ಧರ್ಮಶಾಲಾ (ಹಿಮಾಚಲ ಪ್ರದೇಶ): ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಈವರೆಗೆ ಸತತ ಮೂರು ಬೃಹತ್ ಗೆಲುವು ದಾಖಲಿಸಿರುವ ದಕ್ಷಿಣ ಆಫ್ರಿಕಾ ವಿರುದ್ಧ ಇಂದು ನೆದರ್ಲೆಂಡ್ ತನ್ನ ಸಾಮರ್ಥ್ಯಕ್ಕೆ ತಕ್ಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಪಂದ್ಯಾರಂಭದಿಂದ ಎಲ್ಲಾ ಬ್ಯಾಟರ್‌ಗಳು ರನ್ ಗಳಿಸುವಲ್ಲಿ ಪರದಾಡಿದರೆ ಕೆಳ ಕ್ರಮಾಂಕದಲ್ಲಿ ನಾಯಕ ಸ್ಕಾಟ್ ಎಡ್ವರ್ಡ್ಸ್ ಗಳಿಸಿದ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ತಂಡ ನಿಗದಿತ 43 ಓವರ್‌ಗಳ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 245 ರನ್ ಗಳಿಸಿತು.
ಭಾರತದ ಅತ್ಯಂತ ಸುಂದರ ಮೈದಾನ ಹಿಮಾಚಲದ ಧರ್ಮಾಶಾಲಾದಲ್ಲಿ ಪಂದ್ಯ ನಡೆಯುತ್ತಿದೆ. ಮಳೆಯಿಂದಾಗಿ ಪಂದ್ಯ ಎರಡು ಗಂಟೆ ತಡವಾಗಿ ಶುರುವಾಯಿತು. ಎರಡೂ ಇನ್ನಿಂಗ್ಸ್‌ನಿಂದ ತಲಾ 7 ಓವರ್ ಕಡಿತ ಮಾಡಿ ಪಂದ್ಯ ಆಡಿಸಲಾಗುತ್ತಿದೆ.
-
🔄 CHANGE OF INNINGS
— Proteas Men (@ProteasMenCSA) October 17, 2023 " class="align-text-top noRightClick twitterSection" data="
🇳🇱Scott Edward(78*) steered his side to a total of 2️⃣4️⃣5️⃣/8️⃣. 🇿🇦KG Rabada, Lungi Ngidi & Marco Jansen lead the bowling attack with 2️⃣ wickets each
🇿🇦 need 2️⃣4️⃣6️⃣runs to win #CWC23 #SAvNED #BePartOfIt pic.twitter.com/qyJznzHYa8
">🔄 CHANGE OF INNINGS
— Proteas Men (@ProteasMenCSA) October 17, 2023
🇳🇱Scott Edward(78*) steered his side to a total of 2️⃣4️⃣5️⃣/8️⃣. 🇿🇦KG Rabada, Lungi Ngidi & Marco Jansen lead the bowling attack with 2️⃣ wickets each
🇿🇦 need 2️⃣4️⃣6️⃣runs to win #CWC23 #SAvNED #BePartOfIt pic.twitter.com/qyJznzHYa8🔄 CHANGE OF INNINGS
— Proteas Men (@ProteasMenCSA) October 17, 2023
🇳🇱Scott Edward(78*) steered his side to a total of 2️⃣4️⃣5️⃣/8️⃣. 🇿🇦KG Rabada, Lungi Ngidi & Marco Jansen lead the bowling attack with 2️⃣ wickets each
🇿🇦 need 2️⃣4️⃣6️⃣runs to win #CWC23 #SAvNED #BePartOfIt pic.twitter.com/qyJznzHYa8
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ಮುಂದೆ ಎರಡು ಅವಕಾಶವಿತ್ತು. ಒಂದು ವಿಕೆಟ್ ಕಾಯ್ದುಕೊಳ್ಳುವುದು, ಮತ್ತೊಂದು ರನ್ ಗಳಿಕೆ. ಡಚ್ಚರು ವಿಕೆಟ್ ಕಾಯ್ದುಕೊಳ್ಳುವ ಪ್ರಯತ್ನದಲ್ಲಿ ರನ್ ಕದಿಯಲಾಗದೇ ವಿಕೆಟ್ ಕೈಚೆಲ್ಲುತ್ತಾ ಸಾಗಿದರು. ಆರಂಭದಲ್ಲಿ ಆಟಗಾರರಿಗೆ ಜೊತೆಯಾಟ ನೀಡಲು ದಕ್ಷಿಣ ಆಫ್ರಿಕಾ ಬೌಲರ್ಗಳು ಬಿಡಲಿಲ್ಲ. ಹೀಗಿದ್ದರೂ ಬ್ಯಾಟರ್‌ಗಳು ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ರನ್ ಕದಿಯಲು ಪ್ರಯತ್ನಿಸಿದರು. ಅಂತಿಮವಾಗಿ ನಾಯಕನ ಏಕಾಂಗಿ ಪ್ರದರ್ಶನದ ನೆರವಿನಿಂದ ತಂಡ 200 ರನ್‌ಗಳ ಗಡಿ ದಾಟಿತು.
ತಂಡ ಒಂದೆಡೆ 20ನೇ ಓವರ್ ವೇಳೆಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ನಾಯಕ ಎಡ್ವರ್ಡ್ಸ್ ಜಾಗರೂಕತೆಯ ಇನ್ನಿಂಗ್ಸ್ ಕಟ್ಟಿದರು. 6,7 ಮತ್ತು 8ನೇ ವಿಕೆಟ್ ಜತೆ ಪಾಲುದಾರಿಗೆ ಮಾಡಿ ತಮ್ಮ ಅರ್ಧಶತಕದಾಟವಾಡಿದರು. 7ನೇ ವಿಕೆಟ್ಗೆ ನಾಯಕನೊಂದಿಗೆ ಸೇರಿದ ರೋಲೋಫ್ ವ್ಯಾನ್ ಡೆರ್ ಮೆರ್ವೆ 64 ರನ್‌ಗಳ ಜೊತೆಯಾಟ ನೀಡಿದರು.
ವ್ಯಾನ್ ಡೆರ್ ಮೆರ್ವೆ 29 ರನ್ ಪೇರಿಸಿದರು. ಸ್ಕಾಟ್ ಎಡ್ವರ್ಡ್ಸ್ ಎಂಟನೇ ವಿಕೆಟ್ ಜತೆಯೂ ಪಾಲುದಾರಿಕೆ ಮಾಡಿ ಅಜೇಯವಾಗುಳಿದರು. ಇನ್ನಿಂಗ್ಸ್ನಲ್ಲಿ 69 ಎಸೆತ ಎದುರಿಸಿ 10 ಬೌಂಡರಿ ಮತ್ತು 1 ಸಿಕ್ಸ್ನ ಸಹಾಯದಿಂದ 78 ರನ್ ಕಲೆಹಾಕಿದರು. 9ನೇ ಕ್ರಮಾಂಕದ ಆಟಗಾರ ಆರ್ಯನ್ ದತ್ತ್ 9 ಎಸೆತಗಳಲ್ಲಿ 3 ಸಿಕ್ಸರ್‌ಸಹಿತ 23 ರನ್‌ಗಳ ಅಜೇಯ ಚುಟುಕು ಇನ್ನಿಂಗ್ಸ್ ಆಡಿದರು. ಇವರುಗಳ ಬ್ಯಾಟಿಂಗ್ ನೆರವಿನಿಂದ ನೆದರ್ಲೆಂಡ್ 43 ಓವರ್ (ಡಿಎಲ್ಎಸ್ ನಿಯಮದಂತೆ) ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 245 ರನ್ ಸೇರಿಸಿದರು.
ದಕ್ಷಿಣ ಆಫ್ರಿಕಾ ಪರ ಮಾರ್ಕೊ ಜೆನ್ಸೆನ್, ಕಗಿಸೊ ರಬಾಡಾ ಮತ್ತು ಲುಂಗಿ ಎನ್‌ಗಿಡಿ ತಲಾ ಎರಡು ವಿಕೆಟ್ ಪಡೆದರೆ, ಕೇಶವ್ ಮಹಾರಾಜ್ ಮತ್ತು ಜೆರಾಲ್ಡ್ ಕೋಟ್ಜಿ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದಿನಿಂದ ಟಿಕೆಟ್ ಮಾರಾಟ