ಕಾನ್ಪುರ್(ಉತ್ತರ ಪ್ರದೇಶ): ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಆರಂಭಗೊಂಡಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ 105 ರನ್ಗಳ ನೆರವಿನಿಂದ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 345 ರನ್ಗಳಿಸಿತು.
ಇದಕ್ಕೆ ಪ್ರತ್ಯುತ್ತರವಾಗಿ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲ್ಯಾಂಡ್ ತಂಡ ಎರಡನೇ ದಿನದಾಟದಂತ್ಯಕ್ಕೆ ಯಾವುದೇ ವಿಕೆಟ್ ನಷ್ಟವಿಲ್ಲದೇ 129 ರನ್ ಗಳಿಸಿ, ಸುಭದ್ರ ಸ್ಥಿತಿಯಲ್ಲಿದೆ.
-
Stumps on day two in Kanpur 🏏
— ICC (@ICC) November 26, 2021 " class="align-text-top noRightClick twitterSection" data="
The @BLACKCAPS end the day on the front foot after an excellent opening partnership. #WTC23 | #INDvNZ | https://t.co/9OZPrsh0Tm pic.twitter.com/wrPaPeudgj
">Stumps on day two in Kanpur 🏏
— ICC (@ICC) November 26, 2021
The @BLACKCAPS end the day on the front foot after an excellent opening partnership. #WTC23 | #INDvNZ | https://t.co/9OZPrsh0Tm pic.twitter.com/wrPaPeudgjStumps on day two in Kanpur 🏏
— ICC (@ICC) November 26, 2021
The @BLACKCAPS end the day on the front foot after an excellent opening partnership. #WTC23 | #INDvNZ | https://t.co/9OZPrsh0Tm pic.twitter.com/wrPaPeudgj
ಮೊದಲ ದಿನದಾಟದ(ನಿನ್ನೆ) ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 258 ರನ್ಗಳಿಕೆ ಕಲೆ ಹಾಕಿದ್ದ ಟೀಂ ಇಂಡಿಯಾ ಇಂದು ಸೌಥಿ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 87 ರನ್ಗಳಿಕೆ ಮಾಡುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತ್ತು.
50 ರನ್ಗಳಿಕೆ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಜಡೇಜಾ ಇಂದು ಯಾವುದೇ ರನ್ಗಳಿಸದೆ ವಿಕೆಟ್ ಒಪ್ಪಿಸಿದದರು. ನಂತರ ಕ್ರೀಸಿಗೆ ಬಂದ ವೃದ್ಧಿಮಾನ್ ಸಾಹಾ (1) ಮತ್ತೊಮ್ಮೆ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಚೊಚ್ಚಲ ಪಂದ್ಯದಲ್ಲೇ ಶ್ರೇಯಸ್ ಅಯ್ಯರ್ ಶತಕ ಸಿಡಿಸಿ, ವಿಕೆಟ್ ಒಪ್ಪಿಸಿದರು. ಅಶ್ವಿನ್ 38 ರನ್ಗಳಿಸಿ ತಂಡ 300ರ ಗಡಿ ದಾಟಲು ಅನುವಾದರು. ಉಳಿದಂತೆ ಅಕ್ಸರ್ 3, ಉಮೇಶ್ ಯಾದವ್ 10ರನ್ ಗಳಿಸಿದರು.
ಇದನ್ನೂ ಓದಿ: ಮುಂಬೈ ದಾಳಿ ಮರೆಯಲು ಅಸಾಧ್ಯ.. ಹೊಸ ನೀತಿಗಳೊಂದಿಗೆ ಭಯೋತ್ಪಾದನೆ ವಿರುದ್ಧ ಹೋರಾಟ : ನಮೋ
ಸೌಥಿ ಮಾರಕ ಬೌಲಿಂಗ್
ನ್ಯೂಜಿಲ್ಯಾಂಡ್ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಸೌಥಿ 5 ವಿಕೆಟ್, ಜೇಮಿಸನ್ 3 ವಿಕೆಟ್, ಅಜಾಜ್ ಪಟೇಲ್ 2 ವಿಕೆಟ್ ಪಡೆದುಕೊಂಡರು. 345 ರನ್ಗಳಿಗೆ ಪ್ರತಿಯಾಗಿ ಬ್ಯಾಟಿಂಗ್ ಆರಂಭ ಮಾಡಿರುವ ಕಿವೀಸ್ ಉತ್ತಮ ಆರಂಭ ಪಡೆದುಕೊಂಡಿತು. ತಂಡದ ಪರ ಥಾಮ್ ಲಾಥಮ್ ಅಜೇಯ 50 ರನ್ ಹಾಗೂ ವಿಲ್ ಯಂಗ್ ಅಜೇಯ 75 ರನ್ಗಳಿಕೆ ಮಾಡುವ ಮೂಲಕ ಶತಕದಾಟವಾಡಿದ್ದು, ನಾಳೆಗೆ ಬ್ಯಾಟಿಂಗ್ ಕಾಯ್ದಿರಿಸಿಕೊಂಡರು.