ETV Bharat / sports

Cricket World Cup: ವಿಶ್ವಕಪ್​ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿದ ಭಾರತ.. ನಾಯಕ ರೋಹಿತ್​ ಶರ್ಮಾ ಹೇಳಿದ್ದು ಹೀಗೆ - ಹಾರ್ದಿಕ್​ ಪಾಂಡ್ಯಗೆ ಏನಾಯ್ತು

Cricket World Cup: 2023ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಸತತ ನಾಲ್ಕನೇ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಟೀಮ್ ಇಂಡಿಯಾ 8 ಅಂಕಗಳನ್ನು ಹೊಂದಿದೆ. ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

Cricket World Cup  We are doing well as a group  Sharma after India record fourth successive win  ವಿಶ್ವಕಪ್​ನಲ್ಲಿ ಸತತ ನಾಲ್ಕನೇ ಗೆಲುವು  ನಾಯಕ ರೋಹಿತ್​ ಶರ್ಮಾ ಹೇಳಿದ್ದು  ಕ ಟೀಂ ಇಂಡಿಯಾ ಸತತ ನಾಲ್ಕನೇ ಗೆಲುವು  2023ರ ವಿಶ್ವಕಪ್‌ನಲ್ಲಿ ಬಾಂಗ್ಲಾ  ಐಸಿಸಿ ಕ್ರಿಕೆಟ್ ವಿಶ್ವಕಪ್ 2023  ತಂಡವನ್ನು ಶ್ಲಾಘಿಸಿದ ರೋಹಿತ್  ಜಡ್ಡು ಆಟಕ್ಕೆ ರೋಹಿತ್​ ಫಿದಾ  ಹಾರ್ದಿಕ್​ ಪಾಂಡ್ಯಗೆ ಏನಾಯ್ತು  ಬಾಂಗ್ಲಾ ವಿರುದ್ಧ ಭಾರತಕ್ಕೆ ಗೆಲುವು
ನಾಯಕ ರೋಹಿತ್​ ಶರ್ಮಾ ಹೇಳಿದ್ದು ಹೀಗೆ
author img

By ETV Bharat Karnataka Team

Published : Oct 20, 2023, 7:11 AM IST

ಪುಣೆ, ಮಹಾರಾಷ್ಟ್ರ: ಇಲ್ಲಿನ ಮೈದಾನದಲ್ಲಿ ನಡೆದ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 (Cricket World Cup) ಪಂದ್ಯದಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿದೆ. ವಿಶ್ವಕಪ್​ನಲ್ಲಿ ಸತತ ನಾಲ್ಕನೇ ಗೆಲುವು ದಾಖಲಿಸಿರುವ ಟೀಂ ಇಂಡಿಯಾ ಪಾಯಿಂಟ್​ ಟೇಬಲ್​ನಲ್ಲಿ 8 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಆಟಗಾರ ಬಗ್ಗೆ ಕೆಲವೊಂದು ವಿಷಯಗಳನ್ನು ಹಂಚಿಕೊಂಡಿದ್ದಾರೆ.

ತಂಡವನ್ನು ಶ್ಲಾಘಿಸಿದ ರೋಹಿತ್​: ಪಂದ್ಯದ ನಂತರ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಇದು ಅದ್ಭುತ ಗೆಲುವು, ನಾವು ಕುತೂಹಲದಿಂದ ಕಾಯುತ್ತಿದ್ದೆವು. ನಾವು ಉತ್ತಮವಾಗಿ ಪ್ರಾರಂಭಿಸಲಿಲ್ಲ. ಆದರೆ, ತಂಡದ ಆಟಗಾರರು ಮಧ್ಯ ಮತ್ತು ಅಂತ್ಯದ ಓವರ್‌ಗಳಲ್ಲಿ ಪಂದ್ಯವನ್ನು ನಮ್ಮ ಕಡೆಗೆ ಎಳೆದರು. ನಮ್ಮ ಫೀಲ್ಡಿಂಗ್ ಎಲ್ಲ ಪಂದ್ಯಗಳಲ್ಲಿ ಅತ್ಯುತ್ತಮವಾಗಿದೆ. ನಮ್ಮ ಬೌಲರ್‌ಗಳು ಯಾವ ಲೆಂಗ್ತ್ ಬೌಲಿಂಗ್ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ನಿಪುಣರಾಗಿದ್ದಾರೆ ಎಂದು ತಂಡದ ಬಗ್ಗೆ ಮಾತನಾಡಿದರು.

ಜಡ್ಡು ಆಟಕ್ಕೆ ರೋಹಿತ್​ ಫಿದಾ: ನಾವು ಒಂದು ಗುಂಪಿನಂತೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಬಾಲ್ ಮತ್ತು ಕ್ಯಾಚಿಂಗ್‌ನಲ್ಲಿ ಜಡ್ಡು ಅತ್ಯುತ್ತಮ ಪ್ರದರ್ಶನ ನೀಡಿದರು. ಅವರ ಆಟ ಅದ್ಭುತವಾಗಿತ್ತು. ತಂಡೋಪತಂಡವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಮೈದಾನದಲ್ಲಿ ಎಲ್ಲರೂ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ರೋಹಿತ್​ ಶರ್ಮಾ ಹೇಳಿದರು.

ಹಾರ್ದಿಕ್​ ಪಾಂಡ್ಯಗೆ ಏನಾಯ್ತು?: ಹಾರ್ದಿಕ್ ಪಾಂಡ್ಯಗೆ ಸ್ವಲ್ಪ ನೋವಿದೆ. ಶುಕ್ರವಾರ ಬೆಳಗ್ಗೆ ಅವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ನಂತರ ಮುಂದಿನ ನಿರ್ಧಾರದ ಬಗ್ಗೆ ಯೋಜಿಸುತ್ತೇವೆ ಎಂದು ರೋಹಿತ್​ ಹೇಳಿದರು.

ಅಭಿಮಾನಿಗಳು ಪ್ರೋತ್ಸಾಹ ಹೆಚ್ಚುತ್ತಿದೆ: ಮೈದಾನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಸ್ಟ್ಯಾಂಡ್‌ಗಳು ತುಂಬುತ್ತಿವೆ, ಅವು ನಮ್ಮನ್ನು ನಿರಾಶೆಗೊಳಿಸುತ್ತಿಲ್ಲ. ಅವರು ಅದ್ಭುತವಾಗಿದ್ದಾರೆ ಮತ್ತು ನಾವು ಮುಂದೆ ಹೋದಂತೆ ಅವರು ನಮ್ಮನ್ನು ಮತ್ತಷ್ಟು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಕ್ರಿಕೆಟ್​ ಅಭಿಮಾನಿಗಳ ಬಗ್ಗೆ ರೋಹಿತ್​ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬಾಂಗ್ಲಾ ವಿರುದ್ಧ ಭಾರತಕ್ಕೆ ಗೆಲುವು: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 256 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 257 ರನ್‌ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ ಟೀಂ ಇಂಡಿಯಾ 41.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿ ಬಾಂಗ್ಲಾದೇಶವನ್ನು 7 ವಿಕೆಟ್‌ಗಳಿಂದ ಸೋಲಿಸಿತು. ಟೀಂ ಇಂಡಿಯಾ ಪರ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ 97 ಎಸೆತಗಳಲ್ಲಿ 103 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ನಾಯಕ ರೋಹಿತ್ ಶರ್ಮಾ ಕೂಡ 40 ಎಸೆತಗಳಲ್ಲಿ 48 ರನ್ ಗಳಿಸಿ ಬಿರುಸಿನ ಆಟವಾಡಿದರು. ಕೆಎಲ್ ರಾಹುಲ್ 34 ರನ್ ಗಳಿಸಿ ವಿರಾಟ್ ಕೊಹ್ಲಿ ಜೊತೆಗೆ ಅಜೇಯರಾಗಿ ಉಳಿದರು.

ಓದಿ: ವಿಶ್ವಕಪ್​: ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿದ ಕೊಹ್ಲಿ; 'ವಿರಾಟ್‌' ಪ್ರದರ್ಶನಕ್ಕೆ ಮಣಿದ ಬಾಂಗ್ಲಾ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.