ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು 2023ರ ಮಾರ್ಚ್ ತಿಂಗಳ ಪುರುಷರ ಆಟಗಾರ ಪ್ರಶಸ್ತಿಗೆ ಮೂವರನ್ನು ನಾಮನಿರ್ದೇಶನ ಮಾಡಿದೆ. ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್, ಯುಎಇಯ ಆಸಿಫ್ ಖಾನ್ ಮತ್ತು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರನ್ನು ಹೆಸರಿಸಲಾಗಿದ್ದು, ಈ ಮೂವರು ಆಟಗಾರರಲ್ಲಿ ಯಾರಿಗೆ ಪ್ರಶಸ್ತಿ ಸಿಗುತ್ತದೆ ಎಂಬುದು ಮತದಾನದ ನಂತರವಷ್ಟೇ ನಿರ್ಧಾರವಾಗಲಿದೆ.
-
One Test great, one brilliant all-rounder and one Associate talent 🔥
— ICC (@ICC) April 7, 2023 " class="align-text-top noRightClick twitterSection" data="
Have you checked out the nominees for the ICC Men’s Player of the Month for March 2023?
Vote NOW 🗳️ https://t.co/mSRvoqvVOi pic.twitter.com/CyqH8rfxTb
">One Test great, one brilliant all-rounder and one Associate talent 🔥
— ICC (@ICC) April 7, 2023
Have you checked out the nominees for the ICC Men’s Player of the Month for March 2023?
Vote NOW 🗳️ https://t.co/mSRvoqvVOi pic.twitter.com/CyqH8rfxTbOne Test great, one brilliant all-rounder and one Associate talent 🔥
— ICC (@ICC) April 7, 2023
Have you checked out the nominees for the ICC Men’s Player of the Month for March 2023?
Vote NOW 🗳️ https://t.co/mSRvoqvVOi pic.twitter.com/CyqH8rfxTb
ಐಸಿಸಿ ತನ್ನ ಟ್ವಿಟರ್ ಖಾತೆಯಲ್ಲಿ ಮಾರ್ಚ್ ತಿಂಗಳ ಪುರುಷರ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆಟಗಾರರ ಕುರಿತು ಹಂಚಿಕೊಳ್ಳುವ ಮೂಲಕ ಮಾಹಿತಿಯನ್ನು ನೀಡಿದೆ. ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಈ ಮಾರ್ಚ್ ತಿಂಗಳಲ್ಲಿ ಟೆಸ್ಟ್ ಮಾದರಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಆಡಿದ್ದರು. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವಿಲಿಯಮ್ಸನ್ ಅದ್ಭುತ ಪ್ರದರ್ಶನ ನೀಡಿದ್ದರು. ಈ ಸರಣಿಯನ್ನು ನ್ಯೂಜಿಲೆಂಡ್ 2-0 ಅಂತರದಿಂದ ಗೆದ್ದುಕೊಂಡಿತ್ತು.
ಇದನ್ನೂ ಓದಿ: ಸಂಜು ಸ್ಯಾಮ್ಸನ್ ಶೀಘ್ರವೇ ಭಾರತ ತಂಡದ ನಾಯಕನಾಗಲಿದ್ದಾನೆ: ಎಬಿ ಡಿವಿಲಿಯರ್ಸ್ ಭವಿಷ್ಯ
ಈ ಸರಣಿ ಗೆಲುವಿನಲ್ಲಿ ವಿಲಿಯಮ್ಸನ್ ಉತ್ತಮ ಪ್ರದರ್ಶನದೊಂದಿಗೆ ಪ್ರಮುಖ ಪಾತ್ರವಹಿಸಿದ್ದರು. ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅಜೇಯ 121 ರನ್ಗಳನ್ನು ಸಿಡಿಸಿದ್ದರು. ಇದರಿಂದ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಪಂದ್ಯ ಗೆಲ್ಲಲು ಸಾಧ್ಯವಾಗಿತ್ತು. ಇದಾದ ನಂತರ ಮುಂದಿನ ಪಂದ್ಯದಲ್ಲೂ ವಿಲಿಯಮ್ಸನ್ ಭರ್ಜರಿ ಬ್ಯಾಟಿಂಗ್ ಮಾಡಿದ್ದರು.
ಅಲ್ಲದೇ, ವೇಗವಾಗಿ ವಿಲಿಯಮ್ಸನ್ 215 ರನ್ ಬಾರಿಸಿದ್ದರು. ಈ ಮೂಲಕ ವಿಲಿಯಮ್ಸನ್ ಕ್ರಿಕೆಟ್‌ನ ಟೆಸ್ಟ್ನಲ್ಲಿ ಆರು ದ್ವಿಶತಕಗಳನ್ನು ಗಳಿಸಿದ ಬ್ಯಾಟರ್ಗಳ ಸಾಲಿಗೆ ಸೇರಿದ್ದರು. ಮಾರ್ವನ್ ಅಟಪಟ್ಟು, ವೀರೇಂದ್ರ ಸೆಹ್ವಾಗ್, ಜಾವೇದ್ ಮಿಯಾಂದಾದ್, ಯೂನಿಸ್ ಖಾನ್, ರಿಕಿ ಪಾಂಟಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರನ್ನು ದಾಖಲೆಯನ್ನು ಸರಿಗಟ್ಟಿದ್ದಾರೆ. ಹೀಗೆ ಮಾರ್ಚ್ ತಿಂಗಳಲ್ಲಿ ಎರಡು ಟೆಸ್ಟ್ ಪಂದ್ಯಗಳಲ್ಲಿ ವಿಲಿಯಮ್ಸನ್ 337 ರನ್ಗಳನ್ನು ಕಲೆ ಹಾಕಿದ್ದರು.
ಶಕೀಬ್ ಅಲ್ ಹಸನ್... ಮತ್ತೊಂದೆಡೆ, ಮಾರ್ಚ್ ತಿಂಗಳಲ್ಲಿ ಬಾಂಗ್ಲಾದೇಶದ ಆಟಗಾರ ಶಕೀಬ್ ಅಲ್ ಹಸನ್ ಪ್ರದರ್ಶನ ಕೂಡ ಅದ್ಭುತವಾಗಿದೆ. ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯನ್ನು ಇಂಗ್ಲೆಂಡ್ ತಂಡ ಗೆದ್ದುಕೊಂಡಿತ್ತು. ಆದರೆ, ಈ ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿ ಶಕೀಬ್ 141 ರನ್ಗಳನ್ನು ಗಳಿಸಿದ್ದರು. ಅಲ್ಲದೇ, ಬೌಲಿಂಗ್ ಮಾಡಿ ಆರು ವಿಕೆಟ್‌ಗಳನ್ನು ಕಬಳಿಸಿದ್ದರು. ಟಿ20 ಸರಣಿಯಲ್ಲಿ ಶಕೀಬ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶಿಸಿದರು. ಟಿ20 ಸರಣಿಯನ್ನು ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಬಾಂಗ್ಲಾದೇಶವು 3-0 ಅಂತರದಿಂದ ವೈಟ್‌ವಾಶ್ ಮಾಡಿತ್ತು. ಮಾರ್ಚ್ ತಿಂಗಳಲ್ಲಿ ಬಾಂಗ್ಲಾದ ಆಲ್ ರೌಂಡರ್ 12 ಪಂದ್ಯಗಳನ್ನು ಆಡಿದ್ದು, 353 ರನ್ಗಳು ಮತ್ತು 15 ವಿಕೆಟ್‌ಗಳನ್ನು ಪಡೆದಿದ್ದಾರೆ.
ಆಸಿಫ್ ಖಾನ್... ಯುಎಇ ಆಟಗಾರ ಆಸಿಫ್ ಖಾನ್ ಮಾರ್ಚ್ ತಿಂಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ 2ರ ಕೊನೆಯ ಸುತ್ತಿನಲ್ಲಿ ಆಸಿಫ್ ಖಾನ್ ಅದ್ಭುತ ಪ್ರದರ್ಶನ ಕೊಟ್ಟಿದ್ದರು. ಯುಎಇಯನ್ನು ನೇರವಾಗಿ ಅರ್ಹತಾ ಸುತ್ತಿಗೆ ಕೊಂಡೊಯ್ಯುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೇ, ಆಸಿಫ್ ಏಕದಿನ ಪಂದ್ಯದಲ್ಲಿ 42 ಎಸೆತಗಳಲ್ಲಿ 11 ಸಿಕ್ಸರ್ಗಳು ಮತ್ತು 4 ಬೌಂಡರಿಗಳ ಸಮೇತ ಶತಕ ಬಾರಿಸಿ ಮಿಂಚಿದ್ದರು. ಆಸಿಫ್ ಮಾರ್ಚ್‌ನಲ್ಲಿ 9 ಏಕದಿನ ಪಂದ್ಯಗಳನ್ನು ಆಡಿದ್ದು, ಎರಡು ಶತಕ ಮತ್ತು ಎರಡು ಅರ್ಧಶತಕಗಳೊಂದಿಗೆ 403 ರನ್ ಗಳಿಸಿದ್ದಾರೆ.
ಇದನ್ನೂ ಓದಿ: ಸೂರ್ಯ ಕುಮಾರ್ ಯಾದವ್ರನ್ನು ಆಂಡ್ರ್ಯೂ ಸೈಮಂಡ್ಸ್ಗೆ ಹೋಲಿಸಿದ ಪಾಂಟಿಂಗ್