ETV Bharat / sports

ಆಸ್ಟ್ರೇಲಿಯಾ ವಿರುದ್ಧ ವಿರೋಚಿತ ಸೋಲು ಕಂಡ ಭಾರತ.. ಸೆಮಿಫೈನಲ್ ಹಾದಿ ಕಠಿಣ..

author img

By

Published : Mar 19, 2022, 2:35 PM IST

ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್​ 30ಕ್ಕೆ3, ಅಲಾನಾ ಕಿಂಗ್ 52ಕ್ಕೆ 2 ಮತ್ತು ಜೊನಾಸೆನ್​ 40ಕ್ಕೆ1 ವಿಕೆಟ್​ ಪಡೆದರು. ಇನ್ನು 278 ರನ್​ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಇನ್ನು 3 ಎಸೆತಗಳಿರುವಂತೆ ಗುರಿ ತಲುಪಿತು..

India lose to Australia by six wickets in ICC Women's World Cup match
ಭಾರತ vs ಆಸ್ಟ್ರೇಲಿಯಾ ವಿಶ್ವಕಪ್

ಆಕ್ಲೆಂಡ್ ​: ಐಸಿಸಿ ಮಹಿಳಾ ವಿಶ್ವಕಪ್​ನಲ್ಲಿ ಭಾರತ ಮೂರನೇ ಸೋಲು ಕಂಡಿದೆ. ಸೆಮಿಫೈನಲ್ ಪ್ರವೇಶಿಸುವ ಕನಸು ಮತ್ತಷ್ಟು ಕಠಿಣವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಮಿಥಾಲಿ ರಾಜ್ ಬಳಗ 6 ವಿಕೆಟ್​ಗಳ ಸೋಲು ಕಂಡಿದೆ.

ಇತ್ತ ವಿಶ್ವಕಪ್​ನಲ್ಲಿ ದಾಖಲೆಯ ರನ್​ ಚೇಸಿಂಗ್ ಮಾಡುವ ಮೂಲಕ ಟೂರ್ನಿಯಲ್ಲಿ ಸತತ 5ನೇ ಗೆಲುವಿನೊಂದಿಗೆ ಕಾಂಗರೂ ಪಡೆ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿತು.

ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 7 ವಿಕೆಟ್ ಕಳೆದುಕೊಂಡು 277 ರನ್​ ಗಳಿಸಿತ್ತು. ಯಸ್ತಿಕಾ ಭಾಟಿಯಾ 83 ಎಸೆತಗಲ್ಲಿ 6 ಬೌಂಡರಿ ಸಹಿತ 59 ರನ್​, ಮಿಥಾಲಿ ರಾಜ್ 96 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್​ ಸಹಿತ 68 ರನ್, ಹರ್ಮನ್​ಪ್ರೀತ್ ಕೌರ್​ 47 ಎಸೆತಗಳಲ್ಲಿ 6 ಬೌಂಡರಿ ಸಹಿತ 57 ರನ್​ ಮತ್ತು ಪೂಜಾ ವಸ್ತ್ರಾಕರ್​ 28 ಎಸೆತಗಳಲ್ಲಿ 34 ರನ್​ಗಳಿಸಿದರು.

ಆಸ್ಟ್ರೇಲಿಯಾ ಪರ ಡಾರ್ಸಿ ಬ್ರೌನ್​ 30ಕ್ಕೆ3, ಅಲಾನಾ ಕಿಂಗ್ 52ಕ್ಕೆ 2 ಮತ್ತು ಜೊನಾಸೆನ್​ 40ಕ್ಕೆ1 ವಿಕೆಟ್​ ಪಡೆದರು. ಇನ್ನು 278 ರನ್​ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಇನ್ನು 3 ಎಸೆತಗಳಿರುವಂತೆ ಗುರಿ ತಲುಪಿತು.

ರಚೇಲ್ ಹೇನ್ಸ್​ 53 ಎಸೆತಗಳಲ್ಲಿ 43, ಅಲಿಸಾ ಹೀಲಿ 65 ಎಸೆತಗಳಲ್ಲಿ 9 ಬೌಂಡರಿ ಸಹಿತ 72, ನಾಯಕಿ ಮೆಗ್​ ಲ್ಯಾನಿಂಗ್ 107 ಎಸೆತಗಳಲ್ಲಿ 13 ಬೌಂಡರಿ ಸಹಿತ 97, ಎಲಿಸ್​ ಪೆರ್ರಿ 51 ಎಸೆತಗಳಲ್ಲಿ 28, ಬೆತ್ ಮೂನಿ 20 ಎಸೆತಗಳಲ್ಲಿ ಅಜೇಯ 30 ರನ್​ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.

ಭಾರತದ ಪರ ಪೂಜಾ ವಸ್ತ್ರಾಕರ್​ 43 ರನ್​ ನೀಡಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್​ ಎನಿಸಿಕೊಂಡರು. ಆದರೆ, ಉಳಿದ ಬೌಲರ್​ಗಳು ವಿಕೆಟ್​ ಪಡೆಯುವಲ್ಲಿ ವಿಫಲರಾದರು. ಹಿರಿಯ ಬೌಲರ್​ ಜೂಲನ್ ಗೋಸ್ವಾಮಿ ರನ್​ ಗತಿಗೆ ಕಡಿವಾಣ ಹಾಕಲು ಮತ್ತು ವಿಕೆಟ್ ಪಡೆಯಲು ವಿಫಲರಾಗಿದ್ದು ಭಾರತಕ್ಕೆ ದೊಡ್ಡ ಹೊಡೆತ ನೀಡಿತು.

ಇದನ್ನೂ ಓದಿ: ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಅತಿ ಹೆಚ್ಚು 50ಕ್ಕಿಂತ ಹೆಚ್ಚು ರನ್ ​: ವಿಶ್ವದಾಖಲೆ ಹಂಚಿಕೊಂಡ ಮಿಥಾಲಿ ರಾಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.