ETV Bharat / sports

8 ವರ್ಷಗಳಲ್ಲಿ 4 ಟಿ20 ವಿಶ್ವಕಪ್ ಸೇರಿ 12 ಐಸಿಸಿ ಟೂರ್ನಿ, ತಂಡಗಳಲ್ಲೂ ಏರಿಕೆ - ಏಕದಿನ ವಿಶ್ವಕಪ್​

2024- 2031ರ ವರೆಗೆ 4 ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮತ್ತು 2 ಚಾಂಪಿಯನ್ಸ್​ ಟ್ರೋಫಿ ಕೂಡ ಆಯೋಜನೆಯಾಗಲಿದೆ. 2027 ಮತ್ತು 2031ರಲ್ಲಿ ಏಕದಿನ ವಿಶ್ವಕಪ್​ ಟೂರ್ನಿ ನಡೆಯಲಿದೆ. ಒಟ್ಟು 2024ರಿಂದ 2031ರವರೆಗೆ 4 ಟಿ20, 4 WTC, ತಲಾ 2 ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಮುಹೂರ್ತ ಇಡಲಾಗಿದೆ

ಐಸಿಸಿ ಟೂರ್ನಮೆಂಟ್​ಗಳು
ಐಸಿಸಿ ಟೂರ್ನಮೆಂಟ್​ಗಳು
author img

By

Published : Jun 2, 2021, 2:31 AM IST

ದುಬೈ: ಟಿ20 ವಿಶ್ವಕಪ್​​ಅನ್ನು ಮುಂದಿನ 8 ವರ್ಷಗಳ ಅವಧಿಯಲ್ಲಿ ಪ್ರತಿ ಎರಡು ವರ್ಷಗಳಿಗೊಮ್ಮೆ ಆಯೋಜಿಸುವುದಕ್ಕೆ ಮಂಗಳವಾರ ನಡೆದ ಸಭೆಯಲ್ಲಿ ಐಸಿಸಿ ನಿರ್ಧರಿಸಿದೆ. ಜೊತೆಗೆ ಏಕದಿನ ವಿಶ್ವಕಪ್​ ತಂಡಗಳ ಸಂಖ್ಯೆಯನ್ನು 14ಕ್ಕೆ ಮತ್ತು ಟಿ20 ವಿಶ್ವಕಪ್​ಗೆ 20ಕ್ಕೆ ವಿಸ್ತರಿಸಿದೆ.

ಇದಲ್ಲದೆ 2031ರ ವರೆಗೆ 4 ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಮತ್ತು 2 ಚಾಂಪಿಯನ್ಸ್​ ಟ್ರೋಫಿ ಕೂಡ ಆಯೋಜನೆಯಾಗಲಿದೆ. 2027 ಮತ್ತು 2031ರಲ್ಲಿ ಏಕದಿನ ವಿಶ್ವಕಪ್​ ಟೂರ್ನಿ ನಡೆಯಲಿದೆ. ಒಟ್ಟು 2024ರಿಂದ 2031ರವರೆಗೆ 4 ಟಿ20, 4 WTC, ತಲಾ 2 ಏಕದಿನ ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಮುಹೂರ್ತ ಇಡಲಾಗಿದೆ.

ಪ್ರಸ್ತುತ ಏಕದಿನ ವಿಶ್ವಕಪ್​ 10 ತಂಡಗಳ ಸ್ಪರ್ಧೆ ಮತ್ತು ಟಿ20 16 ತಂಡಗಳ ಟೂರ್ನಿಯಾಗಿದೆ. ವಿಶ್ವದಾದ್ಯಂತ ಕ್ರಿಕೆಟ್ ವಿಸ್ತರಿಸುವ ಉದ್ದೇಶದಿಂದ ಐಸಿಸಿ ತಂಡಗಳ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿದೆ. ಏಕದಿನ ವಿಶ್ವಕಪ್​ 54 ಪಂದ್ಯಗಳ ಟೂರ್ನಿಯಾದರೆ, ಟಿ20 ವಿಶ್ವಕಪ್​ 55 ಪಂದ್ಯಗಳ ಟೂರ್ನಿಯಾಗಲಿದೆ ಎಂದು ಐಸಿಸಿ ತಿಳಿಸಿದೆ.

ಏಕದಿನ ವಿಶ್ವಕಪ್​ನಲ್ಲಿ 7 ತಂಡಗಳ 2 ಗುಂಪುಗಳಾಗಿ ವಿಂಗಡಿಸಲಾಗುವುದು. ತಲಾ 3 ತಂಡಗಳು ಸೂಪರ್ ಸಿಕ್ಸ್ ಹಂತಕ್ಕೆ ಬರಲಿವೆ. ನಂತರ ಸೆಮಿಫೈನಲ್ ಮತ್ತು ಫೈನಲ್ ನಡೆಯಲಿವೆ. 2003ರ ವಿಶ್ವಕಪ್​ನಂತೆ 2027 ಮತ್ತು 2031ರ ಏಕದಿನ ವಿಶ್ವಕಪ್ ನಡೆಯಲಿವೆ.

ಇನ್ನು ಟಿ20 ವಿಶ್ವಕಪ್​ 5 ತಂಗಳ 4 ಗುಂಪುಗಳಾಗಿ ವಿಂಘಡನೆ ಮಾಡಲಾಗುವುದು. ನಂತರ ಸೂಪರ್​ 8, ಸೆಮಿಫೈನಲ್ ಮತ್ತು ಫೈನಲ್ ಇರಲಿದೆ. ಚಾಂಪಿಯನ್ಸ್​ ಟ್ರೋಫಿ ಎಂದಿನಂತೆ 8ತಂಡಗಳಿರಲಿದ್ದು, ತಲಾ 4 ತಂಡಗಳ 2 ಗುಂಪು, ಸೆಮಿಫೈನಲ್ ಮತ್ತು ಫೈನಲ್​ನಿಂದ ಕೂಡಿರಲಿದೆ ಎಂದು ವಿಶ್ವ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ.

ಇದನ್ನು ಓದಿ:ಟಿ-20 ವಿಶ್ವಕಪ್ ಆಯೋಜನೆ ಕುರಿತು ನಿರ್ಧರಿಸಲು ಜೂ.28ರ ವರೆಗೆ ಸಮಯ ನೀಡಿದ ಐಸಿಸಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.