ETV Bharat / sports

T-20 ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಗೆದ್ದ ನಮೀಬಿಯಾ... ಸ್ಕಾಟ್ಲೆಂಡ್​ಗೆ ಶಾಕ್​ - ನಮೀಬಿಯಾ ಗೆಲುವು

ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ತಾನು ಆಡಿರುವ ಮೊದಲ ಪಂದ್ಯದಲ್ಲೇ ಸ್ಕಾಟ್ಲೆಂಡ್ ವಿರುದ್ಧ ಗೆಲುವು ದಾಖಲು ಮಾಡಿರುವ ನಮೀಬಿಯಾ ಶುಭಾರಂಭ ಮಾಡಿದೆ.

ICC T20 World cup
ICC T20 World cup
author img

By

Published : Oct 27, 2021, 11:04 PM IST

ಅಬುಧಾಬಿ: ಐಸಿಸಿ ಟಿ-20 ವಿಶ್ವಕಪ್​​ನ ಸೂಪರ್​​-12 ಗ್ರೂಪ್​ 2 ಹಂತದ ಇಂದಿನ ಮತ್ತೊಂದು ಪಂದ್ಯದಲ್ಲಿ ಸ್ಕಾಟ್ಲೆಂಡ್​ ವಿರುದ್ಧ 4 ವಿಕೆಟ್​ಗಳ ಗೆಲುವು ದಾಖಲು ಮಾಡಿರುವ ನಮೀಬಿಯಾ ವಿಶ್ವಕಪ್​ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ICC T20 World cup
ಸ್ಕಾಟ್ಲೆಂಡ್​ಗೆ ಶಾಕ್​ ನೀಡಿದ ನಮೀಬಿಯಾ

ಅಬುಧಾಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ನಡೆಸಿದ ಸ್ಕಾಟ್ಲೆಂಡ್​ ಮೊದಲ ಓವರ್​​ನಲ್ಲೇ 3 ವಿಕೆಟ್​ ಕಳೆದುಕೊಂಡು ಆಘಾತಕ್ಕೊಳಗಾಯಿತು. ರೊಬೆನ್​ ಎಸೆದ ಮೊದಲ ಓವರ್​ನಲ್ಲೇ ಆರಂಭಿಕ ಬ್ಯಾಟರ್​ಗಳು ಪೆವಿಲಿಯನ್​ ಸೇರಿಕೊಂಡರು. ಇದಾದ ಬಳಿಕ ವಿಕೆಟ್ ಕೀಪರ್ ಕ್ರೊಸ್​​ 19ರನ್​, ಮಧ್ಯಮ ಕ್ರಮಾಂಕದಲ್ಲಿ ಮೈಕಲ್​ ಲಿಸ್ಕ್​​​ ಸ್ಫೋಟಕ 44ರನ್​ ಹಾಗೂ ಕ್ರಿಸ್​ ಗ್ರೀವ್ಸ್​​​​ 25ರನ್​ಗಳಿಕೆ ಮಾಡಿ ತಂಡ 100ರ ಗಡಿ ದಾಟುವಂತೆ ಮಾಡಿದರು. ಅಂತಿಮವಾಗಿ ಸ್ಕಾಟ್ಲೆಂಡ್​ ನಿಗದಿತ 20 ಓವರ್​​ಗಳಲ್ಲಿ 8 ವಿಕೆಟ್​ನಷ್ಟಕ್ಕೆ 109ರನ್​ಗಳಿಕೆ ಮಾಡಿತು.

ನಮೀಬಿಯಾ ಪರವಾಗಿ ರೂಬೆನ್ ಟ್ರಂಪೆಲ್‌ಮನ್​ 3, ಜಾನ್ ಫ್ರಿಲಿಂಕ್ 2, ಡೇವಿಡ್ ವೈಸ್, ಜೆಜೆ ಸ್ಮಿತ್ ತಲಾ 1 ವಿಕೆಟ್ ಪಡೆದು ಮಿಂಚಿದರು.

ಸ್ಕಾಟ್ಲೆಂಡ್​ಗೆ ಶಾಕ್​ ನೀಡಿದ ನಮೀಬಿಯಾ
ಬೌಲಿಂಗ್​ನಲ್ಲಿ ಮಿಂಚಿದ ರೊಬೆನ್​

110ರನ್​ಗಳ ಗುರಿ ಬೆನ್ನತ್ತಿದ ನಮೀಬಿಯಾ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾದ ವಿಲಿಯಮ್ಸ್​​​​ 23, ಮೈಕಲ್​ ವಾನ್​​ 18ರನ್​ಗಳಿಸಿ ತಂಡಕ್ಕೆ ಬದ್ರ ಬುನಾದಿ ಹಾಕಿದರು. ಇದಾದ ಬಳಿಕ ವಿಕೆಟ್ ಕೀಪರ್​​​​ ಗ್ರೀನ್​​ 9ರನ್ ಹಾಗೂ ಕ್ಯಾಪ್ಟನ್​ ಗ್ರಿಲ್ಯಾಂಡ್​ 9ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ನಂತರ ಒಂದಾದ ಡೇವಿಡ್​ ವೈಸ್​​ 16ರನ್​ಗಳಿಕೆ ಮಾಡಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದರು.

ಕೊನೆಯದಾಗಿ ಸ್ಮಿತ್​ ಅಜೇಯ 32ರನ್​ಗಳಿಕೆ ಮಾಡುವ ಮೂಲಕ ತಂಡವನ್ನ 19.1 ಓವರ್​ಗಳಲ್ಲಿ 6ವಿಕೆಟ್​ನಷ್ಟಕ್ಕೆ 115ರನ್​ಗಳಿಕೆ ಮಾಡಿ ಗೆಲುವಿನ ದಡ ಸೇರಿಸಿದರು. ಈ ಗೆಲುವಿನೊಂದಿಗೆ ಸ್ಕಾಟ್ಲೆಂಡ್ ವಿರುದ್ಧ ನಮೀಬಿಯಾ ಗೆಲುವಿನ ಪಯಣ ಮುಂದುವರೆಸಿದ್ದು, ಈ ಹಿಂದಿನ ವಿಶ್ವಕಪ್​​ನಲ್ಲೂ ಆಡಿರುವ 2 ಪಂದ್ಯಗಳಲ್ಲಿ ಗೆಲುವು ದಾಖಲು ಮಾಡಿದೆ.

ಸ್ಕಾಟ್ಲೆಂಡ್​ ಪರ ಲೆಸ್ಕ್​ 2 ವಿಕೆಟ್​, ಬ್ರಾಡ್ಲಿ, ಶರೀಫ್​, ಕ್ರಿಸ್​​ ಹಾಗೂ ಮಾರ್ಕ್ ತಲಾ 1 ವಿಕೆಟ್ ಪಡೆದುಕೊಂಡರು. ಸ್ಕಾಟ್ಲೆಂಡ್​ ವಿಶ್ವಕಪ್​ನಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಸೋಲುವ ಮೂಲಕ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.