ಮುಂಬೈ : ವಾಂಖೆಡೆಯಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಭಾರತ ತಂಡ 276 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿದೆ. ಕಿವೀಸ್ಗೆ ಗೆಲ್ಲಲು 540 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದೆ.
2ನೇ ದಿನ 69 ರನ್ಗಳಿಸಿದ್ದ ಭಾರತ 3ನೇ ದಿನವಾದ ಭಾನುವಾರ 7 ವಿಕೆಟ್ ಕಳೆದುಕೊಂಡು 276 ರನ್ ಗಳಿಸಿದ್ದ ವೇಳೆ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿಕೊಂಡು ಕಿವೀಸ್ಗೆ 540 ರನ್‌ಗಳ ಗುರಿ ನೀಡಿತು.
-
Innings Break!
— BCCI (@BCCI) December 5, 2021 " class="align-text-top noRightClick twitterSection" data="
And, here comes the declaration from the Indian Skipper.#TeamIndia 276-7d
Scorecard - https://t.co/CmrJV47AeP #INDvNZ @Paytm pic.twitter.com/LXAOcvOd44
">Innings Break!
— BCCI (@BCCI) December 5, 2021
And, here comes the declaration from the Indian Skipper.#TeamIndia 276-7d
Scorecard - https://t.co/CmrJV47AeP #INDvNZ @Paytm pic.twitter.com/LXAOcvOd44Innings Break!
— BCCI (@BCCI) December 5, 2021
And, here comes the declaration from the Indian Skipper.#TeamIndia 276-7d
Scorecard - https://t.co/CmrJV47AeP #INDvNZ @Paytm pic.twitter.com/LXAOcvOd44
ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ 62 ರನ್, ಚೇತೇಶ್ವರ್ 47, ಶುಬ್ಮನ್ ಗಿಲ್ 47 , ನಾಯಕ ವಿರಾಟ್ ಕೊಹ್ಲಿ 36, ಅಕ್ಷರ್ ಪಟೇಲ್ ಅಜೇಯ 41 , ಶ್ರೇಯಸ್ ಅಯ್ಯರ್ 14, ಸಹಾ 13 ರನ್ಗಳಿಸಿದರು.
ನ್ಯೂಜಿಲ್ಯಾಂಡ್ ಪರ ಅಜಾಜ್ ಪಟೇಲ್ 106 ರನ್ ನೀಡಿ 4 ವಿಕೆಟ್ ಪಡೆದರೆ, ರಚಿನ್ ರವೀಂದ್ರ 56 ರನ್ ನೀಡಿ 3 ವಿಕೆಟ್ ಪಡೆದರು. 540 ರನ್‌ಗಳ ಗುರಿ ಬೆನ್ನತ್ತಿರುವ ಕಿವೀಸ್ ಚಹಾ ವಿರಾಮದ ವೇಳೆಗೆ 13 ರನ್ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ನಾಯಕ ಟಾಮ್ ಲೇಥಮ್ ಕೇವಲ 6 ರನ್ಗಳಿಸಿ ಅಶ್ವಿನ್ಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ:ಡಿಸೆಂಬರ್ 26 ರಿಂದ ಭಾರತ - ದಕ್ಷಿಣ ಆಫ್ರಿಕಾ ಸರಣಿ ಆರಂಭ.. ಬಿಸಿಸಿಐನಿಂದ ಖಚಿತ ಮಾಹಿತಿ