ETV Bharat / sports

ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿ ವೇಳಾಪಟ್ಟಿ ಪ್ರಕಟ - ಶ್ರೀಲಂಕಾ ಕ್ರಿಕೆಟ್

ಮೊದಲು ಸೆಟ್​ನಲ್ಲಿ ಮೂರು ದಿನಗಳ ಒಂದು ರೂಮಿನಲ್ಲಿ ಕಠಿಣ ಕ್ವಾರಂಟೈನ್ ಮತ್ತು ಉಳಿದ 5 ದಿನಗಳು ಅವರಿಗೆ ಪ್ರೋಟೋಕಾಲ್​ಗಳ ಅನ್ವಯ ತರಬೇತಿ ಮಾಡುವ ಸ್ಥಳ ಮತ್ತು ಹೋಟೆಲ್​ನಲ್ಲಿ ಕಳೆಯಲು ಅವಕಾಶ ನೀಡಲಾಗಿದೆ..

ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಯ ವೇಳಾಪಟ್ಟಿ ಪ್ರಕಟ

author img

By

Published : May 10, 2021, 8:21 PM IST

ಮುಂಬೈ : ಬಿಸಿಸಿಐ ಕೊಹ್ಲಿ - ರೋಹಿತ್ ಅಂತಹ ಸ್ಟಾರ್​ ಆಟಗಾರರು ಇಂಗ್ಲೆಂಡ್​ನಲ್ಲಿರುವ ವೇಳೆ ಶ್ರೀಲಂಕಾ ವಿರುದ್ಧ ನಡೆಯುವ ಸೀಮಿತ ಓವರ್​ಗಳ ಸರಣಿಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ಬಿಸಿಸಿಐ ಮುಂದೆ ಪ್ರಸ್ತಾಪಿಸಿರುವಂತೆ ಮೊದಲು 3 ಪಂದ್ಯಗಳ ಏಕದಿನ ಸರಣಿ ಮತ್ತು ನಂತರ ಟಿ-20 ಪಂದ್ಯಗಳು ನಡಯಲಿವೆ ಎಂದು ಕ್ರಿಕೆಟ್​ ವೆಬ್​ಸೈಟ್​ ಒಂದು ವರದಿ ಮಾಡಿದೆ.

ಮೂರು ಏಕದಿನ ಪಂದ್ಯಗಳು ಜುಲೈ 13, 16, 19ರಂದು ನಡೆಯಲಿವೆ. ನಂತರ 22 ರಿಂದ ಟಿ-20 ಪಂದ್ಯಗಳು ನಡೆಯಲಿವೆ ಎಂದು ತಿಳಿದು ಬಂದಿದೆ.

ವರದಿಯ ಪ್ರಕಾರ, ಭಾರತ ವೈಟ್​ಬಾಲ್ ತಂಡ ಜುಲೈ 5ಕ್ಕೆ ಶ್ರೀಲಂಕಾಗೆ ತೆರಳಲಿದ್ದು, ಜುಲೈ 28ಕ್ಕೆ ತವರಿಗೆ ಮರಳಲಿದೆ. ಶ್ರೀಲಂಕಾದಿಂದ ಮರಳಿದ ನಂತರ 8 ದಿನಗಳ ಕಾಲ 2 ವಿಭಾಗದಲ್ಲಿ ಕ್ವಾರಂಟೈನ್​ಗೆ ಒಳಗಾಗಲಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ:ಭಾರತದ ಹೆಸರಲ್ಲೇ ಎರಡು ಕ್ರಿಕೆಟ್​ ತಂಡ: ಒಂದು ಇಂಗ್ಲೆಂಡ್​ನಲ್ಲಿ, ಮತ್ತೊಂದು ಶ್ರೀಲಂಕಾದಲ್ಲಿ!

ಮೊದಲು ಸೆಟ್​ನಲ್ಲಿ ಮೂರು ದಿನಗಳ ಒಂದು ರೂಮಿನಲ್ಲಿ ಕಠಿಣ ಕ್ವಾರಂಟೈನ್ ಮತ್ತು ಉಳಿದ 5 ದಿನಗಳು ಅವರಿಗೆ ಪ್ರೋಟೋಕಾಲ್​ಗಳ ಅನ್ವಯ ತರಬೇತಿ ಮಾಡುವ ಸ್ಥಳ ಮತ್ತು ಹೋಟೆಲ್​ನಲ್ಲಿ ಕಳೆಯಲು ಅವಕಾಶ ನೀಡಲಾಗಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಇಂಗ್ಲೆಂಡ್​ ಸರಣಿಗೆ ತೆರಳುವ ಯಾವುದೇ ಆಟಗಾರರು ಶ್ರೀಲಂಕಾ ವಿರುದ್ಧದ ಸರಣಿಯ ಭಾಗವಾಗುವುದಿಲ್ಲ. ಈ ತಂಡದಲ್ಲಿ ಸಂಪೂರ್ಣ ವಿಭಿನ್ನವಾಗಿರಲಿದ್ದು, ಎಲ್ಲರೂ ವೈಟ್​ ಬಾಲ್​ ಸ್ಪೆಷಲಿಸ್ಟ್​ಗಳೇ ಇರಲಿದ್ದಾರೆ.

ಇದನ್ನು ಓದಿ: ಜುಲೈನಲ್ಲಿ ಭಾರತ ತಂಡದಿಂದ ಲಂಕಾ ಪ್ರವಾಸ, ಸದ್ಯಕ್ಕೆ ಐಪಿಎಲ್ ಅಸಾಧ್ಯ ಎಂದ ದಾದಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.