ETV Bharat / sports

ಟಿ20: ಆಸ್ಟ್ರೇಲಿಯಾಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ; ಸರಣಿ ಗೆಲುವಿನತ್ತ ಭಾರತದ ಚಿತ್ತ

India vs Australia 3rd T20I: ವಿಶ್ವಕಪ್‌ ನಿರಾಸೆಯಿಂದ ಹೊರಬಂದಿರುವ ಟೀಮ್ ಇಂಡಿಯಾ ಮೊದಲೆರಡು ಟಿ20 ಪಂದ್ಯಗಳನ್ನು ಗೆದ್ದುಕೊಂಡಿದೆ. ಇದೇ ವೇಗವನ್ನು ಕಾಯ್ದುಕೊಂಡು ಎರಡು ಪಂದ್ಯ ಬಾಕಿ ಇರುವಂತೆಯೇ ಸರಣಿ ಜಯಿಸುವುದು ತಂಡದ ಲೆಕ್ಕಾಚಾರವಾಗಿದೆ. ಇನ್ನೊಂದೆಡೆ, ಆಸೀಸ್ ತಂಡ ಇಂದಿನ ಪಂದ್ಯ ಗೆದ್ದು ಸರಣಿ ಜೀವಂತ ಉಳಿಸಿಕೊಳ್ಳಲೇಬೇಕಿದೆ.

India vs Australia 3rd T20I  India eyeing the series against Australia  Barsapara Cricket Stadium Guwahati  Australia tour of India 2023  ಮಾಡು ಇಲ್ಲವೇ ಮಡಿ ಪಂದ್ಯ  ಸರಣಿ ಮೇಲೆ ಕಣ್ಣಿಟ್ಟ ಭಾರತ  ಟಿ20ಯಲ್ಲಿ ಗೆದ್ದು ಉತ್ಸಾಹ  ಸರಣಿಯನ್ನು ವಶಪಡಿಸಿಕೊಳ್ಳುವುದು ಸೂರ್ಯ ಬಳಗ  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ  ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ  ಟೀಂ ಇಂಡಿಯಾ ಸರಣಿಯ ನಿರ್ಣಾಯಕ ಕದನ  ಉತ್ಸಾಹದಲ್ಲಿ ಭಾರತ ತಂಡ
ಆಸೀಸ್​ಗೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ, ಸರಣಿ ಮೇಲೆ ಕಣ್ಣಿಟ್ಟ ಭಾರತ
author img

By ETV Bharat Karnataka Team

Published : Nov 28, 2023, 10:54 AM IST

ಗುವಾಹಟಿ(ಅಸ್ಸಾಂ): ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಕ್ರಿಕೆಟ್ ಸರಣಿಯ 3ನೇ ಪಂದ್ಯ ಇಲ್ಲಿನ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಸಂಜೆ 7 ಗಂಟೆಗೆ ನಡೆಯಲಿದೆ. ಎರಡು ಪಂದ್ಯಗಳು ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳುವ ಗುರಿ ಹೊಂದಿರುವ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಬಳಗ ಆಸ್ಟ್ರೇಲಿಯಾ ವಿರುದ್ಧದ ಹೊಸ ಹೋರಾಟಕ್ಕೆ ಸಜ್ಜಾಗಿದೆ. ಈ ಪಂದ್ಯದ ಗೆಲುವಿನೊಂದಿಗೆ ಭಾರತ ಸರಣಿ ವಶಪಡಿಸಿಕೊಳ್ಳುತ್ತಾ ಅಥವಾ ಆಸ್ಟ್ರೇಲಿಯಾ ಪುಟಿದೇಳುತ್ತಾ ಎಂಬುದು ಕುತೂಹಲಕಾರಿಯಾಗಿದೆ. ಮೊದಲ ಪಂದ್ಯವನ್ನು 2 ವಿಕೆಟ್‌ಗಳಿಂದ ಗೆದ್ದ ಭಾರತ, ಎರಡನೇ ಟಿ20ಯಲ್ಲಿ 44 ರನ್‌ಗಳ ಜಯ ಸಾಧಿಸಿದೆ.

ಸರಣಿ ವಿಜಯದ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಆತ್ಮವಿಶ್ವಾಸದಿಂದ ಕಣಕ್ಕಿಳಿಯುತ್ತಿದೆ. ಇನ್ನೊಮ್ಮೆ ಬ್ಯಾಟರ್‌ಗಳು ಸ್ಫೋಟಿಸಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ಬಿರುಸಿನ ಆಟವಾಡಿದ ಭಾರತ 36 ಬೌಂಡರಿ ಹಾಗೂ 24 ಸಿಕ್ಸರ್‌ಗಳನ್ನು ಬಾರಿಸಿತ್ತು. ಓಪನರ್ ಜೈಸ್ವಾಲ್ ಅವರ ಮಿಂಚಿನ ವೇಗ ಆತಿಥೇಯ ತಂಡಕ್ಕೆ ನಡುಕ ಹುಟ್ಟಿಸಿದೆ. ಎರಡನೇ ಟಿ20ಯಲ್ಲಿ ಧನಾಧನ್ ಇನ್ನಿಂಗ್ಸ್ ಆಡಿದ ಜೈಸ್ವಾಲ್ ಕೇವಲ 24 ಎಸೆತಗಳಲ್ಲಿ ಅರ್ಧಶತಕ ದಾಖಲಿಸಿದ್ದರು. ಆ ಪಂದ್ಯದಲ್ಲಿ ಇಶಾನ್ ಕಿಶನ್ ಹಾಗೂ ಇನ್ನೋರ್ವ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್ ಕೂಡ ಅರ್ಧಶತಕ ಸಿಡಿಸಿ ತಮ್ಮ ಫಾರ್ಮ್ ತೋರಿದರು.

ಕೊನೆಯಲ್ಲಿ ಮಿಂಚಿದ ರಿಂಕು ಸಿಂಗ್ ಮತ್ತೊಮ್ಮೆ ಫಿನಿಶರ್ ಆಗಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ರಿಂಕು ಕ್ರಮೇಣ ಆರನೇ ಸ್ಥಾನದಲ್ಲಿ ಸ್ಥಿರವಾಗುತ್ತಿದ್ದಾರೆ. ಆದರೆ ಐದನೇ ಕ್ರಮಾಂಕದಲ್ಲಿ ಆಡುತ್ತಿರುವ ತಿಲಕ್ ಪರಿಸ್ಥಿತಿ ಸ್ವಲ್ಪ ಜಟಿಲವಾಗಿದೆ. ಮೊದಲೆರಡು ಟಿ20ಯಲ್ಲಿ ಕೇವಲ 12 ಎಸೆತಗಳನ್ನು ಅವರು ಎದುರಿಸಿದ್ದರು. ಮೊದಲ ಪಂದ್ಯದಲ್ಲಿ 10 ಎಸೆತಗಳಲ್ಲಿ 12 ರನ್ ಗಳಿಸಿದ ಅವರು, ರಿಂಕು ಅವರಿಗಿಂತ ಮುಂದೆ ಬಂದಿದ್ದರಿಂದ ಎರಡನೇ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳನ್ನು ಮಾತ್ರ ಆಡುವ ಅವಕಾಶ ಪಡೆದರು. ಸರಣಿಯಲ್ಲಿ ತಿಲಕ್ ಅವರ ಸಾಮರ್ಥ್ಯ ಸಾಬೀತುಪಡಿಸಲು ಇದು ಕೊನೆಯ ಅವಕಾಶವಾಗಿದೆ. ಏಕೆಂದರೆ ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆಗ ತಿಲಕ್ ಅಂತಿಮ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.

ಈ ಪಂದ್ಯದಲ್ಲಿ ಸೂರ್ಯಕುಮಾರ್ ಬ್ಯಾಟಿಂಗ್ ಕ್ರಮಾಂಕದಲ್ಲಿ ಕೆಳಗಿಳಿಯುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ಅಂತಿಮ ತಂಡದಲ್ಲಿ ಭಾರತ ಯಾವುದೇ ಬದಲಾವಣೆ ಮಾಡದಿರಬಹುದು. ಎರಡನೇ ಪಂದ್ಯ ವೇಳೆ ಬೌಲಿಂಗ್​ನಲ್ಲಿ ಬೌಲರ್‌ಗಳು ಚೇತರಿಸಿಕೊಂಡಿದ್ದರು. ಮೊದಲ ಪಂದ್ಯಕ್ಕೆ ಹೋಲಿಸಿದರೆ ಬೌಂಡರಿಗಳ ಸಂಖ್ಯೆಯನ್ನು ಬೌಲರ್‌ಗಳು ತಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯ್ ಉತ್ತಮ ಬೌಲಿಂಗ್ ಮಾಡಿದ್ದಾರೆ. ಆದರೆ, ಎರಡು ಪಂದ್ಯಗಳಲ್ಲಿ 87 ರನ್ ಗಳಿಸಿ ಕೇವಲ ಒಂದು ವಿಕೆಟ್ ಪಡೆದಿರುವ ಎಡಗೈ ವೇಗಿ ಅರ್ಷದೀಪ್ ಸಿಂಗ್ ಸುಧಾರಿಸಿಕೊಳ್ಳಬೇಕಿದೆ. ಪ್ರಸಿದ್ಧ್‌ ಕೃಷ್ಣ ಮತ್ತು ಮುಖೇಶ್ ಕೂಡ ಕರಾರುವಾಕ್ ಬೌಲಿಂಗ್ ಮಾಡಬೇಕಾಗಿದೆ.

ಪುಟಿದೇಳುತ್ತಾ ಆಸ್ಟ್ರೇಲಿಯಾ?: ಇಂದಿನ ಪಂದ್ಯ ಗೆದ್ದು ಸರಣಿ ಭರವಸೆಯನ್ನು ಜೀವಂತವಾಗಿರಿಸಿಕೊಳ್ಳಲು ಆಸ್ಟ್ರೇಲಿಯಾಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯ. ಕಳೆದ ಪಂದ್ಯದಲ್ಲಿ ಆಡಿದ ಸ್ಟಿನಿಸ್ ಮತ್ತು ಟಿಮ್ ಡೇವಿಡ್ ಫಾರ್ಮ್‌ನಲ್ಲಿ ಉಳಿಯುವುದು ತಂಡಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಮ್ಯಾಕ್ಸ್‌ವೆಲ್ ಅವರದೇ ಶೈಲಿಯಲ್ಲಿ ಆಡಬೇಕು ಎಂಬುದು ತಂಡದ ಆಶಯ. ಆರಂಭಿಕರಾದ ಸ್ಟೀವ್ ಸ್ಮಿತ್ ಮತ್ತು ಮ್ಯಾಥ್ಯೂ ಶಾರ್ಟ್ ಅವರಿಂದ ತಂಡವು ಉತ್ತಮ ಆರಂಭವನ್ನು ನಿರೀಕ್ಷಿಸುತ್ತಿದೆ. ತಂಡದ ಬೌಲರ್‌ಗಳ ಪ್ರದರ್ಶನ ಸುಧಾರಿಸಬೇಕಿದೆ. ಎರಡನೇ ಟಿ20ಯಲ್ಲಿ ಅತಿ ಹೆಚ್ಚು ರನ್​ಗಳನ್ನು ನೀಡಿದ ವೇಗಿ ಅಬಾಟ್ ಬದಲಿಗೆ ಬೆಹ್ರೆಂಡಾರ್ಫ್ ಆಸೀಸ್ ತಂಡ ಸೇರಬಹುದು.

ಪಿಚ್​ ಹೇಗಿದೆ?: ಗುವಾಹಟಿಯಲ್ಲಿ ಇದುವರೆಗೆ ಮೂರು ಟಿ20 ಪಂದ್ಯಗಳು ಮಾತ್ರ ನಡೆದಿವೆ. ಅದರಲ್ಲಿ ಒಂದು ಪಂದ್ಯ (ಭಾರತ ಮತ್ತು ಶ್ರೀಲಂಕಾ) ಮಳೆಯಿಂದಾಗಿ ರದ್ದಾಗಿದೆ. ಪೂರ್ಣಗೊಂಡ ಎರಡು ಪಂದ್ಯಗಳು ಸಂಪೂರ್ಣವಾಗಿ ವಿಭಿನ್ನವಾಗಿ ನಡೆದವು. 2017ರಲ್ಲಿ ಬೌಲಿಂಗ್‌ಸ್ನೇಹಿ ಪಿಚ್‌ನಲ್ಲಿ ಬೆಹ್ರೆಂಡಾರ್ಫ್ ಅವರ ಸ್ವಿಂಗ್ ಬೌಲಿಂಗ್ ಭಾರತದ ಅಗ್ರ ಕ್ರಮಾಂಕವನ್ನು ಹಾನಿಗೊಳಿಸಿದ ನಂತರ ಆಸೀಸ್ 8 ವಿಕೆಟ್‌ಗಳಿಂದ ಗೆದ್ದಿತು. ಐದು ವರ್ಷಗಳ ನಂತರ ರನ್​ಗಳ ಮಳೆ ಸುರಿದಿದ್ದ ಪಂದ್ಯದಲ್ಲಿ ಭಾರತ 16 ರನ್​ಗಳಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿತು. ಆ ಪಂದ್ಯದಲ್ಲಿ ಒಟ್ಟು 458 ರನ್ ಗಳಿಸಲಾಗಿತ್ತು. ಪ್ರಸ್ತುತ ಮೂರನೇ ಟಿ20ಗೆ ಮಳೆಯ ಭೀತಿ ಇಲ್ಲ ಎಂದು ವರದಿಗಳು ತಿಳಿಸಿವೆ.

ಇದನ್ನೂ ಓದಿ: ಹಾರ್ದಿಕ್​ ಪಾಂಡ್ಯರನ್ನ ಮರಳಿ ಮನೆಗೆ ಸ್ವಾಗತಿಸಲು ನಾವು ಉತ್ಸುಕರಾಗಿದ್ದೇವೆ : ನೀತಾ ಅಂಬಾನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.