ಕೊಲಂಬೊ(ಶ್ರೀಲಂಕಾ): ODI ವಿಶ್ವಕಪ್‌ನ ಭಾರತದ ಎದುರು ಭಾರು ಸೋಲನ್ನುಂಡ ಶ್ರೀಲಂಕಾ ತಂಡದ ಮೇಲೆ ತೀವ್ರ ಪರಿಣಾಮ ಬೀರಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಾರ್ಯದರ್ಶಿ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಆದರೆ ಇತ್ತೀಚೆಗೆ ದೇಶದ ಕ್ರೀಡಾ ಸಚಿವಾಲಯವು ಸಂಚಲನ ನಿರ್ಧಾರವನ್ನು ತೆಗೆದುಕೊಂಡಿದೆ. ಅಸ್ತಿತ್ವದಲ್ಲಿರುವ ಕ್ರಿಕೆಟ್ ಮಂಡಳಿಯನ್ನು (SLCB) ರದ್ದುಗೊಳಿಸಿರುವುದಾಗಿ ಶ್ರೀಲಂಕಾ ಕ್ರೀಡಾ ಸಚಿವಾಲಯ ಘೋಷಿಸಿದೆ. ಕ್ರೀಡಾ ಸಚಿವ ರೋಷನ್ ರಣಸಿಂಗ್ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಮಾಜಿ ನಾಯಕ ಅರ್ಜುನ್ ರಣತುಂಗ ನೇತೃತ್ವದ ತಾತ್ಕಾಲಿಕ ಸಮಿತಿಯನ್ನು ನೇಮಿಸಿ ಸಚಿವಾಲಯದ ಕಚೇರಿ ಹೇಳಿಕೆ ನೀಡಿದೆ. ಏಳು ಸದಸ್ಯರ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಇದ್ದಾರೆ. ಹಳೆಯ ಮಂಡಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಮೋಹನ್ ಡಿ ಸಿಲ್ವಾ ಅವರು ರಾಜೀನಾಮೆ ನೀಡಿದ ಒಂದು ದಿನದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವಿಶ್ವಕಪ್‌ನ ಅಂಗವಾಗಿ ಶ್ರೀಲಂಕಾ (SL vs BAN) ಇಂದು ಬಾಂಗ್ಲಾದೇಶವನ್ನು ಎದುರಿಸಲಿದೆ. ಪಂದ್ಯಕ್ಕೂ ಮುನ್ನವೇ ಇಂತಹ ನಿರ್ಧಾರ ಕೈಗೊಂಡಿರುವುದು ಗಮನಾರ್ಹ.
ಮಂಡಳಿಯ ಸದಸ್ಯರಿಗೆ ಅಧಿಕಾರ ನಡೆಸುವ ನೈತಿಕ ಹಕ್ಕಿಲ್ಲ. ಅವರೆಲ್ಲ ಸ್ವಇಚ್ಛೆಯಿಂದ ಕೂಡಲೇ ರಾಜೀನಾಮೆ ನೀಡಿದರೆ ಒಳಿತು. ಆಡಳಿತ ಮಂಡಳಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರಿಂದಾಗಿ ಬೋರ್ಡ್ ತೆರವು ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ಶ್ರೀಲಂಕಾ ಕ್ರೀಡಾ ಸಚಿವ ರೋಷನ್ ರಣಸಿಂಘೆ ಹೇಳಿದ್ದಾರೆ. ಭಾರಿ ಸೋಲು ಕಂಡಿರುವ ಮಂಡಳಿಯ ಟೀಕೆಯಿಂದಾಗಿ ಕಚೇರಿ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಭಾವಿಸಿದ ಕೊಲಂಬೊ ಪೊಲೀಸರು ಭದ್ರತೆ ಕೈಗೊಂಡಿದ್ದಾರೆ.
55ಕ್ಕೆ ಸರ್ವಪತನ ಕಂಡ ಸಿಂಹಳೀಯರು: ಸದ್ಯ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಲಂಕಾ ಪಡೆಯ ಪ್ರದರ್ಶನ ಕಳಪೆಯಾಗುತ್ತಿದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ 8ನೇ ಗೆಲುವು ದಾಖಲಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯಕ್ಕೂ ಮೊದಲು ರೋಹಿತ್ ಶರ್ಮಾ ನಾಯಕತ್ವದ ತಂಡ ಸಿಂಹಳೀಯರು ಸೋಲಿಸಿದ್ದರು. ಲಂಕಾ ಆಟಗಾರರು 19.4 ಓವರ್ಗಳಲ್ಲಿ ಕೇವಲ 55 ರನ್‌ಗಳಿಗೆ ಸರ್ವಪತನ ಕಂಡು ಹೀನಾಯ ಸೋಲುಂಡಿದ್ದರು. ಇದರಿಂದ ಟೀಂ ಇಂಡಿಯಾ ದಾಖಲೆಯ 302 ರನ್ಗಳಿಂದ ಜಯ ಸಾಧಿಸಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ ಎಂಟು ವಿಕೆಟ್ ನಷ್ಟಕ್ಕೆ 357 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ್ದ ಲಂಕಾ ಆಟಗಾರರ ಮೇಲೆ ಆರಂಭದಲ್ಲೇ ಟೀಂ ಇಂಡಿಯಾದ ಬೌಲರ್ಗಳು ಸವಾರಿ ಮಾಡಿದ್ದು, ಕೇವಲ 55 ರನ್‌ಗಳಿಗೆ ಕಟ್ಟಿಹಾಕಿದರು. ಈ ಹೀನಾಯ ಸೋಲಿನ ಪರಿಣಾಮ ಈಗ ಲಂಕಾ ಕ್ರಿಕೆಟ್ ಬೋರ್ಡ್ ಮೇಲೆ ಬೀರಿದೆ.
ಓದಿ: ಶ್ರೀಲಂಕಾವನ್ನು ಇದೇ ವರ್ಷ 3 ಬಾರಿ ಕಡಿಮೆ ರನ್‌ಗಳಿಗೆ ಆಲೌಟ್ ಮಾಡಿತ್ತು ಭಾರತ: ಯಾವಾಗೆಲ್ಲ ಗೊತ್ತೇ?