ETV Bharat / sports

ಟಿ20 ವಿಶ್ವಕಪ್​: ಇಂಗ್ಲೆಂಡ್​ ವಿರುದ್ಧ ಭಾರತ ನಾರಿಯರಿಗೆ 11 ರನ್​ ಸೋಲು

author img

By

Published : Feb 18, 2023, 11:04 PM IST

ಐಸಿಸಿ ಮಹಿಳಾ ಟಿ20 ವಿಶ್ವಕಪ್​- ಭಾರತ ವನಿತೆಯರಿಗೆ ಸೋಲು- ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು- ವೇಗಿ ರೇಣುಕಾ ಸಿಂಗ್ ಮಾರಕ ದಾಳಿ- ಗೆಲುವಿನ ದಡದಲ್ಲಿ ಎಡವಿದ ಭಾರತ

ಟಿ20 ವಿಶ್ವಕಪ್
ಟಿ20 ವಿಶ್ವಕಪ್

ಗೆಬ್ರಾಹ್​(ದಕ್ಷಿಣ ಆಫ್ರಿಕಾ): ಬೆಂಕಿ ಚೆಂಡಿನಂತೆ ದಾಳಿ ಮಾಡಿದ ರೇಣುಕಾ ಸಿಂಗ್​, ಮಿಂಚಿನ ಬ್ಯಾಟಿಂಗ್​ ಮಾಡಿದ ಸ್ಮೃತಿ ಮಂಧಾನ, ರಿಚಾ ಘೋಷ್​ರ ಅದ್ಭುತ ಪ್ರದರ್ಶನ ಹೊರತಾಗಿಯೂ ಭಾರತ ವನಿತೆಯರು ಇಂಗ್ಲೆಂಡ್​ ಮಹಿಳೆಯರ ವಿರುದ್ಧ ಸೋಲು ಕಂಡರು. ಇದು ಈ ಸಾಲಿನ ಐಸಿಸಿ ವಿಶ್ವಕಪ್​ ಟೂರ್ನಿಯಲ್ಲಿ ಮೊದಲ ಪರಾಜಯವಾಗಿದೆ.

ಮೊದಲು ಬ್ಯಾಟ್​ ಮಾಡಿದ ಆಂಗ್ ವನಿತೆಯರು ನೀಡಿದ 151 ರನ್​ಗಳ ಗುರಿ ಬೆನ್ನಟ್ಟಿದ ಭಾರತದ ನಾರಿಯರು 140 ರನ್​ಗಳಿಸಲಷ್ಟೇ ಶಕ್ತರಾಗಿ 11 ರನ್​ಗಳ ಸೋಲು ಕಂಡರು. ಬಲಿಷ್ಠ ಆಂಗ್ಲ ಮಹಿಳೆಯರು 3 ಆಡಿದ 3 ಪಂದ್ಯಗಳಲ್ಲಿ ಗೆದ್ದ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ವಿರಾಜಮಾನರಾದರು. ಅಷ್ಟೇ ಪಂದ್ಯವಾಡಿರುವ ಭಾರತ 2 ರಲ್ಲಿ ಗೆಲುವು 1 ಸೋಲು ಮೂಲಕ 2ನೇ ಸ್ಥಾನದಲ್ಲಿದೆ.

ಟಾಸ್​ ಗೆದ್ದರೂ ಬೌಲಿಂಗ್​ ಆಯ್ದಕೊಂಡ ಭಾರತ, ಆಂಗ್ಲ ಮಹಿಳೆಯರನ್ನು ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದರು. ನಾಯಕಿಯ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡ ವೇಗಿ ರೇಣುಕಾ ಸಿಂಗ್​ ಮೊದಲ ಓವರ್​ನಲ್ಲೇ ಪೆಟ್ಟು ನೀಡಿದರು. ಡೇನಿಯಲ್​ ವ್ಯಾಟ್​ರನ್ನು ಸೊನ್ನೆಗೆ ಔಟ್​ ಮಾಡಿದರು. ಇದಾದ ಬಳಿಕ 3 ನೇ ಓವರ್​ನಲ್ಲಿ ಅಲಿಸಿ ಕ್ಯಾಪ್ಸೆ ವಿಕೆಟ್​ ಕಿತ್ತು ಅದ್ಭುತ ಆರಂಭ ನೀಡಿದರು.

ಇದಾದ ಕೆಲವೇ ನಿಮಿಷಗಳಲ್ಲಿ ಮತ್ತೊಬ್ಬ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲೆಗೆ ರೇಣುಕಾ ಪೆವಿಲಿಯನ್​ ದಾರಿ ತೋರಿಸಿದರು. 29 ರನ್​ಗೆ 3 ಕಳೆದುಕೊಂಡ ಆಂಗ್ಲ ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು. ಈ ವೇಳೆ ಮೈದಾನಕ್ಕಿಳಿದ ನ್ಯಾಟ್​ ಸ್ಕಿವರ್​ ಬರ್ನ್ಟ್​ ಅರ್ಧಶತಕ ಗಳಿಸಿದರು. 42 ಎಸೆತ ಎದುರಿಸಿದ ಸ್ಕಿವರ್​ 5 ಬೌಂಡರಿ ಬಾರಿಸಿದರು. ನಾಯಕಿ ಹೀತರ್​ ನೈಟ್​ 28, ಆ್ಯಮಿ ಜೋನಸ್​ 3 ಬೌಂಡರಿ, 2 ಸಿಕ್ಸರ್​ ಸಮೇತ ಮಿಂಚಿನ ಬ್ಯಾಟ್​ ಮಾಡಿ 40 ರನ್​ ಗಳಿಸಿದರು. ನಿಗದಿತ 20 ಓವರ್​​ಗಳಲ್ಲಿ ಇಂಗ್ಲೆಂಡ್​ 7 ವಿಕೆಟ್​ಗೆ 151 ರನ್​ಗಳ ಸ್ಪರ್ಧಾತ್ಮ ಮೊತ್ತ ಗಳಿಸಿತು.

ರೇಣುಕಾ ಸಿಂಗ್​ ಮಾರಕ ದಾಳಿ: ಪಂದ್ಯದಲ್ಲಿ ಇಂಗ್ಲೆಂಡ್​ಗೆ ಅಕ್ಷರಶಃ ಕಾಡಿದ್ದು ವೇಗಿ ರೇಣುಕಾ ಸಿಂಗ್​. ಆರಂಭಿಕರು ಸೇರಿ 5 ವಿಕೆಟ್​ ಕಿತ್ತ ಸಿಂಗ್​ ಮೈದಾನದ ತುಂಬಾ ಮೆರೆದಾಡಿದರು. ಮಹಿಳಾ ಐಪಿಎಲ್​ನಲ್ಲಿ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡ ಸೇರಿರುವ ರೇಣುಕಾ ತಾವು ಅತ್ಯಂತ ಗಟ್ಟಿಗಿತ್ತಿ ಎಂಬುದನ್ನು ಸಾಬೀತು ಮಾಡಿದರು. ಶಿಖಾ ಪಾಂಡೆ, ದೀಪ್ತಿ ಶರ್ಮಾ ತಲಾ 1 ವಿಕೆಟ್​ ಪಡೆದರು.

ಗೆಲುವಿನ ದಡದಲ್ಲಿ ಎಡವಿದ ಭಾರತ: ಇನ್ನು 151 ರನ್​ಗಳ ಗುರಿ ಬೆನ್ನತ್ತಿದ್ದ ಭಾರತದ ವನಿತೆಯರ ಆರಂಭವೂ ಉತ್ತಮವಾಗಿರಲಿಲ್ಲ. ಮಹಿಳಾ ಸೆಹ್ವಾಗ್​ ಎಂದೇ ಖ್ಯಾತಿಯಾದ ಶೆಫಾಲಿ ವರ್ಮಾ 8 ರನ್​ ಗಳಿಸಿದ್ದಾಗ ಔಟಾದರು. ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್​ 13, ನಾಯಕಿ ಹರ್ಮನ್​ಪ್ರೀತ್​ ಕೌರ್​ 4 ರನ್​ಗೆ ಪೆವಿಲಿಯನ್​ ಸೇರಿದರು.

ಮಂಧಾನ, ರಿಚಾ ಹೋರಾಟ: ತಂಡ ಸತತ ವಿಕೆಟ್​ ಕಳೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಆರಂಭಿಕ ಆಟಗಾರ್ತಿ, ಮಹಿಳಾ ಐಪಿಎಲ್​ನ ದುಬಾರಿ ಆಟಗಾರ್ತಿ ಸ್ಮೃತಿ ಮಂಧಾನ ಘನತೆಗೆ ತಕ್ಕ ಆಟವಾಡಿದರು. 41 ಎಸೆತಗಳಲ್ಲಿ 7 ಬೌಂಡರಿ 1 ಸಿಕ್ಸರ್​ ಸಮೇತ 52 ರನ್​ ಗಳಿಸಿ ತಂಡಕ್ಕೆ ಆಧಾರವಾದರು. ಇವರಿಗೆ ಉತ್ತಮ ಸಾಥ್​ ನೀಡಿದ ರಿಚಾ ಘೋಷ್​ 34 ಎಸೆತದಲ್ಲಿ 4 ಬೌಂಡರಿ 2 ಭರ್ಜರಿ ಸಿಕ್ಸರ್​ಗಳ ಸಮೇತ ಅಜೇಯ 47 ರನ್​ ಗಳಿಸಿದರು.

20 ಓವರ್​ಗಳಲ್ಲಿ ಭಾರತದ ನಾರಿಯರು 5 ವಿಕೆಟ್​ ಕಳೆದುಕೊಂಡು 140 ರನ್​ ಗಳಿಸಿ 11 ರನ್​ ಅಂತರದ ಸೋಲು ಕಂಡರು. ಪಾಕಿಸ್ತಾನದ ಎದುರಿನ ಮೊದಲ ಪಂದ್ಯದಲ್ಲಿ 149 ರನ್​ಗಳನ್ನು ಯಶಸ್ವಿಯಾಗಿ ಚೇಸ್​ ಮಾಡಿದ್ದ ಭಾರತ ಇಂಗ್ಲೆಂಡ್​ ವಿರುದ್ಧ ಮುಗ್ಗರಿಸಿತು.

ಓದಿ: ಬಾರ್ಡರ್​ ಗವಾಸ್ಕರ್​ ಸರಣಿ: ಕುಂಬ್ಳೆ, ಅಶ್ವಿನ್​ ಬಳಿಕ 100 ವಿಕೆಟ್​ ಕಿತ್ತ ನಾಥನ್​ ಲಿಯಾನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.