ಮುಂಬೈ: ಇದೇ ತಿಂಗಳು ಶ್ರೀಲಂಕಾ ಭಾರತ ಪ್ರವಾಸ ಕೈಗೊಳ್ಳಲಿದ್ದು, ಬಿಸಿಸಿಐ ಪ್ರವಾಸದ ಪರಿಸ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಹಿಂದಿನ ವೇಳಾಪಟ್ಟಿ ಪ್ರಕಾರ ಮೊದಲು ಟೆಸ್ಟ್ ಸರಣಿ ಮತ್ತು ನಂತರ ಟಿ-20 ಸರಣಿ ಆಯೋಜನೆಯಾಗಬೇಕಿತ್ತು. ಆದರೆ, ಪರಿಸ್ಕೃತ ವೇಳಾ ಪಟ್ಟಿಯಲ್ಲಿ ಮೊದಲು 3 ಪಂದ್ಯಗಳ ಟಿ-20 ಸರಣಿ ಮತ್ತು ನಂತರ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
-
🚨 NEWS 🚨: BCCI announces a change in schedule for the upcoming @Paytm Sri Lanka Tour of India. #INDvSL #TeamIndia
— BCCI (@BCCI) February 15, 2022 " class="align-text-top noRightClick twitterSection" data="
More Details 🔽
">🚨 NEWS 🚨: BCCI announces a change in schedule for the upcoming @Paytm Sri Lanka Tour of India. #INDvSL #TeamIndia
— BCCI (@BCCI) February 15, 2022
More Details 🔽🚨 NEWS 🚨: BCCI announces a change in schedule for the upcoming @Paytm Sri Lanka Tour of India. #INDvSL #TeamIndia
— BCCI (@BCCI) February 15, 2022
More Details 🔽
ಫೆಬ್ರವರಿ 24ರಂದು ಲಖನೌದಲ್ಲಿ ಮೊದಲ ಟಿ-20, ಫೆ.26 ಮತ್ತು 27ರಂದು ಧರ್ಮಶಾಲದಲ್ಲಿ ಕೊನೆಯ ಎರಡು ಟಿ-20 ಪಂದ್ಯಗಳು ನಡೆಯಲಿವೆ. ನಂತರ 2021-23ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.
ಮೊದಲ ಟೆಸ್ಟ್ ಪಂದ್ಯ ಮಾರ್ಚ್ 4ರಿಂದ 8ರವರೆಗೆ ಮೊಹಾಲಿಯಲ್ಲಿ ನಡೆಯಲಿದೆ. ಬೆಂಗಳೂರಿನಲ್ಲಿ 2ನೇ ಟೆಸ್ಟ್ ಪಂದ್ಯ ಮಾರ್ಚ್ 12ರಿಂದ 16ರವರೆಗೆ ನಡೆಯಲಿದ್ದು, ಇದು ಡೇ ಅಂಡ್ ನೈಟ್ ಟೆಸ್ಟ್ ಪಂದ್ಯವಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಭಾರತದಲ್ಲಿ ಅಹರ್ನಿಶಿ ಟೆಸ್ಟ್ ಪಂದ್ಯವನ್ನು ಆಯೋಜಿಸಲಿರುವ 3ನೇ ಮೈದಾನ ಎಂಬ ಖ್ಯಾತಿಗೆ ಪಾತ್ರವಾಗಲಿದೆ.