ETV Bharat / sports

ವಿಶ್ವಕಪ್ 2023: ದೂರು ಆಧರಿಸಿ ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ.. ಮತ್ತೊಮ್ಮೆ ಪಿಸಿಬಿಗೆ ನಿರಾಸೆ - ಮತ್ತೊಮ್ಮೆ ಪಿಸಿಬಿಗೆ ಎದುರಾದ ನಿರಾಸೆ

ಭಾರತ ಪಾಕಿಸ್ತಾನ ಪಂದ್ಯದ ವೇಳೆ ಅಹಮದಾಬಾದ್‌ನಲ್ಲಿ ಪ್ರೇಕ್ಷಕರ ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮಾಡಿರುವ ದೂರಿನ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ.

Action unlikely on PCB complaint on crowd behaviour in Ahmedabad
ವಿಶ್ವಕಪ್ 2023: ಮತ್ತೊಮ್ಮೆ ಪಿಸಿಬಿಗೆ ಎದುರಾದ ನಿರಾಸೆ: ದೂರು ಆಧರಿಸಿ ಐಸಿಸಿ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲ..
author img

By PTI

Published : Oct 19, 2023, 9:11 AM IST

ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ವೇಳೆ ಅಸಭ್ಯ ವರ್ತನೆ ತೋರಿದ ವೀಕ್ಷಕರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ದಾಖಲಿಸಿದ ದೂರಿನ ಆಧಾರದ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯಿಲ್ಲ. ಏಕೆಂದರೆ ತಾರತಮ್ಯ ವಿರೋಧಿ ಸಂಹಿತೆಯ ವ್ಯಾಪ್ತಿಯು ವೈಯಕ್ತಿಕ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿದೆ. ಅದರ ಅಡಿಯಲ್ಲಿ ಸಾರ್ವಜನಿಕರ ಗುಂಪು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರು ಸೇರಿದ್ದರು. ಮೊಹಮ್ಮದ್ ರಿಜ್ವಾನ್ ಔಟಾದ ನಂತರ ಪೆವಿಲಿಯನ್‌ಗೆ ಮರಳುತ್ತಿದ್ದಾಗ, ಪ್ರೇಕ್ಷಕರ ಗುಂಪು ಧಾರ್ಮಿಕ ಘೋಷಣೆಗಳನ್ನು ಕೂಗಿದ್ದರು. ನಂತರ ಪಿಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ದೂರು ಸಲ್ಲಿಸಿತ್ತು. ಭಾರತ ವಿರುದ್ಧ ಏಳು ವಿಕೆಟ್‌ಗಳ ಸೋಲಿನ ಸಂದರ್ಭದಲ್ಲಿ ತಮ್ಮ ಆಟಗಾರರು ಪ್ರೇಕ್ಷಕರ ಗದ್ದಲದಿಂದ ತೊಂದರೆಗೀಡಾದರು ಎಂದು ಪಾಕಿಸ್ತಾನದ ಕ್ರಿಕೆಟ್ ಮಂಡಳಿ ನಿರ್ದೇಶಕ ಮಿಕ್ಕಿ ಆರ್ಥರ್ ಹೇಳಿದ್ದರು. ಐಸಿಸಿ ಈ ದೂರಿನ ಬಗ್ಗೆ ಗಮನಹರಿಸಿದೆ.

'ಐಸಿಸಿ ದೂರನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಆದರೆ, ಈ ಪ್ರಕರಣ ವ್ಯಕ್ತಿಗಳ ಗುಂಪಿಗೆ ಸಂಬಂಧಿಸಿದೆ. ಪಿಸಿಬಿ ಏನು ಬಯಸುತ್ತದೆ ಎಂದು ನನಗೆ ತಿಳಿದಿಲ್ಲ. ಆದರೆ, ಅಸಭ್ಯವಾಗಿ ವರ್ತಿಸಿದ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆ'' ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮತ್ತು ಐಸಿಸಿಯೊಂದಿಗೆ ಕೆಲಸ ಮಾಡಿದ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದರು.

ತಾರತಮ್ಯ ವಿರೋಧಿ ಆರೋಪಗಳಿದ್ದರೆ, ಐಸಿಸಿ ವ್ಯಕ್ತಿಯನ್ನು ಗುರುತಿಸಬಹುದು. ಆದರೆ, ಸಾವಿರಾರು ಜನರು ಘೋಷಣೆಗಳನ್ನು ಕೂಗಿದಾಗ ನೀವು ಏನನ್ನೂ ಮಾಡಲು ಸಾಧ್ಯವಿಲ್ಲ. ಕ್ರೀಡಾಂಗಣಕ್ಕೆ ಎಸೆದ ಯಾವುದೇ ವಸ್ತುವಿನಿಂದ ಯಾವುದೇ ಆಟಗಾರ ಗಾಯಗೊಂಡಿಲ್ಲ. ದೊಡ್ಡ ಪಂದ್ಯಗಳಲ್ಲಿ ಈ ರೀತಿಯ ಒತ್ತಡ ಇರುತ್ತದೆ ಎಂದು ಅವರು ಹೇಳಿದರು. ಪ್ರಮಾಣಿತ ಪ್ರೋಟೋಕಾಲ್‌ನ ಭಾಗವಾಗಿ, ಐಸಿಸಿ ತನ್ನ ಈವೆಂಟ್‌ಗಳ ಸಮಯದಲ್ಲಿ ಜಾಹೀರಾತು ಫಲಕಗಳ ಮೂಲಕ ವರ್ಣಭೇದ ನೀತಿ ಮತ್ತು ಶೂನ್ಯ ಸಹಿಷ್ಣುತೆಯ ನೀತಿಯ ಮೇಲೆ ತನ್ನ ನಿಲುವನ್ನು ಪ್ರದರ್ಶಿಸುತ್ತದೆ.

ಫುಟ್ಬಾಲ್ ಪಂದ್ಯದ ವೇಳೆ ನಡೆದಿತ್ತು ಜನಾಂಗೀಯ ನಿಂದನೆ: ಕ್ರೀಡೆಯಲ್ಲಿ ಸಾಮೂಹಿಕ ವರ್ಣಭೇದ ನೀತಿಯ ಇತ್ತೀಚಿನ ಉದಾಹರಣೆಯೆಂದರೆ, ಬ್ರೆಜಿಲಿಯನ್ ಫುಟ್ಬಾಲ್ ಇಂಟರ್​ನ್ಯಾಷನಲ್​ ಆಟಗಾರ ವಿನಿಶಿಯಸ್ ಜೂನಿಯರ್ ಅವರು, ಕಳೆದ ಋತುವಿನಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ವೇಲೆನ್ಸಿಯಾ ನಡುವಿನ ಲಾ ಲಿಗಾ ಪಂದ್ಯದ ದ್ವಿತೀಯಾರ್ಧದಲ್ಲಿ ಜನಾಂಗೀಯ ನಿಂದನೆಗಳಿಗೆ ಗುರಿಯಾಗಿದ್ದರು. ನಂತರ ಅವರು ಪಿಚ್​ನಿಂದ ಹೊರನಡೆಯುವುದಾಗಿ ಎಚ್ಚರಿಕೆ ನೀಡಿದ್ದರು. ಇದು ವರ್ಣಭೇದ ನೀತಿಯ ಸಾಮೂಹಿಕ ಘೋಷಣೆಗಳ ಪ್ರಕರಣವಾದ್ದರಿಂದ, ದೇಶದ ಫುಟ್‌ಬಾಲ್‌ನ ಆಡಳಿತ ಮಂಡಳಿಯು ವೇಲೆನ್ಸಿಯಾದ ತವರು ಮೈದಾನದ ಮೆಸ್ಟಲ್ಲಾ ಕ್ರೀಡಾಂಗಣದಲ್ಲಿ ಐದು ಪಂದ್ಯಗಳನ್ನು ನಿಷೇಧಿಸಲು ಅನುಮೋದನೆ ನೀಡಲಾಗಿತ್ತು. ಕ್ಲಬ್‌ಗೆ 45,000 ಯೂರೋ ದಂಡವನ್ನು ವಿಧಿಸಲಾಗಿತ್ತು.

ಕ್ಲಬ್ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸಿದ ನಂತರ ಮಂಜೂರಾತಿಯನ್ನು ನಂತರ ಮೂರು ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು. 27,000 ಯುರೋಗಳಿಗೆ ದಂಡವನ್ನು ಇಳಿಕೆ ಮಾಡಲಾಗಿತ್ತು. ಏಳು ಆರೋಪಿಗಳನ್ನು ಸ್ಪ್ಯಾನಿಷ್ ಪೊಲೀಸರು ಬಂಧಿಸಿದ್ದರು. ಆರೋಪಿಗಳಿಗೆ ದೇಶದಲ್ಲಿ ಮೂರು ವರ್ಷಗಳ ಕಾಲ ಸ್ಪೇನ್‌ನ ಯಾವುದೇ ಕ್ರೀಡಾಂಗಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಫರ್ಗುಸನ್, ಸ್ಯಾಂಟ್ನರ್ ದಾಳಿಗೆ ಅಫ್ಘಾನ್ ಅಪ್ಪಚ್ಚಿ; ನ್ಯೂಜಿಲೆಂಡ್‌ಗೆ 149 ರನ್​ಗಳ ಗೆಲುವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.