ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮೊಹಮ್ಮದ್ ಸಿರಾಜ್ ತಾವಾಡಿದ ಮೊದಲ ಪಂದ್ಯದಲ್ಲಿ ಹೊಸ ದಾಖಲೆ ಬರೆದರು.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 36.3 ಓವರ್ ಬೌಲ್ ಮಾಡಿದ ಸಿರಾಜ್ 77 ರನ್ ನೀಡಿ 5 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅವರು ಏಳು ವರ್ಷಗಳಲ್ಲಿ ಭಾರತ ಪರ ಡೆಬ್ಯೂ ಮಾಡಿದ ಬೌಲರ್ಗಳ ಪೈಕಿ ಈ ಸಾಧನೆಗೈದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಓದಿ: ಇಂಡೋ v/s ಆಸೀಸ್ 2ನೇ ಟೆಸ್ಟ್ : ಟೀಂ ಇಂಡಿಯಾಗೆ 8 ವಿಕೆಟ್‌ಗಳ ಭರ್ಜರಿ ಜಯ, 1-1ರಿಂದ ಸರಣಿ ಸಮಬಲ
ತಮ್ಮ ಮೊದಲ ಟೆಸ್ಟ್ ಪಂದ್ಯದ ಕುರಿತು ಮಾತನಾಡಿರುವ ಮೊಹಮ್ಮದ್ ಸಿರಾಜ್, 'ತಂಡದಲ್ಲಿ ನನಗೆ ಎಲ್ಲಾ ಆಟಗಾರರು ತುಂಬಾ ಸಹಕಾರ ನೀಡಿದರು. ಅದರಲ್ಲೂ ಬುಮ್ರಾ ನಾನು ಪ್ರತಿ ಬೌಲ್ ಮಾಡುವಾಗ ನನ್ನ ಬಳಿ ಬಂದು ನನಗೆ ಮಾರ್ಗದರ್ಶನ ನೀಡುತ್ತಿದ್ದರು' ಎಂದು ಹೇಳಿದರು.