ಸೆಂಚುರಿಯನ್: ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಭಾರತಕ್ಕೆ ಅತ್ಯುತ್ತಮ ಆರಂಭ ಒದಗಿಸಿಕೊಟ್ಟಿದ್ದಾರೆ.
ಸೆಂಚುರಿಯನ್ನ ಸೂಪರ್ ಸ್ಪೋರ್ಟ್ಸ್ ಪಾರ್ಕ್ನಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ನಾಯಕನ ನಿರ್ಧಾರಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡಿದ ಮಯಾಂಕ್ ಅಗರ್ವಾಲ್ 87 ಎಸೆತಗಳಲ್ಲಿ 7 ಬೌಂಡರಿ ಸಹಿತ 46 ರನ್ ಮತ್ತು ಕೆಎಲ್ ರಾಹುಲ್ 84 ಎಸೆತಗಳಲ್ಲಿ 4 ಬೌಂಡರಿ ಸಹಿತ 29 ರನ್ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
-
That will be Lunch on Day 1 of the 1st Test.
— BCCI (@BCCI) December 26, 2021 " class="align-text-top noRightClick twitterSection" data="
A strong opening partnership from @mayankcricket & @klrahul11.#TeamIndia 83/0.
Scorecard - https://t.co/oe9OWgQSPS #SAvIND pic.twitter.com/RYy6BkbKcO
">That will be Lunch on Day 1 of the 1st Test.
— BCCI (@BCCI) December 26, 2021
A strong opening partnership from @mayankcricket & @klrahul11.#TeamIndia 83/0.
Scorecard - https://t.co/oe9OWgQSPS #SAvIND pic.twitter.com/RYy6BkbKcOThat will be Lunch on Day 1 of the 1st Test.
— BCCI (@BCCI) December 26, 2021
A strong opening partnership from @mayankcricket & @klrahul11.#TeamIndia 83/0.
Scorecard - https://t.co/oe9OWgQSPS #SAvIND pic.twitter.com/RYy6BkbKcO
ಈ ಪಂದ್ಯದಲ್ಲಿ ಭಾರತ ತಂಡ ತವರಿನಲ್ಲಿ ಕಿವೀಸ್ ವಿರುದ್ಧ ಮಿಂಚಿದ್ದ ಶ್ರೇಯಸ್ ಅಯ್ಯರ್, ವಿದೇಶಿ ಪ್ರವಾಸದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಲವಾಗಿದ್ದ ಹನುಮ ವಿಹಾರಿಯನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ. ಅಲ್ಲದೆ ಅನುಭವಿ ಇಶಾಂತ್ ಮತ್ತು ಉಮೇಶ್ ಯಾದವ್ ಬದಲಿಗೆ ಯುವ ಬೌಲರ್ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡಿದೆ. ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯ ರಹಾನೆಗೆ ಮತ್ತೊಂದು ಅವಕಾಶ ನೀಡಲಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಭಾಗವಾಗಿ ಎರಡು ರಾಷ್ಟ್ರಗಳ ನಡುವ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ.
ಇದನ್ನೂ ಓದಿ:ಆ್ಯಶಸ್ 3ನೇ ಟೆಸ್ಟ್ನ ಮೊದಲ ದಿನ ಆಸೀಸ್ ಪ್ರಾಬಲ್ಯ: 185ಕ್ಕೆ ಪತನ ಕಂಡ ಆಂಗ್ಲರು