ಕೋಲ್ಕತ್ತಾ: ಸೂರ್ಯಕುಮಾರ್ ಯಾದವ್ ಅಬ್ಬರದ ಬ್ಯಾಟಿಂಗ್ ಮತ್ತು ಸಂಘಟಿತ ಬೌಲಿಂಗ್ ನೆರವಿನಿಂದ ಭಾರತ ತಂಡ ವಿಂಡೀಸ್ ವಿರುದ್ಧ 3ನೇ ಟಿ20 ಪಂದ್ಯವನ್ನು 17 ರನ್ಗಳಿಂದ ಗೆದ್ದು ಟಿ20 ಸರಣಿಯನ್ನೂ 3-0ಯಲ್ಲಿ ವಶಪಡಿಸಿಕೊಂಡಿದೆ.
ಭಾನುವಾರ ಈಡನ್ ಗಾರ್ಡನ್ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನೀಡಿದ್ದ186 ರನ್ಗಳ ಗುರಿ ಬೆನ್ನಟ್ಟಿದ ವಿಂಡೀಸ್ ಪಡೆ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ಗಳನ್ನಷ್ಟೇ ಶಕ್ತವಾಗಿ 17 ರನ್ಗಳ ಸೋಲು ಕಂಡಿತು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕೈಲ್ ಮೇಯರ್ಸ್(6) ಮತ್ತು ಶಾಯ್ ಹೋಪ್(8) ತಂಡದ ಮೊತ್ತ 26 ರನ್ಗಳಾಗುವಷ್ಟರಲ್ಲಿ ಚಾಹರ್ಗೆ ವಿಕೆಟ್ ಒಪ್ಪಿಸಿದರು.
ನಂತರ 3ನೇ ವಿಕೆಟ್ ಒಂದಾದ ವಿಕೆಟ್ ಕೀಪರ್ ನಿಕೋಲಸ್ ಪೂರನ್ ಮತ್ತು ಪೊವೆಲ್ 47 ರನ್ಗಳ ಜೊತೆಯಾಟ ನೀಡಿ ವಿಂಡೀಸ್ ತಂಡಕ್ಕೆ ಚೇತರಿಕೆ ನೀಡಿದರು. 14 ಎಸೆತಗಳಲ್ಲಿ ತಲಾ 2 ಬೌಂಡರಿ ಮತ್ತು ಸಿಕ್ಸರ್ಗಳೊಂದಿಗೆ 25 ರನ್ಗಳಿಸಿ ಅಪಾಯಕಾರಿಯಾಗುತ್ತಿದ್ದ ಪೊವೆಲ್ರನ್ನು ಹರ್ಷಲ್ ಪಟೇಲ್ ತಮ್ಮ ಮೊದಲ ಓವರ್ನಲ್ಲೇ ಪೆವಿಲಿಯನ್ಗಟ್ಟಿದರು. ನಂತರ ಬಂದ ನಾಯಕ ಪೊಲಾರ್ಡ್( 5), ಹೋಲ್ಡರ್(2) ರನ್ನು ವೆಂಕಟೇಶ್ ಅಯ್ಯರ್ ಬಲಿ ಪಡೆದರೆ, ಚೇಸ್ 12 ರನ್ಗಳಿಸಿ ಪಟೇಲ್ಗೆ 2ನೇ ಬಲಿಯಾದರು.
ಆದರೆ ಸೋಲೊಪ್ಪಿಕೊಳ್ಳದ ಏಕಾಂಗಿಯಾಗಿ ಹೋರಾಟ ನಡೆಸಿದ ಪೂರನ್ 47 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 61 ರನ್ಗಳಿಸಿದ್ದ ವೇಳೆ ಠಾಕೂರ್ ಬೌಲಿಂಗ್ನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಕೀಪರ್ ಇಶಾನ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಕೊನೆಯಲ್ಲಿ ರೊಮಾರಿಯೊ ಶೆಫರ್ಡ್ 21 ಎಸೆತಗಳಲ್ಲಿ 1 ಬೌಂಡರಿ 3 ಸಿಕ್ಸರ್ಗಳ ಸಹಿತ 29 ರನ್ಗಳಿಸಿದರಾದರೂ, ಅವರ ಪ್ರಯತ್ನ ತಂಡವನ್ನು ಗೆಲುವಿನ ಗಡಿ ದಾಡಿಸುವುದಕ್ಕೆ ವಿಫಲವಾಯಿತು.
-
That's that from the final T20I as #TeamIndia win by 17 runs to complete a 3-0 clean sweep in the series.
— BCCI (@BCCI) February 20, 2022 " class="align-text-top noRightClick twitterSection" data="
Scorecard - https://t.co/2nbPwNh8dw #INDvWI @Paytm pic.twitter.com/u5z5CzD44b
">That's that from the final T20I as #TeamIndia win by 17 runs to complete a 3-0 clean sweep in the series.
— BCCI (@BCCI) February 20, 2022
Scorecard - https://t.co/2nbPwNh8dw #INDvWI @Paytm pic.twitter.com/u5z5CzD44bThat's that from the final T20I as #TeamIndia win by 17 runs to complete a 3-0 clean sweep in the series.
— BCCI (@BCCI) February 20, 2022
Scorecard - https://t.co/2nbPwNh8dw #INDvWI @Paytm pic.twitter.com/u5z5CzD44b
ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ ಹರ್ಷಲ್ ಪಟೇಲ್ 4 ಓವರ್ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇವರಿಗೆ ಸಾಥ್ ನೀಡಿದ ದೀಪಕ್ ಚಾಹರ್ 15ಕ್ಕೆ 2, ವೆಂಕಟೇಶ್ ಅಯ್ಯರ್ 23ಕ್ಕೆ 2 ವಿಕೆಟ್ ಮತ್ತು ಶಾರ್ದೂಲ್ ಠಾಕೂರ್ 33ಕ್ಕೆ 2 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿರೀಕ್ಷಿತ ಆರಂಭ ಪಡೆಯದಿದ್ದರೂ ಸೂರ್ಯಕುಮಾರ್ ಯಾದವ್ ಮತ್ತು ವೆಂಕಟೇಶ್ ಅಯ್ಯರ್ ಅವರ 91 ರನ್ಗಳ ಜೊತೆಯಾಟದ ನೆರವಿನಿಂದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣರಾದರು. ಯಾದವ್ 31 ಎಸೆತಗಳಲ್ಲಿ 1 ಬೌಂಡರಿ ಮತ್ತು 7 ಸಿಕ್ಸರ್ಗಳ ಸಹಿತ 65 ರನ್ಗಳಿಸಿದರೆ, ಇವರಿಗೆ ಸಾಥ್ ನೀಡಿದ ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ ಅಜೇಯ 35 ರನ್ಗಳಿಸಿದರು.
ಸರಣಿಯಲ್ಲಿ 3ನೇ ಬಾರಿ ಇನ್ನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ 31 ಎಸೆತಗಳಲ್ಲಿ 34 ರನ್ ಮತ್ತು ಸರಣಿಯಲ್ಲಿ ಮೊದಲ ಅವಕಾಶ ಪಡೆದಿದ್ದ ರುತುರಾಜ್ 4 ರನ್ಗಳಿಗೆ ವಿಕೆಟ್ ಒಪ್ಪಿಸಿದರು. 3ನೇ ಕ್ರಮಾಂಕಕ್ಕೆ ಬಡ್ತಿಪಡೆದು ಬಂದ ಶ್ರೇಯಸ್ ಅಯ್ಯರ್ 16 ಎಸೆತಗಳಲ್ಲಿ 25, 4ನೇ ಕ್ರಮಾಂಕಕ್ಕೆ ಹಿಂಬಡ್ತಿ ಪಡೆದಿದ್ದ ರೋಹಿತ್ ಶರ್ಮಾ 15 ಎಸೆತಗಳಲ್ಲಿ 7 ರನ್ಗಳಿಸಿ ಔಟಾದರು.
ವಿಂಡೀಸ್ ಪರ ಜೇಸನ್ ಹೋಲ್ಡರ್, ರಾಸ್ಟನ್ ಚೇಸ್, ಡೊಮೆನಿಕ್ ಡ್ರೇಕ್ಸ್ ಹೇಡನ್ ವಾಲ್ಶ್ ಮತ್ತು ರೊಮಾರಿಯೋ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಯಶ್ ಧುಲ್ ಅವಳಿ ಶತಕ: ಭಾರತಕ್ಕಾಗಿ ಆಡಲು ಯುವ ಬ್ಯಾಟರ್ ಸಿದ್ಧ ಎಂದ ಡೆಲ್ಲಿ ಕೋಚ್