ETV Bharat / sports

IND vs NZ 1st T20: ಕಿವೀಸ್‌ ವಿರುದ್ಧ ಅಯ್ಯರ್​​ ಪದಾರ್ಪಣೆ ಸಾಧ್ಯತೆ, ಚಹಲ್​ ಕಮ್‌ಬ್ಯಾಕ್? - ಭಾರತ vs ನ್ಯೂಜಿಲ್ಯಾಂಡ್​

ಪ್ರವಾಸಿ ನ್ಯೂಜಿಲ್ಯಾಂಡ್​ (New Zealand Team) ವಿರುದ್ಧ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ವೆಂಕಟೇಶ್​ ಅಯ್ಯರ್ ಪದಾರ್ಪಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.

India vs New Zealand
India vs New Zealand
author img

By

Published : Nov 17, 2021, 5:29 PM IST

ಜೈಪುರ್​(ರಾಜಸ್ಥಾನ): ಐಸಿಸಿ ಟಿ20 ವಿಶ್ವಕಪ್​ ನಂತರ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಪ್ರವಾಸಿ ನ್ಯೂಜಿಲ್ಯಾಂಡ್​ ವಿರುದ್ಧದ ಟಿ20 ಸರಣಿಯಲ್ಲಿ (India vs New Zealand T20 Series) ಭಾಗಿಯಾಗಲು ಸಜ್ಜಾಗಿದೆ. ಇಂದು ಸಂಜೆ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ (Sawai Mansingh Stadium) ಉಭಯ ತಂಡಗಳ ನಡುವೆ ಮೊದಲ ಹಣಾಹಣಿ ನಡೆಯಲಿದೆ.

India vs New Zealand
ಆಲ್​ರೌಂಡರ್​ ಅಕ್ಸರ್ ಪಟೇಲ್​

ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗಾಗಿ ಟೀಂ ಇಂಡಿಯಾ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ, ಯುವ ಪ್ರತಿಭೆಗಳಿಗೆ ಮಣೆ ಹಾಕಿದೆ. ಇಂದಿನ ಪಂದ್ಯದಲ್ಲಿ ಕೆಲ ಹೊಸಬರು ಅವಕಾಶ ಗಿಟ್ಟಿಸುವ ಸಾಧ್ಯತೆ ಇದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯಾ ಸ್ಥಾನಕ್ಕಾಗಿ ವೆಂಕಟೇಶ್ ಅಯ್ಯರ್ (Venkatesh Iyer)​​ ಅವಕಾಶ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಆರ್.​ ಅಶ್ವಿನ್ ಜೊತೆ ಸ್ಪಿನ್ನರ್​ ಆಗಿ ಯಜುವೇಂದ್ರ ಚಹಲ್​ ತಂಡಕ್ಕೆ ಕಮ್​ಬ್ಯಾಕ್​ ಮಾಡಬಹುದು. ಈ ಪ್ಲೇಯರ್ಸ್ ಈಗಾಗಲೇ ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ಮಿಂಚು ಹರಿಸಿರುವ ಕಾರಣ ಅವಕಾಶ ಸಿಗುವ ಸಂಭವ ಹೆಚ್ಚಿದೆ.

ಇದನ್ನೂ ಓದಿ: ದ್ರಾವಿಡ್​ ಬ್ಯಾಟಿಂಗ್​​ನಂತೆಯೇ ಅವರ ಕೋಚಿಂಗ್ ಕೂಡ ಸುರಕ್ಷಿತ ಮತ್ತ ಸದೃಢವಾಗಿರಲಿದೆ : ಗವಾಸ್ಕರ್​

ಇಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಜೊತೆಗೆ ವೆಂಕಟೇಶ್ ಅಯ್ಯರ್ ಆರಂಭಿಕರಾಗಿ ಕಣಕ್ಕಿಳಿದರೆ, ಕನ್ನಡಿಗ ರಾಹುಲ್​ ಮೂರನೇ ಕ್ರಮಾಂಕದಲ್ಲಿ ಬ್ಯಾಟ್​ ಬೀಸುವರು. ನಂತರದ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್​​ ಹಾಗೂ ಶ್ರೇಯಸ್​ ಅಯ್ಯರ್​ 4 ಹಾಗೂ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ವಿಕೆಟ್ ಕೀಪರ್​ಗಳಾಗಿರುವ ರಿಷಭ್ ಪಂತ್ ಹಾಗೂ ಇಶನ್ ಕಿಶನ್ ನಡುವೆ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಮೂಡಿದೆ.

India vs New Zealand
ಕ್ಯಾಪ್ಟನ್ ರೋಹಿತ್ ಜೊತೆ ವೆಂಕಟೇಶ್​ ಅಯ್ಯರ್​

ಉಳಿದಂತೆ ಬೌಲಿಂಗ್​ ವಿಭಾಗದಲ್ಲಿ ಯಜುವೇಂದ್ರ ಚಹಲ್​​ ಹಾಗೂ ಅಕ್ಸರ್ ಪಟೇಲ್ ನಡುವೆ ಸ್ಪರ್ಧೆ ಇದ್ದು, ಐಪಿಎಲ್​ನಲ್ಲಿ ಮಿಂಚಿರುವ ಚಹಲ್​ಗೆ ಮತ್ತೊಮ್ಮೆ ಛಾನ್ಸ್‌ ಸಿಗುವ ಸಾಧ್ಯತೆ ಇದೆ. ಆರ್​.ಅಶ್ವಿನ್​​ ಕಣಕ್ಕಿಳಿಯುವುದು ಬಹುತೇಕ ಖಚಿತ. ಉಳಿದಂತೆ ಮೊಹಮ್ಮದ್​ ಸಿರಾಜ್​, ಭುವನೇಶ್ವರ್ ಕುಮಾರ್ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳಬಹುದು. ಇದರ ಜೊತೆಗೆ ತಂಡಕ್ಕೆ ಆಯ್ಕೆಯಾಗಿರುವ ಅವೇಶ್ ಖಾನ್ ಹಾಗೂ ಹರ್ಷಲ್​ ಪಟೇಲ್ ನಡುವೆಯೂ ಪೈಪೋಟಿ ಇದೆ.

ಟೀಂ ಇಂಡಿಯಾ: ಸಂಭವನೀಯ ಬಳಗ

ರೋಹಿತ್ ಶರ್ಮಾ(ಕ್ಯಾಪ್ಟನ್​), ವೆಂಕಟೇಶ್ ಅಯ್ಯರ್​, ಕೆ.ಎಲ್.ರಾಹುಲ್​, ಸೂರ್ಯಕುಮಾರ್ ಯಾದವ್​, ಶ್ರೇಯಸ್ ಅಯ್ಯರ್​, ರಿಷಭ್ ಪಂತ್(ವಿ,ಕೀ)​, ಅಕ್ಸರ್ ಪಟೇಲ್​/ಯಜುವೇಂದ್ರ ಚಹಲ್, ಆರ್​.ಅಶ್ವಿನ್​, ಭುವನೇಶ್ವರ್ ಕುಮಾರ್​, ಮೊಹಮ್ಮದ್ ಸಿರಾಜ್​/ ಅವೇಶ್ ಖಾನ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.