ಓವಲ್(ಲಂಡನ್): ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಕೊನೆಯ ದಿನವಾಗಿರುವ ಇಂದು ಭಾರತ ಗೆಲುವಿನ ಸನಿಹ ಬಂದು ತಲುಪಿದೆ. ಭೋಜನ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಇದೀಗ 6 ವಿಕೆಟ್ ನಷ್ಟಕ್ಕೆ 147 ರನ್ಗಳಿಕೆ ಮಾಡಿದೆ.
ಯಾವುದೇ ವಿಕೆಟ್ ನಷ್ಟವಿಲ್ಲದೇ ನಿನ್ನೆ 77 ರನ್ಗಳಿಕೆ ಮಾಡಿದ್ದ ಇಂಗ್ಲೆಂಡ್ ಇಂದು ತನ್ನ ಬ್ಯಾಟಿಂಗ್ ಮುಂದುವರೆಸಿತು. ಆರಂಭಿಕರಾದ ರೋರಿ ಬರ್ನ್ಸ್ 50 ರನ್ ಹಾಗೂ ಡೇವಿಡ್ ಮಲನ್ 5 ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು. ಬರ್ನ್ಸ್ ವಿಕೆಟ್ ಪಡೆದುಕೊಳ್ಳುವಲ್ಲಿ ಶಾರ್ದೂಲ್ ಠಾಕೂರ್ ಯಶಸ್ವಿಯಾಗಿದ್ದು, ಮಲನ್ ರನೌಟ್ ಬಲೆಗೆ ಬಿದ್ದರು. ಇದಾದ ಬಳಿಕ ಡೇವಿಡ್ ಮಲನ್ ರನೌಟ್ ಹಾಗೂ ಒಲ್ಲಿ ಪೋಪ್(0) ಬೂಮ್ರಾಗೆ ವಿಕೆಟ್ ಒಪ್ಪಿಸಿದರು.
-
England scored 54 runs for the loss of two wickets in the first session.#WTC23 | #ENGvIND | https://t.co/zRhnFiKhzZ pic.twitter.com/yfpDgZSsuF
— ICC (@ICC) September 6, 2021 " class="align-text-top noRightClick twitterSection" data="
">England scored 54 runs for the loss of two wickets in the first session.#WTC23 | #ENGvIND | https://t.co/zRhnFiKhzZ pic.twitter.com/yfpDgZSsuF
— ICC (@ICC) September 6, 2021England scored 54 runs for the loss of two wickets in the first session.#WTC23 | #ENGvIND | https://t.co/zRhnFiKhzZ pic.twitter.com/yfpDgZSsuF
— ICC (@ICC) September 6, 2021
ಬೋಜನದ ಬೆನ್ನಲ್ಲೇ ಟೀಂ ಇಂಡಿಯಾ ಮೇಲುಗೈ
ಬೋಜನ ವಿರಾಮದ ವೇಳೆಗೆ ಎರಡು ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಇಂಗ್ಲೆಂಡ್ಗೆ ಟೀಂ ಇಂಡಿಯಾ ಆಘಾತ ನೀಡಿತು. ಲಂಚ್‌ಬ್ರೇಕ್ ಬಳಿಕ ಮೈದಾನಕ್ಕೆ ಬಂದ ಹಮೀದ್ 63 ರನ್, ಪೋಪ್ 2ರನ್ ಹಾಗೂ ಬೈರ್ಸ್ಟೋವ್ 0 ಹಾಗೂ ಮೊಯಿನ್ ಅಲಿ 0 ವಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.
ಹಮೀದ್, ಮೊಯಿನ್ ವಿಕೆಟ್ ಜಡೇಜಾ ಕಿತ್ತರೆ, ಪೂಪ್ ಹಾಗೂ ಬೈರ್ಸ್ಟೋವ್ ವಿಕೆಟ್ ಪಡೆದುಕೊಳ್ಳುವಲ್ಲಿ ಬಮ್ರಾ ಯಶಸ್ವಿಯಾದರು. ಸದ್ಯ ತಂಡ 147ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದು, ಗೆಲುವಿಗೆ 221ರನ್ಗಳ ಅವಶ್ಯಕತೆ ಇದೆ.
ಇದನ್ನೂ ಓದಿ: ಮುಂದಿನ 48 ಗಂಟೆಯಲ್ಲಿ T-20 ವಿಶ್ವಕಪ್ಗೆ ಕೊಹ್ಲಿ ಪಡೆ ಪ್ರಕಟ.. ಈ ಮುಖಗಳಿಗೆ ಸ್ಥಾನ ಬಹುತೇಕ ಖಚಿತ..
ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತವಾಗಿ ಕಮ್ಬ್ಯಾಕ್ ಮಾಡಿದ್ದು, 466 ರನ್ಗಳಿಕೆ ಮಾಡಿದೆ. ತಂಡದ ಪರ ರೋಹಿತ್ ಶರ್ಮಾ 127 ಹಾಗೂ ಶಾರ್ದೂಲ್ ಠಾಕೂರ್ 60, ರಿಷಭ್ ಪಂತ್ 50 ರನ್ಗಳಿಕೆ ಮಾಡಿದ್ದಾರೆ.
ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು ಈಗಾಗಲೇ 1-1 ಅಂತರದಲ್ಲಿ ಸಮಬಲ ಸಾಧಿಸಿದ್ದು, ಇಂದು ಗೆಲ್ಲುವ ತಂಡ ಮೇಲುಗೈ ಸಾಧಿಸಲಿದೆ.