ETV Bharat / sports

World Cup Theme Song: ನಾಳೆ ಬರಲಿದೆ ವಿಶ್ವಕಪ್​ ಥೀಮ್​ ಸಾಂಗ್ 'ದಿಲ್​ ಜೆಶ್ನ ಬೋಲೆ'..

ದಿಲ್​ ಜೆಶ್ನ ಬೋಲೆ ಎಂಬ ವಿಶ್ವಕಪ್​ ಥೀಮ್​ ಸಾಂಗ್ ನಾಳೆ ಬಿಡುಗಡೆ ಆಗಲಿದೆ. ಈ ಹಾಡಿನ ಮುಖ್ಯಭೂಮಿಕೆಯಲ್ಲಿ ರಣವೀರ್ ಸಿಂಗ್ ಕಾಣಿಸಿಕೊಂಡಿದ್ದಾರೆ.

World Cup Theme Song
World Cup Theme Song
author img

By ETV Bharat Karnataka Team

Published : Sep 19, 2023, 10:55 PM IST

ಹೈದರಾಬಾದ್​: 2023ರ ವಿಶ್ವಕಪ್ ಅಕ್ಟೋಬರ್ 5 ರಂದು ಪ್ರಾರಂಭವಾಗಲಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ ಮೊದಲ ಪಂದ್ಯ ನಡೆಯಲಿದೆ. ಐಸಿಸಿ ವಿಶ್ವಕಪ್​ನ ಅಧಿಕೃತ ಗೀತೆಯನ್ನು ಸೆಪ್ಟೆಂಬರ್ 20 ರಂದು (ಬುಧವಾರ) ಪ್ರಾರಂಭಿಸಲು ಸಜ್ಜಾಗಿದೆ. ಥೀಮ್ ಸಾಂಗ್‌ನಲ್ಲಿ ರಣವೀರ್ ಸಿಂಗ್ ಮತ್ತು ಧನಶ್ರೀ ವರ್ಮಾ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡನ್ನು 'ದಿಲ್​ ಜೆಶ್ನ ಬೋಲೆ' ಎಂದು ಹೆಸರಿಸಲಾಗಿದೆ, ಇದನ್ನು ಜನಪ್ರಿಯ ಸಂಗೀತ ಸಂಯೋಜನೆಯ ಪ್ರೀತಮ್ ಸಂಯೋಜಿಸಿದ್ದಾರೆ.

ಸೆಪ್ಟೆಂಬರ್ 20 ರಂದು ವಿಶ್ವಕಪ್ ಥೀಮ್ ಸಾಂಗ್​ ಅನಾವರಣ: ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್​ ಆ್ಯಪ್​ ಖಾತೆಯಲ್ಲಿ (ಹಿಂದಿನ ಟ್ವಿಟರ್​) ಐಸಿಸಿ ಅಪ್‌ಲೋಡ್ ಮಾಡಿದ ಪೋಸ್ಟರ್‌ನಲ್ಲಿ, ಪ್ರಮುಖ ನಟ ರಣವೀರ್ ನೇವಿ ಬ್ಲೂ ಶರ್ಟ್ ಧರಿಸಿ, ಮರೂನ್ ಬಣ್ಣದ ಬ್ಲೇಜರ್ ಮತ್ತು ಮ್ಯಾಚಿಂಗ್ ಹ್ಯಾಟ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿವಿಧ ದೇಶಗಳ ಅಭಿಮಾನಿಗಳನ್ನೂ ಕಾಣಬಹುದು. ಪೋಸ್ಟ್ ಪ್ರಕಾರ, ಥೀಮ್ ಬುಧವಾರ (ಸೆಪ್ಟೆಂಬರ್ 20) ಮಧ್ಯಾಹ್ನ 12 ಗಂಟೆಗೆ ಹಾಡು ಬಿಡುಗಡೆಗೊಳ್ಳುತ್ತದೆ.

ಆತಿಥೇಯ ಭಾರತ ಅಕ್ಟೋಬರ್ 8 ರಂದು ಐದು ಬಾರಿ ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ. ವಿಶ್ವಕಪ್​ನಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸಲಿವೆ. ಪ್ರತಿ ತಂಡವು ಇತರ ಒಂಬತ್ತು ತಂಡಗಳನ್ನು ರೌಂಡ್ ರಾಬಿನ್ ಮಾದರಿಯಲ್ಲಿ ಆಡುತ್ತದೆ ಮತ್ತು ಅಗ್ರ ನಾಲ್ಕು ತಂಡಗಳು ನಾಕೌಟ್ ಹಂತ ಮತ್ತು ಸೆಮಿ-ಫೈನಲ್‌ಗಳಿಗೆ ಅರ್ಹತೆ ಪಡೆಯುತ್ತವೆ.

ಆಸ್ಟ್ರೇಲಿಯಾ ಸರಣಿ: ವಿಶ್ವಕಪ್​ಗೂ ಮುನ್ನ ಭಾರತ ಆಸ್ಟ್ರೇಲಿಯಾ ವಿರುದ್ಧ ಮೂರು ಏಕದಿನ ಪಂದ್ಯದ ಸರಣಿಯನ್ನು ಆಡಲಿದೆ. ಏಷ್ಯಾಕಪ್​ ಗೆದ್ದಿರುವ ಹುಮ್ಮಸ್ಸಿನಲ್ಲಿದೆ. ಉಭಯ ತಂಡಗಳಿಗೆ ವಿಶ್ವಕಪ್​ ಹಿನ್ನೆಲೆಯಲ್ಲಿ ಈ ಸರಣಿಯಲ್ಲಿ ತಯಾರಿಯ ಭಾಗವಾಗಿದೆ. ನಿನ್ನೆ ಈ ಸರಣಿಗೆ ಭಾರತ ಎರಡು ತಂಡವನ್ನು ಪ್ರಕಟಿಸಿದ್ದು, ಮೊದಲೆರಡು ಪಂದ್ಯಕ್ಕೆ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ, ಕುಲ್ದೀಪ್​ ಯಾದವ್​ ಮತ್ತು ಹಾರ್ದಿಕ್​ ಪಾಂಡ್ಯ ವಿಶ್ರಾಂತಿಯಲ್ಲಿರಲಿದ್ದಾರೆ. ಕೊನೆಯ ಏಕದಿನಕ್ಕೆ ಈ ನಾಲ್ವರು ಆಟಗಾರರು ತಂಡವನ್ನು ಸೇರಿಕೊಳ್ಳುತ್ತಾರೆ. ಅಕ್ಷರ್ ಪಟೇಲ್​ ಗಾಯಗೊಂಡಿರುವ ಕಾರಣ ರವಿಚಂದ್ರನ್​ ಅಶ್ವಿನ್ ಮೂರು ಏಕದಿನ ಪಂದ್ಯಗಳಿಗೆ ಆಯ್ಕೆ ಆಗಿದ್ದಾರೆ.

ವಿಶ್ವಕಪ್​ ಗೆಲ್ಲುವ ಭರವಸೆಯಲ್ಲಿ ಭಾರತ: 2011ರ ವಿಶ್ವಕಪ್​ನ ಕ್ಷಣಗಳು ಮತ್ತೆ ಮರುಕಳಿಸಲಿವೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. 2013ರ ನಂತರ ಭಾರತ ಯಾವುದೇ ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ. ಈ ಬಾರಿ ವಿಶ್ವಕಪ್​ ತವರಿನಲ್ಲಿ ನಡೆಯುತ್ತಿದ್ದು ಗೆಲ್ಲುವ ಫೇವ್​ರೇಟ್ ತಂಡವಾಗಿದೆ. 5 ವರ್ಷಗಳ ನಂತರ ಏಷ್ಯಾಕಪ್​ ಗೆಲ್ಲುವ ಮೂಲಕ ಉತ್ತಮ ಲಯದಲ್ಲಿ ಏಕದಿನ ಕಂಡು ಬಂದಿರುವುದು ಭರವಸೆಯನ್ನು ಇನ್ನಷ್ಟೂ ಹೆಚ್ಚುಮಾಡಿದೆ.

ಇದನ್ನೂ ಓದಿ: ಸಂಜು ಸ್ಥಾನದಲ್ಲಿ ನಾನಿದ್ದರೆ.. ಆಸ್ಟ್ರೇಲಿಯಾ ಸರಣಿಗೆ ಸ್ಯಾಮ್ಸನ್ ಆಯ್ಕೆಯ ಬಗ್ಗೆ ಇರ್ಫಾನ್​ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.