ಕೋಲ್ಕತ್ತಾ (ಪಶ್ಚಿಮ ಬಂಗಾಳ): ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಸತತ ಏಳು ಪಂದ್ಯಗಳನ್ನು ಗೆದ್ದು ಈಗಾಗಲೇ ಸೆಮೀಸ್ಗೆ ಪ್ರವೇಶ ಪಡೆದಿರುವ ರೋಹಿತ್ ಶರ್ಮಾ ಬಳಗದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಎದುರಾಳಿ ತಂಡದಲ್ಲಿ ಒಂದು ಬದಲಾವಣೆ ಆಗಿದ್ದು, ಜೆರಾಲ್ಡ್ ಕೊಯೆಟ್ಜಿಯ ಬದಲಿಗೆ ಸ್ಪಿನ್ನರ್ ತಬ್ರೈಜ್ ಶಮ್ಸಿ ಕಣಕ್ಕಿಳಿಯಲಿದ್ದಾರೆ.
ವಿಶ್ವಕಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಟೀಂ ಇಂಡಿಯಾ 14 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ತಂಡ ತಾನಾಡಿದ 7 ಪಂದ್ಯಗಳಲ್ಲಿ ಒಂದನ್ನು ಮಾತ್ರ ಸೋತು 6ರಲ್ಲಿ ಗೆಲುವು ಸಾಧಿಸಿದೆ. ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 12 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದೆ. ರೋಹಿತ್ ಪಡೆ ಈ ಪಂದ್ಯವನ್ನೂ ಗೆದ್ದು ಅಗ್ರ ಸ್ಥಾನದಲ್ಲಿ ಮುಂದುವರೆಯುವ ಲೆಕ್ಕಾಚಾರದಲ್ಲಿದೆ.
-
🚨 Toss and Team Update 🚨#TeamIndia win the toss and elect to bat first in Kolkata 👌
— BCCI (@BCCI) November 5, 2023 " class="align-text-top noRightClick twitterSection" data="
Follow the match ▶️ https://t.co/iastFYWeDi#CWC23 | #MenInBlue | #INDvSA pic.twitter.com/gvh49Yl6gi
">🚨 Toss and Team Update 🚨#TeamIndia win the toss and elect to bat first in Kolkata 👌
— BCCI (@BCCI) November 5, 2023
Follow the match ▶️ https://t.co/iastFYWeDi#CWC23 | #MenInBlue | #INDvSA pic.twitter.com/gvh49Yl6gi🚨 Toss and Team Update 🚨#TeamIndia win the toss and elect to bat first in Kolkata 👌
— BCCI (@BCCI) November 5, 2023
Follow the match ▶️ https://t.co/iastFYWeDi#CWC23 | #MenInBlue | #INDvSA pic.twitter.com/gvh49Yl6gi
ವಿಶ್ವಸಮರದಲ್ಲಿ ಇದುವರೆಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಹರಿಣಗಳು 3 ಪಂದ್ಯಗಳನ್ನು ಗೆದ್ದು ಮೇಲುಗೈ ಹೊಂದಿದ್ದಾರೆ. ಉಳಿದ 2ರಲ್ಲಿ ಗೆದ್ದಿರುವ ಭಾರತ ಇದನ್ನು ಸರಿಗಟ್ಟುವ ಗುರಿ ಹೊಂದಿದೆ. ಟೂರ್ನಿಯುದ್ದಕ್ಕೂ ನಾಯಕ ರೋಹಿತ್ ಶರ್ಮಾ ಅವರಿಂದ ಹಿಡಿದು ಇಡೀ ತಂಡ ಆಲ್ರೌಂಡ್ ಆಟ ಪ್ರದರ್ಶಿಸಿದೆ. ಅದ್ಭುತ ಬ್ಯಾಟಿಂಗ್ ಹಾಗೂ ಬೌಲಿಂಗ್ನೊಂದಿಗೆ ಗೆಲುವಿನ ನಾಗಾಲೋಟ ಮುಂದುವರೆಸಿಕೊಂಡು ಬಂದಿದೆ. ಇದನ್ನು ಇಂದಿನ ಪಂದ್ಯದಲ್ಲೂ ಮುಂದುವರೆಸಿಕೊಂಡು ಹೋಗುವ ಇರಾದೆಯನ್ನು ಟೀಂ ಇಂಡಿಯಾ ಹೊಂದಿದೆ.
ಇದನ್ನೂ ಓದಿ: ಬರ್ತ್‌ಡೇ ಬಾಯ್ ವಿರಾಟ್ ಕೊಹ್ಲಿಗೆ ಬೆಂಗಾಲ್ ಕ್ರಿಕೆಟ್ ಸಂಸ್ಥೆಯಿಂದ ಚಿನ್ನ ಲೇಪಿತ ಬ್ಯಾಟ್ ಗಿಫ್ಟ್
-
Rohit Sharma wins the toss and India bat first in Kolkata 🏏#CWC23 | #INDvSA 📝: https://t.co/mJRnUHjz5z pic.twitter.com/sSlCW650BD
— ICC (@ICC) November 5, 2023 " class="align-text-top noRightClick twitterSection" data="
">Rohit Sharma wins the toss and India bat first in Kolkata 🏏#CWC23 | #INDvSA 📝: https://t.co/mJRnUHjz5z pic.twitter.com/sSlCW650BD
— ICC (@ICC) November 5, 2023Rohit Sharma wins the toss and India bat first in Kolkata 🏏#CWC23 | #INDvSA 📝: https://t.co/mJRnUHjz5z pic.twitter.com/sSlCW650BD
— ICC (@ICC) November 5, 2023
ವಿರಾಟ್ಗೆ ಮಹತ್ವದ ಪಂದ್ಯ: ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರಿಗೆ ಇಂದಿನ ಪಂದ್ಯ ಮಹತ್ವದ್ದಾಗಿದೆ. ಇಂದು ತಮ್ಮ 35ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ರನ್ ಮಷಿನ್, ಇದೇ ಈಡನ್ ಗಾರ್ಡನ್ನಲ್ಲಿ ತಮ್ಮ ಚೊಚ್ಚಲ ಅಂತರರಾಷ್ಟ್ರೀಯ ಶತಕ ಸಿಡಿಸಿದ್ದರು. ಇಂದು ತಮ್ಮ ಹುಟ್ಟುಹಬ್ಬದ ದಿನವೇ ಮೈದಾನಕ್ಕಿಳಿಯುತ್ತಿದ್ದು, 49ನೇ ಶತಕದ ನಿರೀಕ್ಷೆಯಲ್ಲಿದ್ದಾರೆ. ದಿಗ್ಗಜ ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಬಾರಿಸಿದ ದಾಖಲೆ ಹೊಂದಿದ್ದು, ಈ ದಾಖಲೆ ಸರಿಗಟ್ಟುವ ಮೂಲಕ ಕಿಂಗ್ ಕೊಹ್ಲಿ ಇಂದಿನ ಪಂದ್ಯವನ್ನು ಅವಿಸ್ಮರಣೀಯವಾಗಿಸಿಕೊಳ್ಳಲು ಸಜ್ಜಾಗಿದ್ದಾರೆ.
ತಂಡಗಳು ಇಂತಿವೆ- ಭಾರತ: ರೋಹಿತ್ ಶರ್ಮಾ(ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಕಗಿಸೊ ರಬಾಡ, ಲುಂಗಿ ನಗಿಡಿ
ಇದನ್ನೂ ಓದಿ: ಹ್ಯಾಪಿ ಬರ್ತ್‌ಡೇ ಕೊಹ್ಲಿ! ಇಂದಿನ ಪಂದ್ಯದಲ್ಲಿ ಸಚಿನ್ ದಾಖಲೆ ಸರಿಗಟ್ಟುವರೇ 'ರನ್ ಮಷಿನ್'?