ETV Bharat / sports

ಜೆಮೀಸನ್​ಗೆ ಬಲಿಯಾದ ಕೊಹ್ಲಿ, ಪಂತ್.. 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಭಾರತ -

ವಿರಾಟ್ ಕೊಹ್ಲಿ 132 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಿತ 44 ರನ್ ​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು, ನಂತರ ಬಂದ ರಿಷಭ್ ಪಂತ್ ಕೂಡ ಕೇವಲ 4 ರನ್​ಗಳಿಸಿ ಜಮೀಸನ್​ಗೆ 3ನೇ ಬಲಿಯಾದರು. ಶನಿವಾರ ರೋಹಿತ್ ಶರ್ಮಾ 34, ಶುಭಮನ್ ಗಿಲ್​ 28 ಮತ್ತು ಚೇತೇಶ್ವರ್ ಪೂಜಾರ್ 8 ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದರು..

http://10.10.50.85//karnataka/20-June-2021/kohli_2006newsroom_1624186327_784.jpg
ಜೆಮೀಸನ್
author img

By

Published : Jun 20, 2021, 4:34 PM IST

Updated : Jun 20, 2021, 5:38 PM IST

ಸೌತಾಂಪ್ಟನ್ : ಭಾರತ ತಂಡದ ನಾಯಕ ವಿರಾಟ್​ ಕೊಹ್ಲಿ ನ್ಯೂಜಿಲ್ಯಾಂಡ್​ ವಿರುದ್ದ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ನಿನ್ನೆಯ ಮೊತ್ತ 44ಕ್ಕೆ ವಿಕೆಟ್​ ಒಪ್ಪಿಸಿದರೆ, ರಿಷಭ್ ಪಂತ್ ಕೇವಲ 4 ರನ್​ಗಳಿಸಿ ಔಟಾದರು.

3ನೇ ದಿನವಾದ 3ನೇ ಓವರ್​ಲ್ಲೇ ಕೊಹ್ಲಿ ತಮ್ಮ ಆರ್​ಸಿಬಿ ಬೌಲರ್​ ಕೈಲ್ ಜೆಮೀಸನ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದಿದ್ದಾರೆ. ಕ್ರಿಕೆಟ್​ ತಜ್ಞರ ಅಭಿಪ್ರಾಯದಂತೆ ಜೆಮೀಸನ್ ಭಾರತೀಯರ ಪಾಲಿಗೆ ಕಂಟಕರಾಗಿದ್ದಾರೆ. ಜೆಮೀಸನ್ ಆರಂಭಿಕ ರೋಹಿತ್ ಶರ್ಮಾ (34) ವಿಕೆಟ್​ ಕೂಡ ಪಡೆದಿದ್ದರು.

ವಿರಾಟ್ ಕೊಹ್ಲಿ 132 ಎಸೆತಗಳಲ್ಲಿ ಕೇವಲ ಒಂದು ಬೌಂಡರಿ ಸಹಿತ 44 ರನ್ ​ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು, ನಂತರ ಬಂದ ರಿಷಭ್ ಪಂತ್ ಕೂಡ ಕೇವಲ 4 ರನ್​ಗಳಿಸಿ ಜೆಮೀಸನ್​ಗೆ 3ನೇ ಬಲಿಯಾದರು. ಶನಿವಾರ ರೋಹಿತ್ ಶರ್ಮಾ 34, ಶುಭಮನ್ ಗಿಲ್​ 28 ಮತ್ತು ಚೇತೇಶ್ವರ್ ಪೂಜಾರ್ 8 ರನ್​ಗಳಿಸಿ ವಿಕೆಟ್​ ಒಪ್ಪಿಸಿದ್ದರು.

ಭಾರತ ತಂಡ 5 ವಿಕೆಟ್ ಕಳೆದುಕೊಂಡು 156 ರನ್​ಗಳಿಸಿದೆ. ಅಜಿಂಕ್ಯ ರಹಾನೆ 33 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

ಇದನ್ನು ಓದಿ:ಟೆಸ್ಟ್​ ಕ್ರಿಕೆಟ್​​ ಜೀವನದಲ್ಲಿ 10 ವರ್ಷ ಪೂರೈಸಿದ ಕಿಂಗ್​ ಕೊಹ್ಲಿ: ಇಲ್ಲಿದೆ ದಶಕದ ಸಾಧನೆ..

Last Updated : Jun 20, 2021, 5:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.