ಕೊಲಂಬೊ: ಮಂಗಳವಾರ ಭಾರತದ ಆಲ್ರೌಂಡರ್ ಕೃನಾಲ್ ಪಾಂಡ್ಯರಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದ್ದರಿಂದ ಶ್ರೀಲಂಕಾ ವಿರುದ್ಧದ 2ನೇ ಟಿ20 ಪಂದ್ಯವನ್ನು ಮುಂದೂಡಿ, ಅವರನ್ನು ಐಸೊಲೇಷನ್ ಮಾಡಿ, ಅವರ ಜೊತೆ ಸಂಪರ್ಕದಲ್ಲಿದ್ದ ಎಲ್ಲಾ 8 ಆಟಗಾರರನ್ನು ಕೊರೊನಾ ಪರೀಕ ಕೊರೊನಾಪರೀಕ್ಷೆಗೆ ಒಳಪಡಿಸಲಾಗಿತ್ತು. ಇದೀಗ ಎಲ್ಲರಿಗೂ ನೆಗೆಟಿವ್ ವರದಿ ಬಂದಿದ್ದು ಬುಧವಾರ ನಡೆಯುವ ಪಂದ್ಯಕ್ಕೆ ಲಭ್ಯರಾಗಲಿದ್ದಾರೆ.
ಪಂದ್ಯಕ್ಕೆ ಕೆಲವೇ ಘಂಟೆಗಳಿದ್ದಾಗ ನಡೆಸಿದ್ದ ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ನಲ್ಲಿ ಕೃನಾಲ್ ಪಾಂಡ್ಯಗೆ ಪಾಸಿಟಿವ್ ಇರುವುದು ಪತ್ತೆಯಾಗಿತ್ತು. ಈ ಕಾರಣದಿಂದ ಪಂದ್ಯವನ್ನು ಬುಧವಾರಕ್ಕೆ ಮುಂದೂಡಲಾಗಿತ್ತು. ಅವರ ಜೊತೆ ಸಂಪರ್ಕದಲ್ಲಿದ್ದ 8 ಕ್ರಿಕೆಟಿಗರನ್ನು ವೈದ್ಯಕೀಯ ತಂಡ ಮತ್ತೊಮ್ಮೆ ಪರೀಕ್ಷೆಗೆ ಒಳಪಡಿಸಿತ್ತು. ಎಲ್ಲರಿಗೂ ನೆಗೆಟಿವ್ ಬಂದಿರುವುದು ಭಾರತ ತಂಡಕ್ಕೆ ನೆಮ್ಮದಿ ತಂದಿದೆ.
ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಲ್ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಮನೀಶ್ ಪಾಂಡೆ, ಕೃಷ್ಣಪ್ಪ ಗೌತಮ್ ಮತ್ತು ಪೃಥ್ವಿ ಶಾ ಕೃನಾಲ್ ಜೊತೆಗೆ ಸಂಪರ್ಕದಲ್ಲಿದ್ದರು ಎಂದು ತಿಳಿದುಬಂದಿದೆ.
ಆದರೆ ಪಾಸಿಟಿವ್ ದೃಢಪಟ್ಟಿರುವ ಕೃನಾಲ್ ಪಾಂಡ್ಯ ಪ್ರಸ್ತುತ ಐಸೊಲೇಷನ್ನಲ್ಲಿದ್ದು, ಮುಂದಿನ ಎರಡು ಟಿ20 ಪಂದ್ಯಗಳಿಂದಲೂ ಅನಿವಾರ್ಯವಾಗಿ ಹೊರಗುಳಿಯಬೇಕಿದೆ. ಏಳು ದಿನಗಳ ಕಡ್ಡಾಯ ಐಸೋಲೇಶನ್ ಪೂರೈಸಿದ ಬಳಿಕ ಏಕಾಂಗಿಯಾಗಿ ಭಾರತಕ್ಕೆ ಮರಳಲಿದ್ದಾರೆ. ಭಾರತ ತಂಡ ಜುಲೈ 30ರಂದು ಭಾರತಕ್ಕೆ ಮರಳಲಿದೆ.
ಇದನ್ನು ಓದಿ: ಕೃನಾಲ್ ಪಾಂಡ್ಯಾಗೆ ಕೊರೊನಾ: ಭಾರತ-ಲಂಕಾ 2ನೇ ಟಿ-20 ಪಂದ್ಯ ನಾಳೆಗೆ ಮುಂದೂಡಿಕೆ