ETV Bharat / sports

ಆಸೀಸ್‌ ವಿರುದ್ಧದ 3 ಟೆಸ್ಟ್‌ ಪಂದ್ಯಗಳಿಗೆ ನಾಯಕ ಕೊಹ್ಲಿ ಅಲಭ್ಯ; ಜಾಹೀರಾತಿಗೆ ಕತ್ತರಿ

ಟೀಂ ಇಂಡಿಯಾ, ಆಸೀಸ್‌ ನಡುವಿನ ಪಂದ್ಯಗಳ ನೇರ ಪ್ರಸಾರದ ಹಕ್ಕು ಪಡೆದಿದ್ದ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ನಾಯಕ ಕೊಹ್ಲಿ ಅಲಭ್ಯರಾಗುತ್ತಿರುವುದು ಭಾರಿ ಪೆಟ್ಟು ನೀಡುತ್ತಿದೆ. ವಿರಾಟ್‌ ಕೊಹ್ಲಿ ಆಡುತ್ತಿರುವ ಮೊದಲ ಟೆಸ್ಟ್‌ ಪಂದ್ಯವನ್ನು ಮಾತ್ರ ಪ್ರಸಾರ ಮಾಡಲು ಚಾಲೆನೆಲ್‌-7 ಮುಂದಾಗಿದೆ. ಆ ಮೂಲಕ ಜಾಹೀರಾತಿಗೆ ಕತ್ತರಿ ಹಾಕಲು ಮುಂದಾಗಿದೆ.

kohlis-absence-in-india-aus-tour-drags-2-media-houses-on-war-path
ಆಸೀಸ್‌ ವಿರುದ್ಧದ 3 ಟೆಸ್ಟ್‌ ಪಂದ್ಯಗಳಿಗೆ ನಾಯಕ ಕೊಹ್ಲಿ ಅಲಭ್ಯ; ಜಾಹೀರಾತಿಗೆ ಕತ್ತರಿ
author img

By

Published : Nov 12, 2020, 4:09 PM IST

Updated : Nov 12, 2020, 4:15 PM IST

ಹೈದಾರಾಬಾದ್‌: ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಆಸೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯ ಆಡಿ ತಾಯ್ನಾಡಿಗೆ ವಾಪಸ್‌ ಆಗುತ್ತಿದ್ದಾರೆ. ಆ ಮೂಲಕ ಬಾಕ್ಸಿಂಗ್‌ ಡೇ ಸೇರಿ ಉಳಿದ ಮೂರು ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗುತ್ತಿದ್ದಾರೆ. ಇದು ಆಸ್ಟ್ರೇಲಿಯಾದ ಸ್ಪೋರ್ಟ್ಸ್‌ ಚಾನಲ್‌ಗಳ ಮೇಲೆ ವ್ಯತಿರಿಕ್ತ ಮೇಲೆ ಪರಿಣಾಮ ಬೀರುತ್ತಿದೆ.

ಚಾನೆಲ್‌-7 4 ಟೆಸ್ಟ್‌ ಪಂದ್ಯಗಳ ನೇರಪ್ರಸಾರದ ಹಕ್ಕು ಪಡೆದಿತ್ತು. ಆದರೆ ಬ್ರಾಂಡ್‌ ಆಟಗಾರ ವಿರಾಟ್‌ ಕೊಹ್ಲಿ ಮೂರು ಟೆಸ್ಟ್‌ ಪಂದ್ಯಗಳಿಗೆ ಅಲಭ್ಯರಾಗುತ್ತಿರುವುದರಿಂದ ಪಂದ್ಯಗಳ ಪ್ರಸಾರ ಸ್ಥಗಿತಕ್ಕೆ ಈ ಚಾನೆಲ್‌ ಮುಂದಾಗಿದೆ. ಇದರಿಂದ ಜಾಹಿರಾತಿಗೆ ಕತ್ತರಿ ಹಾಕುವ ನಿರ್ಧಾರಕ್ಕೆ ಬಂದಿದೆ. ಫಾಕ್ಸ್‌ ಸ್ಪೋರ್ಟ್ಸ್‌ ಸಂಸ್ಥೆ ಕೂಡ ಇದೇ ಹಾದಿಯನ್ನು ಹಿಡಿದಿದ್ದು, ಎರಡು ಪಟ್ಟು ಪ್ರಸಾರದ ಹಕ್ಕಅನ್ನು ಕಡಿತ ಮಾಡಲು ನಿರ್ಧರಿಸಿದೆ.

ಮೂರು ಟಿ-20 ಮತ್ತು ಕೆಲ ಏಕದಿನ ಪಂದ್ಯಗಳಿಗೆ ನೀಡುವ ಜಾಹೀರಾತು ಹಕ್ಕುಗಳನ್ನು ಸ್ಥಗಿತಗೊಳಿಸುತ್ತಿದೆ. ಆದರೆ ಈ ಎರಡೂ ಸಂಸ್ಥೆಗಳು ಮೊದಲ ಟೆಸ್ಟ್‌ ಪಂದ್ಯವನ್ನು ಪ್ರಸಾರ ಮಾಡುತ್ತಿವೆ. ಕೊಹ್ಲಿ ಆಡಲಿರುವ ಮೊದಲ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ಅಡಿಲೆಡ್‌ನಲ್ಲಿ ನಡೆಯಲಿದೆ.

ಕಳೆದ ಸೋಮವಾರಷ್ಟೇ ಕೊಹ್ಲಿ ಅವರು ಬರೆದಿದ್ದ ಪಿತೃತ್ವದ ರಜೆ ಪತ್ರಕ್ಕೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ-ಬಿಸಿಸಿಐ ಅನುಮತಿ ನೀಡಿದೆ. ಪತ್ನಿ ಅನುಷ್ಕಾ ಶರ್ಮಾ ಹೆರಿಗೆಯ ಸಮಯ ಹಿನ್ನೆಲೆಯಲ್ಲಿ ವಿರಾಟ್‌ ಕೊಹ್ಲಿ ಪಿತೃತ್ವದ ರಜೆ ಪಡೆದಿದ್ದಾರೆ.

ಕೊಹ್ಲಿ ಜೊತೆ ಫಾಕ್ಸ್‌ ಸ್ಫೋರ್ಟ್ಸ್‌ ಆರು ಏಕದಿನ ಪಂದ್ಯಗಳು, ಅಭ್ಯಾಸ ಪಂದ್ಯ, ಡೇ-ನೈಟ್‌ ಟೆಸ್ಟ್‌ ಪಂದ್ಯಕ್ಕಾಗಿ ಕೊಹ್ಲಿ ಜೊತೆ 14 ದಿನಗಳ ಒಪ್ಪಂದ ಮಾಡಿಕೊಂಡಿದೆ. ಇನ್ನು ಚಾನೆಲ್‌-7 ಕೊಹ್ಲಿ ಆಡುತ್ತಿರುವ ಅಡಿಲೆಡ್‌ ಪಂದ್ಯವನ್ನು ಮಾತ್ರ ಪ್ರಸಾರ ಮಾಡಲು ಹಕ್ಕು ಪಡೆದಿದೆ.

Last Updated : Nov 12, 2020, 4:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.