ಗುವಾಹಟಿ : ಭಾರತದ ಆರಂಭಿಕ ಆಟಗಾರ ಕೆಎಲ್ ರಾಹುಲ್ ಈ ಮೊದಲು ನಿಧಾನಗತಿಯ ಬ್ಯಾಟಿಂಗ್ಗೆ ಟೀಕೆಗೆ ಗುರಿಯಾಗಿದ್ದರು. ಏಷ್ಯಾಕಪ್ನಲ್ಲಿ ಅವರ ಆಟ ಮತ್ತು ದಕ್ಷಿಣ ಆಫ್ರಿಕಾದ ಎದುರಿನ ಮೊದಲ ಪಂದ್ಯದಲ್ಲಿ ಅವರ ಸ್ಟ್ರೈಕ್ ರೇಟ್ ನೂರರ ಆಸುಪಾಸಿನಲ್ಲಿತ್ತು. ಈ ಕಾರಣದಿಂದ ರಾಹುಲ್ ಅವಕಾಶ ಸಿಕ್ಕಿದರೂ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂಬ ಟೇಕೆಗಳು ಕೇಳಿ ಬಂದಿದ್ದವು.
-
.@klrahul bags the Player of the Match award as #TeamIndia seal a win in the second #INDvSA T20I. 👍 👍
— BCCI (@BCCI) October 2, 2022 " class="align-text-top noRightClick twitterSection" data="
Scorecard 👉 https://t.co/58z7VHliro pic.twitter.com/HM9gTI7tzo
">.@klrahul bags the Player of the Match award as #TeamIndia seal a win in the second #INDvSA T20I. 👍 👍
— BCCI (@BCCI) October 2, 2022
Scorecard 👉 https://t.co/58z7VHliro pic.twitter.com/HM9gTI7tzo.@klrahul bags the Player of the Match award as #TeamIndia seal a win in the second #INDvSA T20I. 👍 👍
— BCCI (@BCCI) October 2, 2022
Scorecard 👉 https://t.co/58z7VHliro pic.twitter.com/HM9gTI7tzo
ಇವೆಲ್ಲಕ್ಕೂ ಉತ್ತರ ಎಂಬಂತೆ ಭಾನುವಾರ ನಡೆದ ಪಂದ್ಯದಲ್ಲಿ ರಾಹುಲ್, ಟೀಕಾಕಾರರಿಗೆ ಬ್ಯಾಟ್ನಿಂದ ಲೇ ಸರಿಯಾದ ಉತ್ತರವನ್ನು ನೀಡಿದ್ದಾರೆ. ಗುವಾಹಟಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 238 ರನ್‌ಗಳ ಗುರಿಯನ್ನು ದಕ್ಷಿಣ ಆಫ್ರಕಾಕ್ಕೆ ನೀಡಿತ್ತು. ಈ ಪಂದ್ಯದಲ್ಲಿ ಆರಂಭಿಕರಾಗಿ ಬಂದ ರೋಹಿತ್ ಮತ್ತು ರಾಹುಲ್ ಉತ್ತಮ ಓಪನಿಂಗ್ ನೀಡಿದರು.
ಈ ಪಂದ್ಯದಲ್ಲಿ ಕೆಎಲ್ ರಾಹುಲ್ 28 ಎಸೆತಗಳಲ್ಲಿ 57 ರನ್ ಭಾರಿಸಿ ಆಕರ್ಷಕ ಅರ್ಧ ಶತಕ ಗಳಿಸಿದರು. ನಿನ್ನೆಯ ಪಂದ್ಯದಲ್ಲಿ ಅವರ ಸ್ಟ್ರೈಕ್ ರೇಟ್ 203ರಲ್ಲಿತ್ತು. ಟಿ-20 ವಿಭಾಗದಲ್ಲಿ ಬ್ಯಾಟ್ ಬೀಸುವಾಗ 150 ರಿಂದ 180ರ ಮೇಲೆ ಸ್ಟ್ರೈಕ್ ರೇಟ್ ಹೊಂದಿದ್ದರೆ ಬ್ಯಾಟರ್ ಫಾರ್ಮಿನಲ್ಲಿದ್ದಾನೆ ಎಂದು ಹೇಳಲಾಗುತ್ತದೆ.
ಪಂದ್ಯದ ನಂತರ ಮಾತನಾಡಿದ ಕೆಎಲ್ ರಾಹುಲ್, ಸಹ ಆಟಗಾರರೊಂದಿಗೆ ಮಾತನಾಡಿ ಗುರಿ ನಿರ್ಧಾರ ಮಾಡಿಕೊಳ್ಳ ಬೇಕಾಗಿರುತ್ತದೆ. ನಾವು ಹೆಚ್ಚು ಆಕ್ರಮಣಕಾರಿ ಆಡಲು ಚಿಂತಿಸಿದ್ದೆವು. ಹೆಚ್ಚು ರಿಸ್ಕ್ಗಳನ್ನು ತೆಗೆದುಕೊಂಡು ಬ್ಯಾಟ್ ಬೀಸಿದೆವು. ನನ್ನ ಆಟ ನನಗೆ ಖುಷಿ ತಂದಿದೆ, ಈ ರೀತಿ ಇನ್ನಿಂಗ್ಸ್ ಪಂದ್ಯಕ್ಕೆ ಅಗತ್ಯ ಇತ್ತು ಎಂದು ಸಮರ್ಥಿಸಿಕೊಂಡಿದ್ದಾರೆ.
ಮೊದಲ ಪಂದ್ಯದಲ್ಲಿ ಪಿಚ್ ತುಂಬಾ ಕಠಿಣವಾಗಿದ್ದ ಕಾರಣ ನಿಧಾನಗತಿಯಲ್ಲಿ ಬ್ಯಾಟ್ ಬೀಸುವ ಅಗತ್ಯತೆ ಇತ್ತು. ಪಿಚ್ ಮತ್ತು ಬೇಡಿಕೆ ಅನುಗುಣವಾಗಿ ರನ್ ಗಳಿಸ ಬೇಕಾಗುತ್ತದೆ. ಸ್ಟ್ರೈಕ್ ರೇಟ್ 200 ಫ್ಲೆಸ್ ಇರುವಂತೆ ಎಲ್ಲ ಪಂದ್ಯಗಳಲ್ಲೂ ಆಡಲು ಸಾಧ್ಯವಿಲ್ಲ. ಸಂದರ್ಭ ಮತ್ತು ರನ್ನ ಅಗತ್ಯತೆ ನೋಡಿಕೊಂಡು ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂದು ರಾಹುಲ್ ಹೇಳಿದ್ದಾರೆ.
ಹೆಚ್ಚಿನ ಟಾರ್ಗೆಟ್ ಇದ್ದಾಗ ಎದುರಾಳಿ ಬ್ಯಾಟರ್ಗಳು ದಂಡಿಸುವುದು ಸಹಜ. ಹೀಗಾಗಿ ಬೌಲರ್ಗಳು ದುಬಾರಿಯಾದರು. ಎರಡೂ ಪಂದ್ಯಕ್ಕೆ ಪಿಚ್ನಲ್ಲಿ ಇಬ್ಬನಿ ಇದ್ದ ಕಾರಣ ಬೌಲರ್ಗಳಿಗೆ ರನ್ ಕಡಿವಾಣ ಹಾಕಲು ಕಷ್ಟವಾಯಿತು ಎಂದಿರುವ ರಾಹುಲ್, ಬೌಲರ್ಗಳು ಹೆಚ್ಚು ರನ್ ಬಿಟ್ಟುಕೊಟ್ಟಿದ್ದಾರೆ ಎಂಬ ಟೀಕೆಗೂ ಉತ್ತರ ನೀಡಿದರು.
ಇದನ್ನೂ ಓದಿ : ವಿಶ್ವಕಪ್ ಪಂದ್ಯಗಳ ಹಿನ್ನೆಲೆ: ಮಂಗಳವಾರದ ಟಿ 20ಯಿಂದ ಕೊಹ್ಲಿಗೆ ವಿಶ್ರಾಂತಿ ಸಾಧ್ಯತೆ