ಚಿತ್ತಗಾಂಗ್(ಬಾಂಗ್ಲಾದೇಶ): ಶತಕದ ಸನಿಹದಲ್ಲಿ ಎಡವಿದ ಚೇತೇಶ್ವರ ಪೂಜಾರ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕದ ಬಲದಿಂದ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ನ 2ನೇ ದಿನದಾಟದಲ್ಲಿ ಭಾರತ ಮೊದಲ ಇನಿಂಗ್ಸ್ನಲ್ಲಿ 404 ರನ್ಗಳಿಗೆ ಆಲೌಟ್ ಆಯಿತು. ಇನಿಂಗ್ಸ್ ಆರಂಭಿಸಿರುವ ಬಾಂಗ್ಲಾ ಮೊಹಮದ್ ಸಿರಾಜ್ರ ಪ್ರಥಮ ಎಸೆತದಲ್ಲೇ ಆರಂಭಿಕ ನಜ್ಮುಲ್ ಹೊಸೈನ್ ಶ್ಯಾಂಟೋರ ವಿಕೆಟ್ ಕಳೆದುಕೊಂಡಿದೆ.
ಮೊದಲ ದಿನದಲ್ಲಿ 6 ವಿಕೆಟ್ ಕಳೆದುಕೊಂಡು 278 ರನ್ ಗಳಿಸಿದ್ದ ಭಾರತದ 2ನೇ ದಿನದಾಟದ ಆರಂಭ ಉತ್ತಮವಾಗಿರಲಿಲ್ಲ. 82 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಎಬೊದತ್ಗೆ ವಿಕೆಟ್ ನೀಡಿ ನಿರಾಸೆಯಲ್ಲಿ ಪೆವಿಲಿಯನ್ ಸೇರಿದರು.
-
That'll be Tea on Day 2 of the 1st Test.
— BCCI (@BCCI) December 15, 2022 " class="align-text-top noRightClick twitterSection" data="
Siraj and Umesh get a wicket each as Bangladesh are 37/2, trail #TeamIndia (404) by 367 runs.
Scorecard - https://t.co/GUHODOYOh9 #BANvIND pic.twitter.com/jwof6GyQc0
">That'll be Tea on Day 2 of the 1st Test.
— BCCI (@BCCI) December 15, 2022
Siraj and Umesh get a wicket each as Bangladesh are 37/2, trail #TeamIndia (404) by 367 runs.
Scorecard - https://t.co/GUHODOYOh9 #BANvIND pic.twitter.com/jwof6GyQc0That'll be Tea on Day 2 of the 1st Test.
— BCCI (@BCCI) December 15, 2022
Siraj and Umesh get a wicket each as Bangladesh are 37/2, trail #TeamIndia (404) by 367 runs.
Scorecard - https://t.co/GUHODOYOh9 #BANvIND pic.twitter.com/jwof6GyQc0
ಸ್ಪಿನ್ನರ್ಗಳ ರನ್ ಜೊತೆಯಾಟ: ಶ್ರೇಯಸ್ ಬಳಿಕ ಮೈದಾನಕ್ಕಿಳಿದ ಸ್ಪಿನ್ನರ್ ಕುಲದೀಪ್ ಯಾದವ್, ಆರ್. ಅಶ್ವಿನ್ ಜೊತೆ ಸೇರಿಕೊಂಡು 92 ರನ್ಗಳ ಭರ್ಜರಿ ಜೊತೆಯಾಟವಾಡಿ ಮಿಂಚಿದರು. ಅಶ್ವಿನ್ (58) ಅರ್ಧಶತಕ ಬಾರಿಸಿದರೆ, ಕುಲದೀಪ್ ಯಾದವ್ 40 ಗಳಿಸಿ ಬಾಂಗ್ಲಾ ಬೌಲರ್ಗಳಿಗೆ ಪ್ರತಿರೋಧ ಒಡ್ಡಿದರು. ಕೊನೆಯಲ್ಲಿ ಉಮೇಶ್ ಯಾದವ್ 15 ರನ್ ಬಾರಿಸಿ ಔಟಾಗದೇ ಉಳಿದರು. ಬಾಂಗ್ಲಾದೇಶ ಪರವಾಗಿ ತೈಜುಲ್ ಇಸ್ಲಾಂ, ಮೆಹದಿ ಹಸನ್ ಮಿರಾಜ್ ತಲಾ 4 ವಿಕೆಟ್ ಉರುಳಿಸಿದರೆ, ಎಬೊದತ್, ಖಲೀದ್ ಅಹ್ಮದ್ ತಲಾ 1 ವಿಕೆಟ್ ಪಡೆದರು.
ಬಾಂಗ್ಲಾದೇಶ ಮೊದಲ ಇನಿಂಗ್ಸ್: 404 ರನ್ಗಳ ಗುರಿ ಪಡೆದ ಬಾಂಗ್ಲಾದೇಶ ಮೊದಲ ಇನಿಂಗ್ಸ್ ಆರಂಭಿಸಿದ್ದು, 37 ರನ್ಗೆ 2 ವಿಕೆಟ್ ಕಳೆದುಕೊಂಡಿದೆ. ಮೊಹಮದ್ ಸಿರಾಜ್ ಎಸೆದ ಮೊದಲ ಓವರಿನ ಮೊದಲ ಎಸೆತದಲ್ಲೇ ಆರಂಭಿಕ ನಜ್ಮುಲ್ ಹೊಸೈನ್ ಶ್ಯಾಂಟೊ ಸೊನ್ನೆಗೆ ಡಕೌಟ್ ಆದರು. ಬಳಿಕ ಯಾಸೀರ್ ಅಲಿ ಉಮೇಶ್ ದಾಳಿಗೆ 4 ರನ್ಗೆ ಪೆವಿಲಿಯನ್ ಸೇರಿದ್ದಾರೆ.
ಓದಿ: BAN vs IND 1st Test: ಶತಕದ ಹೊಸ್ತಿಲಲ್ಲಿ ಎಡವಿದ ಪೂಜಾರ, ಅಯ್ಯರ್ ಅರ್ಧಶತಕ