ಇಸ್ಲಾಮಾಬಾದ್(ಪಾಕಿಸ್ತಾನ): ಭಾರತ-ಪಾಕಿಸ್ತಾನ ತಂಡಗಳ ನಡುವೆ ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಸರಣಿ ಆಯೋಜನೆ ಅಸಾಧ್ಯ. ಇದಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ರೀತಿಯ ಅವಸರದ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್(PCB)ಗೆ ಹೊಸದಾಗಿ ಆಯ್ಕೆಯಾಗಿರುವ ರಮೀಜ್ ರಾಜ್ ತಿಳಿಸಿದ್ದಾರೆ.
-
Newly elected PCB Chairman Mr Ramiz Raja, press conference at NHPC, Lahore https://t.co/RkZTK3XmBp
— Pakistan Cricket (@TheRealPCB) September 13, 2021 " class="align-text-top noRightClick twitterSection" data="
">Newly elected PCB Chairman Mr Ramiz Raja, press conference at NHPC, Lahore https://t.co/RkZTK3XmBp
— Pakistan Cricket (@TheRealPCB) September 13, 2021Newly elected PCB Chairman Mr Ramiz Raja, press conference at NHPC, Lahore https://t.co/RkZTK3XmBp
— Pakistan Cricket (@TheRealPCB) September 13, 2021
ಪಿಸಿಬಿಯ ಹೊಸ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿ ರಾಜಕೀಯದಲ್ಲಿ ಸಿಲುಕಿಕೊಂಡಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಕ್ರಿಕೆಟ್ ಪುನಾರಂಭ ಅಸಾಧ್ಯ. ದೇಶಿ ಕ್ರಿಕೆಟ್ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹುದ್ದೆ ನಿಭಾಯಿಸುವುದು ಸವಾಲಿನ ಕೆಲಸ. ಕ್ರಿಕೆಟ್ ಮಂಡಳಿಯ ಅಭಿವೃದ್ಧಿಗೋಸ್ಕರ ಕೆಲಸ ಮಾಡುವುದಾಗಿ ರಮೀಜ್ ರಾಜಾ ತಿಳಿಸಿದರು. ಡಿಆರ್ಎಸ್ ನಿರ್ಧಾರದಲ್ಲಿ ಕೆಲವೊಂದು ಗೊಂದಲಗಳಿವೆ. ಈ ವಿಷಯದ ಬಗ್ಗೆ ಮುಂಬರುವ ಪಾಕ್-ನ್ಯೂಜಿಲ್ಯಾಂಡ್ ಕ್ರಿಕೆಟ್ ಸರಣಿ ವೇಳೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಹೇಡನ್, ಫಿಲಾಂಡರ್ಗೆ ಮಣೆ ಹಾಕಿದ ಪಾಕ್; ಟಿ-20 ವಿಶ್ವಕಪ್ಗೆ ಕೋಚ್ಗಳಾಗಿ ನೇಮಕ
ವಿಶ್ವಕಪ್ನಲ್ಲಿ ಇಂಡೋ-ಪಾಕ್ ಪಂದ್ಯದ ಬಗ್ಗೆ ಪ್ರತಿಕ್ರಿಯೆ:
ಪಾಕಿಸ್ತಾನ ತಂಡದ ಪ್ಲೇಯರ್ಸ್ಗೆ ಶೇ. 100ರಷ್ಟು ಶ್ರಮ ಹಾಕುವಂತೆ ತಿಳಿಸಲಾಗಿದ್ದು, ಉತ್ತಮ ಪ್ರದರ್ಶನ ನೀಡಿದಾಗ ಫಲಿತಾಂಶ ಕೂಡ ಆಶಾದಾಯಕವಾಗಿರುತ್ತದೆ ಎಂದರು. ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ಅಕ್ಟೋಬರ್ 24ರಂದು ಮುಖಾಮುಖಿಯಾಗಲಿವೆ.
ಪಾಕಿಸ್ತಾನ ಟೆಸ್ಟ್ ತಂಡದ 18ನೇ ಹಾಗೂ ಏಕದಿನದಲ್ಲಿ 12ನೇ ಕ್ಯಾಪ್ಟನ್ ಆಗಿದ್ದ ರಮೀಜ್ ರಾಜಾ 255 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 8,674ರನ್ಗಳಿಕೆ ಮಾಡಿದ್ದಾರೆ.