ETV Bharat / sports

ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಐತಿಹಾಸಿಕ ಫಲಿತಾಂಶ: ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ಗೆ ಸೋಲುಣಿಸಿದ ಅಫ್ಘಾನಿಸ್ತಾನ

author img

By ETV Bharat Karnataka Team

Published : Oct 15, 2023, 9:45 PM IST

Updated : Oct 15, 2023, 10:24 PM IST

ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆದ ವಿಶ್ವಕಪ್​ ಕ್ರಿಕೆಟ್‌ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಹೊರಬಿತ್ತು.

ICC Cricket World Cup 2023
ICC Cricket World Cup 2023

ನವದೆಹಲಿ: ಹಾಲಿ ಚಾಂಪಿಯನ್​ ಇಂಗ್ಲೆಂಡ್ ತಂಡವು​ ಅಫ್ಘಾನಿಸ್ತಾನದ ಬಿಗು ಬೌಲಿಂಗ್​ ಮುಂದೆ ತತ್ತರಿಸಿತು. ರಶೀದ್ ಖಾನ್, ಮುಜೀಬ್ ಉರ್ ರಹಮಾನ್ ಮತ್ತು ಮೊಹಮ್ಮದ್ ನಬಿ ಅವರ ದಾಳಿಗೆ ಕ್ರಿಕೆಟ್​ ಜನಕರ ನಾಡಿನ ಬ್ಯಾಟರ್​ಗಳು ತರಗಲೆಗಳಂತೆ ಉದುರಿದರು. ಅಫ್ಘಾನಿಸ್ತಾನ​ ತಂಡ ಆಂಗ್ಲರನ್ನು 69 ರನ್​ನಿಂದ ಮಣಿಸಿ ಇತಿಹಾಸ ನಿರ್ಮಿಸಿತು.

ವಿಶ್ವಕಪ್​ನ ಟಾಪ್​ ನಾಲ್ಕು ತಂಡಗಳೆಂದು ಗುರುತಿಸಲ್ಪಡುವ ಇಂಗ್ಲೆಂಡ್​ ಕಳಪೆ ಬ್ಯಾಟಿಂಗ್​ನಿಂದಾಗಿ ಇಂದು ಅಫ್ಘಾನ್​ ವಿರುದ್ಧ ಮಣಿಯಿತು. ಸ್ಟಾರ್​ ಬ್ಯಾಟರ್​ಗಳ ದಂಡು ಹಶ್ಮತುಲ್ಲಾ ಶಾಹಿದಿ ಅವರ ತಂಡದ ಕರಾರುವಾಕ್ ಬೌಲಿಂಗ್​ ದಾಳಿಗೆ ಥಂಡಾ ಹೊಡೆಯಿತು. ಫ್ಲಾಟ್​ ಪಿಚ್​ ದೆಹಲಿಯ ಫಿರೋಜ್​ ಶಾ ಕೋಟ್ಲಾದಲ್ಲಿ ಸ್ಪಿನ್ನರ್​ಗಳು ಕಮಾಲ್​ ಮಾಡಿದರು. ಅಫ್ಘಾನ್​ ಪರ ಸ್ಪಿನ್ನರುಗಳು 8 ವಿಕೆಟ್ ಉರುಳಿಸಿದರು.

ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಅಫ್ಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್ ಮತ್ತು ಇಕ್ರಮ್ ಅಲಿಖಿಲ್ ಅವರ ಅರ್ಧಶತಕದ ನೆರವಿನಿಂದ 285 ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ ಇಂಗ್ಲೆಂಡ್​ಗೆ ಯಾವುದೇ ದೊಡ್ಡ ಜೊತೆಯಾಟದ ನೆರವು ಬರಲಿಲ್ಲ. ಹ್ಯಾರಿ ಬ್ರೂಕ್​ ಏಕಾಂಗಿಯಾಗಿ ಅರ್ಧಶತಕ ಸಿಡಿಸಿದ್ದು ಪಂದ್ಯದ ಫಲಿತಾಂಶವನ್ನು ಬದಲಿಸಲು ಸಾಧ್ಯವಾಗಲಿಲ್ಲ. ಅಂತಿಮ ಹಂತದಲ್ಲಿ ಬಾಲಂಗೋಚಿಗಳ ಬ್ಯಾಟಿಂಗ್​, ಸೋಲಿನ ಅಂತರ ತಗ್ಗಿಸಿತು ಬಿಟ್ಟರೆ ಬೇರಾವುದೇ ಪರಿಣಾಮ ಬೀರಲಿಲ್ಲ.

ಆರಂಭಿಕ ಆಘಾತ: ಫಜಲ್ಹಕ್ ಫಾರೂಕಿ ಇನ್ನಿಂಗ್ಸ್​ನ ಎರಡನೇ ಓವರ್​ನಲ್ಲೇ ಹೊಡಿಬಡಿ ದಾಂಡಿಗ ಜಾನಿ ಬೈರ್‌ಸ್ಟೋವ್​ (2) ವಿಕೆಟ್​ ಕಿತ್ತರು. ಅವರ ಬೆನ್ನಲ್ಲೇ ಇಂಗ್ಲೆಂಡ್​ ಸ್ಟಾರ್​ ಆಟಗಾರ ಜೋ ರೂಟ್​ (11) ವಿಕೆಟ್​ ಕಳೆದುಕೊಂಡರು. ಅಫ್ಘಾನ್​ ಬೌಲಿಂಗ್​ಗೆ ಎರಡು ವಿಕೆಟ್​ ಬಿದ್ದಾಗ ಎಚ್ಚೆತ್ತ ಆಂಗ್ಲರು ಜಾಗರೂಕತೆಯ ಆಟಕ್ಕೆ ಮುಂದಾದರು. ಇನ್ನೋರ್ವ ಆರಂಭಿಕ ಡೇವಿಡ್ ಮಲಾನ್ ಮತ್ತು ಹ್ಯಾರಿ ಬ್ರೂಕ್​ ತಾಳ್ಮೆಯಿಂದ ಇನ್ನಿಂಗ್ಸ್​ ಕಟ್ಟಿದರು.

ಬ್ರೂಕ್​ಗೆ ಸಿಗದ ಸಾಥ್: ಹ್ಯಾರಿ ಬ್ರೂಕ್​ ಅಫ್ಘಾನ್​ ದಾಳಿಯನ್ನು ಉತ್ತಮವಾಗಿ ಎದುರಿಸಿದರೂ ಅವರಿಗೆ ಯಾರೂ ಸಾಥ್​​ ನೀಡಲಿಲ್ಲ. ಬ್ರೂಕ್​ ಮತ್ತು ಮಲಾನ್ ನಡುವೆ 35 ರನ್​ಗಳ ಜೊತೆಯಾಟ ನಿರ್ಮಾಣ ಆಗಿತ್ತು. ಈ ವೇಳೆ ನಬಿ ಅಫ್ಘಾನ್​ಗೆ ವಿಕೆಟ್​ ತಂದುಕೊಟ್ಟರು. ಇದಾದ ನಂತರ ಅಫ್ಘಾನಿಗಳ ಕೈಚಳಕಕ್ಕೆ ಇಂಗ್ಲೆಂಡ್​ ಮಂತ್ರಮುಗ್ಧವಾಯಿತು. ಇಂಗ್ಲೆಂಡ್​ ಆಟಗಾರರು ಕ್ರೀಸ್​ಗೆ ಬಂದು ಪೆವಿಲಿಯನ್​ ಪರೇಡ್​ ಮಾಡತೊಡಗಿದರು.

ಜೋಸ್ ಬಟ್ಲರ್ (9), ಲಿಯಾಮ್ ಲಿವಿಂಗ್‌ಸ್ಟೋನ್(10), ಸ್ಯಾಮ್ ಕರ್ರಾನ್ (10) ಮತ್ತು ಕ್ರಿಸ್ ವೋಕ್ಸ್ (9) ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ವಿಕೆಟ್​ ಒಪ್ಪಿಸಿದರು. ಇಷ್ಟು ವಿಕೆಟ್​​ಗಳು ಉರುಳಿದರೂ ಬ್ರೂಕ್​ ತಮ್ಮ ಆಟವನ್ನು ಇನ್ನೊಂದು ಬದಿಯಲ್ಲಿ ಮುಂದುವರೆಸಿದರು. ಅನನುಭವಿ ಯುವ ಆಟಗಾರ ಬ್ರೂಕ್ ತಮ್ಮ ಚೊಚ್ಚಲ ಏಕದಿನ ಅರ್ಧ​ಶತಕ ಪೂರೈಸಿದರು. ಅನುಭವಿಗಳ ವೈಫಲ್ಯದ ನಡುವೆಯೂ ಕೇವಲ 8ನೇ ಪಂದ್ಯವಾಡುತ್ತಿರುವ ಬ್ರೂಕ್ ತಂಡವನ್ನು ಗೆಲ್ಲಿಸಲು ಪ್ರಯತ್ನಿಸಿದರು. ಆದರೆ 66 ರನ್​ ಗಳಿಸಿದ್ದಾಗ ಮುಜೀಬ್ ಉರ್ ರಹಮಾನ್ ಬಾಲಿಂಗ್​ನಲ್ಲಿ ವಿಕೆಟ್​ ಕೊಟ್ಟರು. ಇನ್ನಿಂಗ್ಸ್​ನಲ್ಲಿ 61 ಬಾಲ್​ ಆಡಿ 7 ಬೌಂಡರಿ ಮತ್ತು 1 ಸಿಕ್ಸ್​ ಗಳಿಸಿದರು.

ಕೊನೇಯ ಹಂತದ ಹೋರಾಟ: ತನ್ನ 11 ಆಟಗಾರರಿಗೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಇದೆ ಎಂದು ಇಂಗ್ಲೆಂಡ್​ ಹೇಳಿಕೊಂಡಿದೆ. ಮೇಲಿನ ಪ್ರಮುಖ ಬ್ಯಾಟರ್​ಗಳೇ ವಿಫಲವಾದಾಗ ಇನ್ನು ಕೆಳ ಕ್ರಮಾಂಕದ ಆಟಗಾರರು ಎಷ್ಟು ಆಡಿದರೂ ಪ್ರಯೋಜನಇಲ್ಲ. ಆದರೆ ಆದಿಲ್ ರಶೀದ್ (20), ಮಾರ್ಕ್ ವುಡ್ (18)ಮತ್ತು ರೀಸ್ ಟೋಪ್ಲಿ (15*) ತಮ್ಮ ಪ್ರಯತ್ನ ಮಾಡಿದರು. ಇವರ ರನ್​ ಗಳಿಕೆ ಗೆಲುವಿಗೆ ದಡ ಸೇರಿಸದೇ ಇದ್ದರೂ ಸೇಲಿನ​ ಅಂತರ ಕಡಿಮೆ ಮಾಡಿತು.

ಅಫ್ಘಾನ್​ ಪರ ಮುಜೀಬ್ ಉರ್ ರಹಮಾನ್ ಮತ್ತು ರಶೀದ್ ಖಾನ್ ತಲಾ 3 ವಿಕೆಟ್​ ಪಡೆದರು. ಮೊಹಮ್ಮದ್ ನಬಿ 2, ಫಜಲ್ಹಕ್ ಫಾರೂಕಿ ಮತ್ತು ನವೀನ್-ಉಲ್-ಹಕ್ ತಲಾ ಒಂದು ವಿಕೆಟ್​ ಕಿತ್ತರು.

ಇದನ್ನೂ ಓದಿ: ವಿಶ್ವಕಪ್​ನಲ್ಲಿ ಭಾರತಕ್ಕೆ ಹ್ಯಾಟ್ರಿಕ್​ ಗೆಲುವು: ಮುಂದಿನ ಸವಾಲೇನು? ಈ ತಂಡಗಳನ್ನು ಮಣಿಸುವುದೇ ರೋಹಿತ್‌ ಟೀಂ?

Last Updated : Oct 15, 2023, 10:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.