ETV Bharat / sports

ಬೈರ್‌ಸ್ಟೋವ್, ಮಲಾನ್, ರೂಟ್ ಭರ್ಜರಿ ಬ್ಯಾಟಿಂಗ್: ಬಾಂಗ್ಲಾದೇಶಕ್ಕೆ 365 ರನ್​ ಗುರಿ - ETV Bharath Kannada news

Cricket World Cup 2023 England vs Bangladesh Match: ಇಂಗ್ಲೆಂಡ್ ತಂಡ ಇಂದು ಬಾಂಗ್ಲಾದೇಶದ ವಿರುದ್ಧ ಚಾಂಪಿಯನ್​ ಆಟ ಪ್ರದರ್ಶಿಸಿತು. ಮೊದಲ ಪಂದ್ಯದ ಸೋಲಿನ ನಂತರ ಪುಟಿದೆದ್ದ ಆಂಗ್ಲರು ಧರ್ಮಶಾಲಾ ಮೈದಾನದಲ್ಲಿ ರನ್ ಮಳೆ ಸುರಿಸಿದರು.

ICC Cricket World Cup
ICC Cricket World CupICC Cricket World Cup
author img

By ETV Bharat Karnataka Team

Published : Oct 10, 2023, 3:17 PM IST

ಧರ್ಮಶಾಲಾ (ಹಿಮಾಚಲ ಪ್ರದೇಶ): ಡೇವಿಡ್ ಮಲಾನ್ ಶತಕ, ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಅರ್ಧಶತಕದ ಬಲದಿಂದ ಬಾಂಗ್ಲಾದೇಶದ ವಿರುದ್ಧ ಇಂಗ್ಲೆಂಡ್​ 364 ರನ್​ಗಳ ಬೃಹತ್​ ಇನ್ನಿಂಗ್ಸ್​​ ಕಟ್ಟಿತು. ಮೊದಲ ಪಂದ್ಯದಲ್ಲಿ ದೊಡ್ಡ ಸೋಲು ಕಂಡಿರುವ ಆಂಗ್ಲರು​ ರನ್‌ರೇಟ್​ ಹೆಚ್ಚಿಸಿಕೊಳ್ಳಲು ಬಾಂಗ್ಲಾ ವಿರುದ್ಧ ಉತ್ತಮ ಬ್ಯಾಟಿಂಗ್​ ಪ್ರದರ್ಶನ ನೀಡಿದರು. ವಿಶ್ವಕಪ್​ನ ಎರಡನೇ ಗೆಲುವಿಗೆ ಶಕೀಬ್​ ತಂಡ 365 ರನ್ ಗಳಿಸಬೇಕಿದೆ.

ಟಾಸ್​ ಗೆದ್ದ ಬಾಂಗ್ಲಾ ನಾಯಕ ಶಕೀಬ್ ಆಂಗ್ಲರಿಗೆ ಬ್ಯಾಟಿಂಗ್​ ಆಹ್ವಾನ ನೀಡಿದರು. ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್​ ತಂಡದಿಂದ ಯಾವುದೇ ದೊಡ್ಡ ಜೊತೆಯಾಟ ಮೂಡಿ ಬಂದಿರಲಿಲ್ಲ. ಇದರಿಂದ 50 ಓವರ್​ಗಳಿಗೆ 300ಕ್ಕೂ ಹೆಚ್ಚಿನ ರನ್​ ಗಳಿಸುವಲ್ಲಿ ತಂಡ ಎಡವಿತ್ತು. ಆದರೆ ಇಂದು ಆಂಗ್ಲರು ಮೊದಲ ಮೂರು ವಿಕೆಟ್​ಗೆ ಉತ್ತಮ ಜೊತೆಯಾಟ ನೀಡಿದರು. ಬಾಂಗ್ಲಾ ಬೌಲರ್​ಗಳು ಟಾರ್ಗೆಟ್‌ 400ರ ಗಡಿ ತಲುಪದಂತೆ ನೋಡಿಕಂಡರು.

ಜಾನಿ ಬೈರ್‌ಸ್ಟೋವ್ ಮತ್ತು ಡೇವಿಡ್ ಮಲಾನ್ ಮೊದಲ ವಿಕೆಟ್​ಗೆ 115 ರನ್​ನ ಪಾಲುದಾರಿಕೆ ಮಾಡಿದರು. ಬೈರ್‌ಸ್ಟೋವ್ (52) ವಿಕೆಟ್​ ಪಡೆಯುವ ಮೂಲಕ ಶತಕದ ಜೊತೆಯಾಟವನ್ನು ಶಕೀಬ್​ ಬ್ರೇಕ್​ ಮಾಡಿದರು. ನಂತರ ರೂಟ್​ ಜೊತೆ ಆರಂಭಿಕ ಮಲಾನ್​ ಮತ್ತೊಂದು ಬೃಹತ್​ ಇನ್ನಿಂಗ್ಸ್​ ಕಟ್ಟಿದರು. ಈ ಜೋಡಿ ಎರಡನೇ ವಿಕೆಟ್​ಗೆ 151 ರನ್​ನ ಜೊತೆಯಾಟವಾಡಿತು. ಡೇವಿಡ್​ ಮಲಾನ್​ ಶತಕದಾಟವಾಡಿದರು. 107 ಎಸೆತಗಳನ್ನು​ ಎದುರಿಸಿದ ಮಲಾನ್​ 16 ಬೌಂಡರಿ ಮತ್ತು 5 ಸಿಕ್ಸ್​ನಿಂದ 140 ರನ್​ ಗಳಿಸಿ ಶೋರಿಫುಲ್ ಇಸ್ಲಾಂಗೆ ವಿಕೆಟ್​ ಕೊಟ್ಟರು.

ನಾಯಕ ಬಟ್ಲರ್​​ 20 ರನ್​ಗಳ ಸಣ್ಣ ಇನ್ನಿಂಗ್ಸ್​ ಆಡಿದರು. ಇವರ ವಿಕೆಟ್​ ಬೆನ್ನಲ್ಲೇ 82 ರನ್​ ಗಳಿಸಿ ಆಡುತ್ತಿದ್ದ ರೂಟ್​ ಸಹ ಪೆವಿಲಿಯನ್​ ಹಾದಿ ಹಿಡಿದರು. ಪ್ರಮುಖ ನಾಲ್ಕು ವಿಕೆಟ್​ಗಳ ಪತನದ ಬೆನ್ನಲ್ಲೇ ಇಂಗ್ಲೆಂಡ್​ ಕುಸಿತ ಕಂಡಿತು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಯಾವುದೇ ಆಟಗಾರ ಆಧಾರ ಆಗಲಿಲ್ಲ. ಇಂಗ್ಲೆಂಡ್​ ತಂಡದಲ್ಲಿ 11ನೇ ಆಟಗಾರನಿಗೂ ಬ್ಯಾಟಿಂಗ್​ ಸಾಮರ್ಥ್ಯ ಇದೆ. ಆದರೆ ಬಾಂಗ್ಲಾ ಸ್ಪಿನ್ನರ್‌ಗಳ ದಾಳಿಯ ಮುಂದೆ ಇವರ ಆಟ ನಡೆಯಲಿಲ್ಲ. 41ನೇ ಓವರ್​​ನಲ್ಲಿ 3 ವಿಕೆಟ್​ ಕಳೆದುಕೊಂಡಿದ್ದ ಇಂಗ್ಲೆಂಡ್​ 9 ಓವರ್​ಗೆ ಉಳಿದ 7 ವಿಕೆಟ್​ ಕಳೆದುಕೊಂಡಿತ್ತು.

ಮಹೇದಿ ಹಸನ್ ಬಾಂಗ್ಲಾದೇಶ ಪರ ಕೊನೆಯ ಓವರ್​ಗಳಲ್ಲಿ ಪರಿಣಾಮಕಾರಿಯಾದರು. ಆರಂಭಿಕ ವಿಕೆಟ್​ಗಳು ರನ್​ ಗಳಿಸಿದ್ದರಿಂದ ನಂತರ ಬಂದ ಆಟಗಾರರು ಅಬ್ಬರಿಸಲು ಹೋಗಿ ವಿಕೆಟ್​ ಕೊಟ್ಟರು. ಹಸನ್​ ನಾಲ್ಕು ವಿಕೆಟ್​ ಪಡೆದರೆ, ಶೋರಿಫುಲ್ ಇಸ್ಲಾಂ 3 ವಿಕೆಟ್​ ಪಡೆದರು. ತಸ್ಕಿನ್ ಅಹ್ಮದ್ ಮತ್ತು ನಾಯಕ ಶಕೀಬ್​ ತಲಾ ಒಂದು ವಿಕೆಟ್​ ಪಡೆಯುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ: ICC Cricket World Cup 2023 : ಟಾಸ್​ ಗೆದ್ದು ಇಂಗ್ಲೆಂಡ್​ಗೆ ಬ್ಯಾಟಿಂಗ್​ಗೆ​ ಆಹ್ವಾನ ನೀಡಿದ ಬಾಂಗ್ಲಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.