ETV Bharat / sports

ಭಾರತ - ವೆಸ್ಟ್​ ಇಂಡೀಸ್​​ ಕ್ರಿಕೆಟ್​ ಸರಣಿ ವೇಳಾಪಟ್ಟಿ ಪ್ರಕಟ: ಜುಲೈ 22ರಿಂದ ಸರಣಿ; USAನಲ್ಲಿ 2 ಟಿ20 ಪಂದ್ಯ

ಮುಂದಿನ ತಿಂಗಳು ಟೀಂ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕಾಗಿ ಬಿಸಿಸಿಐ ವೇಳಾಪಟ್ಟಿ ಪ್ರಕಟಿಸಿದೆ.

India tour of west indies schedule announced

author img

By

Published : Jun 2, 2022, 6:54 PM IST

ಮುಂಬೈ: ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​ ವಿರುದ್ಧದ ಟಿ-20 ಸರಣಿ ಬೆನ್ನಲ್ಲೇ ಟೀಂ ಇಂಡಿಯಾ ವೆಸ್ಟ್ ಇಂಡೀಸ್​ ವಿರುದ್ಧ ಕ್ರಿಕೆಟ್ ಸರಣಿ ಆಡಲಿದ್ದು, ಅದಕ್ಕಾಗಿ ಭಾರತೀಯ ಕ್ರಿಕೆಟ್ ಮಂಡಳಿ ವೇಳಾಪಟ್ಟಿ ಪ್ರಕಟಗೊಳಿಸಿದೆ. ಅಮೆರಿಕದಲ್ಲಿ ಕ್ರಿಕೆಟ್ ಪರಿಚಯಿಸುವ ಉದ್ದೇಶದಿಂದ ಎರಡು ಟಿ-20 ಪಂದ್ಯಗಳು ಯುಎಎಸ್​​ನಲ್ಲಿ ಆಯೋಜನೆಗೊಂಡಿವೆ.

ವೆಸ್ಟ್​ ಇಂಡೀಸ್ ವಿರುದ್ಧ ಐದು ಟಿ-20 ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳ ಸರಣಿ ನಡೆಯಲಿದ್ದು, ಜುಲೈ 22ರಿಂದ ಪಂದ್ಯಗಳು ಆಯೋಜನೆಗೊಳ್ಳಲಿವೆ. ಇಂಗ್ಲೆಂಡ್​ ವಿರುದ್ಧದ ಫೈನಲ್ ಟೆಸ್ಟ್ ಪಂದ್ಯ ಮುಗಿಯುತ್ತಿದ್ದಂತೆ ಭಾರತ ನೇರವಾಗಿ ಕೆರಿಬಿಯನ್​ ನಾಡಿಗೆ ಪ್ರವಾಸ ಕೈಗೊಳ್ಳಲಿದೆ.

ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನ ಟ್ರಿನಿಡಾಡ್​, ಟೊಬಾಗೊ ಮತ್ತು ಸೇಂಟ್​​ ಕಿಟ್ಸ್​​ ನೆವಿಸ್​​ನಲ್ಲಿ ಆಯೋಜನೆ ಮಾಡಲು ನಿರ್ಧರಿಸಲಾಗಿದ್ದು, ಎರಡು ಟಿ-20 ಪಂದ್ಯಗಳು ಅಮೆರಿಕದ ಫ್ಲೋರಿಡಾದಲ್ಲಿ ನಡೆಯಲಿವೆ. ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಜುಲೈ 22,24 ಮತ್ತು 27ರಂದು ನಡೆಯಲಿದ್ದು, ಇದಾದ ಬಳಿಕ ಟಿ- 20 ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಊಹಾಪೋಹಕ್ಕೆ ತೆರೆ ಎಳೆದ ಬಿಸಿಸಿಐ ಬಾಸ್​.. ಜೀವನದ ಹೊಸ ನಿರ್ಧಾರ ಪ್ರಕಟಿಸಿದ ದಾದಾ

ಮೊದಲ ಟಿ20 ಪಂದ್ಯ ಜುಲೈ 29ರಂದು ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದಾದ ಬಳಿಕ ಆಗಸ್ಟ್​​ 1 ಮತ್ತು 2ರಂದು ಸೇಂಟ್​ ಕಿರ್ಟ್ಸ್​ ಪಾರ್ಕ್​ನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ಉಳಿದಂತೆ ಅಮೆರಿಕದಲ್ಲಿ ಕ್ರಿಕೆಟ್​​ ಪರಿಚಯಿಸುವ ಉದ್ದೇಶದಿಂದ ಆಗಸ್ಟ್​ 6 ಮತ್ತು 7ರಂದು ಫ್ಲೋರಿಡಾದಲ್ಲಿ ಕೊನೆಯ ಎರಡು ಟಿ20 ಪಂದ್ಯ ಆಯೋಜನೆಗೊಂಡಿವೆ.

ವೇಳಾಪಟ್ಟಿ ಇಂತಿದೆ: ಏಕದಿನ ಸರಣಿ: 1ನೇ ODI ಜುಲೈ 22, 2ನೇ ODI ಜುಲೈ 24, 3ನೇ ODI ಜುಲೈ 27 ಸಂಜೆ 7ರಿಂದ ಎಲ್ಲ ಪಂದ್ಯಗಳು ಪ್ರಾರಂಭಗೊಳ್ಳಲಿವೆ.

ಟಿ20 ಸರಣಿಗಳ ವೇಳಾಪಟ್ಟಿ; 1 ನೇ T20I ಜುಲೈ 29, 2 ನೇ T20I ಆಗಸ್ಟ್ 1, 3 ನೇ T20I ಆಗಸ್ಟ್ 2, 4ನೇ T20I ಆಗಸ್ಟ್ 6, 5 ನೇ T20I ಆಗಸ್ಟ್ 7 ಎಲ್ಲ ಪಂದ್ಯಗಳು ರಾತ್ರಿ 8 ಗಂಟೆಗೆ ನಡೆಯಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.