ದುಬೈ: ಭಾರತದ ಬ್ಯಾಟರ್ಗಳಾದ ಸೂರ್ಯಕುಮಾರ್ ಯಾದವ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ನೀಡಿದ ಉತ್ತಮ ಪ್ರದರ್ಶನದಿಂದ ಐಸಿಸಿ ಟಿ20 ರ‍್ಯಾಂಕಿಂಗ್ ನಲ್ಲಿ ಏರಿಕೆ ಕಂಡಿದ್ದಾರೆ.
ಐಸಿಸಿ ಬಿಡುಗಡೆ ಮಾಡಿದ ಶ್ರೇಯಾಂಕ ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ಬಾಬರ್ ಅಜಂ ಹಿಂದಿಕ್ಕಿ ಜೀವನಶ್ರೇಷ್ಠ 3ನೇ ಶ್ರೇಯಾಂಕ ಪಡೆದರು. ಪಾಕಿಸ್ತಾನದ ಬಾಬರ್ ಅಜಂ ಒಂದು ಸ್ಥಾನ ಕುಸಿದು ನಾಲ್ಕನೇ ರ‍್ಯಾಂಕಿಂಗ್ ಗೆ ಇಳಿಕೆ ಕಂಡಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ 23 ಸ್ಥಾನ ಮೇಲೇರಿ 65 ನೇ ಶ್ರೇಯಾಂಕ ಗಳಿಸಿದ್ದಾರೆ. ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ 1 ಸ್ಥಾನ ಕುಸಿದು 16 ಕ್ಕೆ ಜಾರಿದರೆ, ರೋಹಿತ್ ಶರ್ಮಾ 14 ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಆಲ್ರೌಂಡರ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸವೆಲ್ ಅವರನ್ನು ಹಿಂದಿಕ್ಕಿದ ಹಾರ್ದಿಕ್ ಪಾಂಡ್ಯ 2 ಸ್ಥಾನ ಜಿಗಿದು 5 ನೇ ಶ್ರೇಯಾಂಕ ಪಡೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಭಾರತದ ವೇಗಿ ಭುವನೇಶ್ವರ್ ಕುಮಾರ್ 2 ಸ್ಥಾನ ಕುಸಿದು 9 ಕ್ಕೆ ಬಂದರೆ, 3 ವಿಕೆಟ್ ಪಡೆದು ಮಿಂಚಿದ ಸ್ಪಿನ್ನರ್ ಅಕ್ಸರ್ ಪಟೇಲ್ ಒಮ್ಮೆಲೆ 25 ಸ್ಥಾನ ಜಿಗಿದು 33 ನೇ ಶ್ರೇಯಾಂಕಕ್ಕೆ ಲಗ್ಗೆ ಇಟ್ಟಿದ್ದಾರೆ. ಯಜುವೇಂದ್ರ ಚಹಲ್ ಒಂದು ಶ್ರೇಯಾಂಕ ಕಳೆದುಕೊಂಡು 28 ರಲ್ಲಿದ್ದಾರೆ.
ಓದಿ: ಮಿಥಾಲಿ ರಾಜ್ ದಾಖಲೆ ಉಡೀಸ್, ವಿರಾಟ್ ಕೊಹ್ಲಿ ಸಾಲಿಗೆ ಸ್ಮೃತಿ ಮಂಧಾನಾ..ಏನದು ಗೊತ್ತಾ?