ಲಂಡನ್ : ಇಂಗ್ಲೆಂಡ್ ನಡುವಿನ 2ನೇ ಟೆಸ್ಟ್ನಲ್ಲಿ ಭಾರತ ತಂಡ 151 ರನ್ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೈದಾನದ ಹೊರಗೆ ಆಂಗ್ಲ ಅಭಿಮಾನಿಗಳು ಮತ್ತು ಮೈದಾನದಲ್ಲಿ ಆಂಗ್ಲ ಕ್ರಿಕೆಟಿಗರು ಭಾರತೀಯರನ್ನು ಪದೇಪದೆ ಕೆಣಕುತ್ತಿದ್ದರು.
ಇದಕ್ಕೆ ಪಂದ್ಯ ಗೆದ್ದ ನಂತರ ಉತ್ತರಿಸಿರುವ ಕನ್ನಡಿಗ ಕೆ ಎಲ್ ರಾಹುಲ್, ನೀವು ನಮ್ಮ ಒಬ್ಬ ಆಟಗಾರನನ್ನ ಕೆಣಕಿದರೆ, ನಮ್ಮ 11 ಮಂದಿ ಆಟಗಾರರು ತಿರುಗಿ ಬೀಳುತ್ತೇವೆ ಎಂದು ಎದುರಾಳಿಗೆ ಎಚ್ಚರಿಕೆ ಹೊರಡಿಸಿದ್ದಾರೆ.
ಸೋಮವಾರ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಭಾರತ 2ನೇ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ಗೆ 272 ರನ್ಗಳ ಟಾರ್ಗೆಟ್ ನೀಡಿತ್ತು. ಆದರೆ, ಇಂಗ್ಲೆಂಡ್ 51.5 ಓವರ್ಗಳಲ್ಲಿ ಕೇವಲ 120 ರನ್ಗಳಿಗೆ ಆಲೌಟ್ ಆಗುವ ಮೂಲಕ 151 ರನ್ಗಳಿಂದ ಸೋಲು ಕಂಡಿತು. ಆದರೆ, ಪಂದ್ಯದ 4ನೇ ದಿನದಿಂದ ಇಂಗ್ಲೆಂಡ್ ಆಟಗಾರರು ಭಾರತೀಯರನ್ನು ಪದೇಪದೆ ಕೆಣಕುತ್ತಿದ್ದರು. ಭಾರತೀಯರು ಕೂಡ ಇದಕ್ಕೆ ಆ ಕ್ಷಣದಲ್ಲೇ ತಕ್ಕ ಉತ್ತರ ನೀಡಿದ್ದರು.
ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಕನ್ನಡಿಗ ಕೆ ಎಲ್ ರಾಹುಲ್, ವಿಡಂಬನೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ನಮ್ಮ ಒಬ್ಬ ಆಟಗಾರರನ್ನು ಕೆಣಕಿದರೆ, ನಾವು ಎಲ್ಲಾ 11 ಮಂದಿಯೂ ತಿರುಗಿ ಬೀಳುತ್ತೇವೆ ಎಂದು ಹೇಳಿದ್ದಾರೆ.
ಆರಂಭಿಕರಾದ ಮಯಾಂಕ್ ಅಗರ್ವಾಲ್ ಮತ್ತು ಶುಬ್ಮನ್ ಗಿಲ್ ಗಾಯಕ್ಕೆ ತುತ್ತಾದ ಕಾರಣ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದ ರಾಹುಲ್ ಮೊದಲ ಪಂದ್ಯದಲ್ಲಿ 84 ಮತ್ತು 2ನೇ ಪಂದ್ಯದಲ್ಲಿ 129 ರನ್ ಗಳಿಸಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡರು.
ಇದನ್ನು ಓದಿ:ಪದೇ ಪದೇ ಕೆಣಕಿದ ಆಂಗ್ಲರಿಗೆ ಬ್ಯಾಟ್ನಿಂದಲೇ ಉತ್ತರಿಸಿದ ಶಮಿ-ಬುಮ್ರಾ