್ ತಮ್ಮ ಬ್ಯಾಟಿಂಗ್ನಲ್ಲಿ ಕಿವೀಸ್ ಬೌಲರ್ಗಳನ್ನು ಕಾಡಿದರು. ಪಂದ್ಯದ ಕೊನೆಯ ಓವರ್ವರೆಗೂ ಹೋರಾಡಿದ ಸುಂದರ್ 28 ಎಸೆತದಲ್ಲಿ 5 ಬೌಂಡರಿ ಮತ್ತು ಮೂರು ಸಿಕ್ಸರ್ನಿಂದ 50 ರನ್ಗಳಿಸಿದ್ದರು. ಬೌಲಿಂಗ್‌ನಲ್ಲಿ 4 ಓವರ್ಗೆ ಕೇವಲ 22 ರನ್ ಬಿಟ್ಟು ಕೊಟ್ಟು 2 ವಿಕೆಟ್ ಕೂಡ ಕಬಳಿಸಿದ್ದರುಬ.
ಭಾರತಕ್ಕೆ 21 ರನ್ನ ಸೋಲು: ಹಾಗೆ ಲೆಕ್ಕ ಹಾಕಿದಲ್ಲಿ ಭಾರತಕ್ಕೆ ಕೊನೆಯ ಓವರ್ ನಿಯಂತ್ರಣ ಮಾಡಿದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗುತ್ತಿತ್ತು ಎಂದು ಹೇಳಬಹುದು. ಅರ್ಷದೀಪ್ ಕೊನೆಯ ಓವರ್‌ನಲ್ಲಿ 27 ರನ್ ಬಿಟ್ಟುಕೊಟ್ಟು ದಾಖಲೆ ನಿರ್ಮಿಸಿದ್ದಾರೆ. ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ಬೌಲರ್ ಇನಿಂಗ್ಸ್‌ನ 20ನೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ದಾಖಲೆಯ ವಿಚಾರದಲ್ಲಿ ಅರ್ಷದೀಪ್ ಅವರು ಸುರೇಶ್ ರೈನಾರನ್ನು ಹಿಂದಿಕ್ಕಿದ್ದಾರೆ. 2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 20ನೇ ಓವರ್‌ನಲ್ಲಿ ರೈನಾ 26 ರನ್ ನೀಡಿದ್ದರು.
20ನೇ ಓವರ್‌ನಲ್ಲಿ ಅತೀ ಹೆಚ್ಚು ರನ್ ನಿಡಿದ ಭಾರತೀಯರು:
27 ರನ್ - ಅರ್ಷದೀಪ್ ಸಿಂಗ್ 2023
26 ರನ್ - ಸುರೇಶ್ ರೈನಾ 2012
24 ರನ್ - ದೀಪಕ್ ಚಹಾರ್ 2022
23 ರನ್ - ಖಲೀಲ್ ಅಹ್ಮದ್ 2018
23 ರನ್ - ಹರ್ಷಲ್ ಪಟೇಲ್ 2022
ಕಳಪೆ ಬೌಲಿಂಗ್: ಪಂದ್ಯದ ನಂತರ ನಾಯಕ ಹಾರ್ದಿಕ್ ಪಾಂಡ್ಯ ಮಾತನಾಡಿ, ಟೀಂ ಇಂಡಿಯಾದ ಕಳಪೆ ಬೌಲಿಂಗ್ನಿಂದಾಗಿ ನ್ಯೂಜಿಲ್ಯಾಂಡ್ ಹೆಚ್ಚು ರನ್ ಗಳಿಸಲು ಸಾಧ್ಯವಾಯಿತು. ವಿಕೆಟ್ ಸಹ ಸ್ಪಿನ್ನರ್‌ಗಳಿಗೆ ಸಹಕಾರಿಯಾಗಿದ್ದು, ಬೌಲಿಂಗ್‌ನಲ್ಲಿ ಸಾಕಷ್ಟು ಸ್ಪಿನ್ ಆಗುತ್ತಿತ್ತು. ಈ ವಿಕೆಟ್ 177 ರನ್‌ಗಳ ಗುರಿಯನ್ನು ಎಂದು ನಾವು ಭಾವಿಸಿರಲಿಲ್ಲ. ನಾವು ಇಂದು ತುಂಬಾ ಕೆಟ್ಟದಾಗಿ ಬೌಲಿಂಗ್ ಮಾಡಿದ್ದೇವೆ ಎಂದು ಹೇಳಿದರು.
ಸುಂದರ್ ಹೊಗಳಿದ ಪಾಂಡ್ಯ: ಸುಂದರ್ ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಇದು ಅವರ ದಿನವಾಗಿತ್ತು. ಬೌಲಿಂಗ್ ಮತ್ತು ಬ್ಯಾಟಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಕ್ಷರ್ ಮತ್ತು ಸುಂದರ್ ತಂಡಕ್ಕೆ ಉತ್ತಮ ಆಲ್ರೌಂಡರ್ಗಳಾಗಿ ರೂಪುಗೊಳ್ಳುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮೊದಲ ಟಿ20: ಕಿವೀಸ್ ವಿರುದ್ಧ ಹಾರ್ದಿಕ್ ಪಡೆಗೆ 21 ರನ್ ಅಂತರದ ಸೋಲು