ETV Bharat / sports

ರೋಹಿತ್ ​- ರಾಹುಲ್​ 120ರನ್​ಗಳ ಜೊತೆಯಾಟ​..10 ವರ್ಷದ ನಂತರ ಈ ದಾಖಲೆ ಬರೆದ ಆರಂಭಿಕ ಜೋಡಿ!

ಇಂಗ್ಲೆಂಡ್​ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಜೋಡಿ ಹೊಸದೊಂದು ದಾಖಲೆ ನಿರ್ಮಾಣ ಮಾಡಿದೆ.

India vs England
India vs England
author img

By

Published : Aug 12, 2021, 8:42 PM IST

Updated : Aug 12, 2021, 8:51 PM IST

ಲಾರ್ಡ್ಸ್​​(ಲಂಡನ್​): ಆತಿಥೇಯ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಲಾರ್ಡ್ಸ್​ ಮೈದಾನದಲ್ಲಿ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಭಾಗಿಯಾಗಿದ್ದು, ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿರುವ ಟೀಂ ಇಂಡಿಯಾ ಉತ್ತಮ ಆರಂಭ ಪಡೆದುಕೊಂಡಿದೆ. ಮಳೆಯಿಂದಾಗಿ ಪಂದ್ಯ ಕೆಲ ಹೊತ್ತು ತಡವಾಗಿ ಆರಂಭಗೊಂಡಿದ್ದರೂ ತಂಡಕ್ಕೆ ಆರಂಭಿಕರಾದ ರೋಹಿತ್ ​ - ರಾಹುಲ್​ ಬದ್ರ ಬುನಾದಿ ಹಾಕಿದರು. ಈ ಜೋಡಿ ಮೊದಲ ವಿಕೆಟ್​ನಷ್ಟಕ್ಕೆ 120+ರನ್​ಗಳ ಜೊತೆಯಾಟವಾಡಿದೆ. ಈ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾರೆ.

Rohit Sharma & KL Rahul
ರೋಹಿತ್​-ರಾಹುಲ್​ ಆರಂಭಿಕ ಜೋಡಿ

ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾದ ಆರಂಭಿಕರಾದ ರೋಹಿತ್​(83), ರಾಹುಲ್​(35 ಅಜೇಯ) ಉತ್ತಮ ಆಟವಾಡಿದರು. ಜೊತೆಗೆ 120+ ರನ್​ಗಳಿಕೆ ಮಾಡಿದರು. ಈ ಮೂಲಕ 2010ರ ನಂತರ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ನ್ಯೂಜಿಲ್ಯಾಂಡ್​ ಹಾಗೂ ಆಸ್ಟ್ರೇಲಿಯಾದಲ್ಲಿ (ಸಾಗರೋತ್ತರ ದೇಶ) ಆರಂಭಿಕರಾಗಿ ಗಳಿಕೆ ಮಾಡಿರುವ ಮೊದಲ ಶತಕದಾಟವಾಗಿದೆ. ಈ ಹಿಂದೆ 2010ರ ಡಿಸೆಂಬರ್​ ತಿಂಗಳಲ್ಲಿ ಸೆಹ್ವಾಗ್​ ಹಾಗೂ ಗಂಭೀರ್​ ಜೋಡಿ ಆಫ್ರಿಕಾ ವಿರುದ್ಧ ಸೆಂಚೂರಿಯನ್​ನಲ್ಲಿ 137ರನ್​ಗಳ ಜೊತೆಯಾಟವಾಡಿತ್ತು. ಇದಾದ ಬಳಿಕ ಯಾವುದೇ ಆರಂಭಿಕ ಜೋಡಿ ಶತಕದಾಟ ಆಡಿರಲಿಲ್ಲ.

Rohit Sharma
ರೋಹಿತ್​ ಶರ್ಮಾ ಆರ್ಭಟದಾಟ

ಇಂದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದ ರೋಹಿತ್​ ಶರ್ಮಾ 13ನೇ ಅರ್ಧಶತಕ ಸಿಡಿಸಿ ಮಿಂಚಿದರು. 7 ಇನ್ನಿಂಗ್ಸ್​ಗಳ ನಂತರ ಇಂಗ್ಲೆಂಡ್​ ವಿರುದ್ಧ ಮೂಡಿ ಬಂದಿರುವ ಅರ್ಧಶತಕ ಇದಾಗಿದೆ. ಇದೇ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದ ಆಲ್​​ರೌಂಡರ್​​ ಸ್ಯಾಮ್​ ಕರ್ರನ್​ ಓವರ್​ನಲ್ಲೇ 4 ಬೌಂಡರಿ ಸಿಡಿಸಿ ಗಮನ ಸೆಳೆದರು. ಇದರ ಜೊತೆಗೆ 2021ರಲ್ಲಿ ರೋಹಿತ್​ ಶರ್ಮಾ ಟೆಸ್ಟ್​ನಲ್ಲಿ 600ರನ್​ಗಳಿಕೆ ಮಾಡಿರುವ ಸಾಧನೆ ಸಹ ಮಾಡಿದರು.

KL Rahul
ರಾಹುಲ್​ ಜವಾಬ್ದಾರಿಯುತ ಬ್ಯಾಟಿಂಗ್​

ಇದನ್ನೂ ಓದಿರಿ: 51ನೇ ವಯಸ್ಸಿನಲ್ಲೂ ಸಖತ್​ ಹಾಟ್​​.. ಹಾಲಿವುಡ್ ನಟಿಯ ಫಿಟ್ನೆಸ್​​ ಮಂತ್ರವಿದು!

ರೋಹಿತ್-ರಾಹುಲ್ ಹೆಸರಿನಲ್ಲಿ ವಿಶಿಷ್ಟ ದಾಖಲೆ

ಇಂಗ್ಲೆಂಡ್​ ವಿರುದ್ಧದ 2ನೇ ಟೆಸ್ಟ್​ ಪಂದ್ಯದಲ್ಲಿ ರೋಹಿತ್​-ರಾಹುಲ್ ಜೋಡಿ 20+ ಓವರ್​ಗಳ ಬ್ಯಾಟ್ ಮಾಡಿದರು. ಈ ವರ್ಷದ 9 ಇನ್ನಿಂಗ್ಸ್​ಗಳ ಪೈಕಿ 5ನೇ ಸಲ ಭಾರತೀಯ ಆರಂಭಿಕ ಜೋಡಿ 20+ ಓವರ್​ಗಳ ಬ್ಯಾಟಿಂಗ್​ ಮಾಡಿದೆ. 2011ರ ಡಿಸೆಂಬರ್​​ನಿಂದ 2020ರವರೆಗೆ ಯಾವುದೇ ಆರಂಭಿಕ ಜೋಡಿ 20+ ಓವರ್​ ಬ್ಯಾಟಿಂಗ್ ಮಾಡಿರಲಿಲ್ಲ.

2 ರನ್​ಗಳಿಂದ ದಾಖಲೆ ತಪ್ಪಿಸಿಕೊಂಡ ರಾಹುಲ್​-ರೋಹಿತ್ ಜೋಡಿ

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್​​ ಪಂದ್ಯದಲ್ಲಿ ಮೊದಲ ವಿಕೆಟ್​ನಷ್ಟಕ್ಕೆ ರಾಹುಲ್​-ರೋಹಿತ್ ಜೋಡಿ 126ರನ್​ಗಳಿಕೆ ಮಾಡಿತು. ಇಂಗ್ಲೆಂಡ್​ನಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ನಂತರ ಗಳಿಕೆ ಮಾಡಿರುವ ಎರಡನೇ ಗರಿಷ್ಠ ರನ್​ ಇದಾಗಿದೆ. ಈ ಹಿಂದೆ ಆಸ್ಟ್ರೇಲಿಯಾದ ಮೈಕೆಲ್ ಸ್ಲೇಟರ್ ಮತ್ತು ಮಾರ್ಕ್ ಟೇಲರ್ 1993 ರ ಓಲ್ಡ್ ಟ್ರಾಫರ್ಡ್ ಟೆಸ್ಟ್​ನಲ್ಲಿ 128ರನ್​ಗಳ ಜೊತೆಯಾಟ ಆಡಿದ್ದರು.

Last Updated : Aug 12, 2021, 8:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.