ಮುಂಬೈ (ಮಹಾರಾಷ್ಟ್ರ): ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಇಂದು ಮುಖಾಮುಖಿಯಾಗಿವೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಉಭಯ ತಂಡಗಳು ಸೆಣಸಲಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ಎರಡೂ ತಂಡಗಳು ತಲಾ ಮೂವರು ಪಂದ್ಯಗಳನ್ನು ಆಡಿವೆ. ಈ ಪೈಕಿ ಬಲಿಷ್ಠ ಹರಿಣಗಳ ಪಡೆ ತನ್ನ ಮೊದಲೆರಡು ಪಂದ್ಯಗಳಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧ ಗೆಲುವು ಸಾಧಿಸುವ ಮೂಲಕ ಉತ್ತಮವಾಗಿ ವಿಶ್ವಕಪ್ ಅಭಿಯಾನ ಆರಂಭಿಸಿತ್ತು. ಆದರೆ, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆದ ಪಂದ್ಯದಲ್ಲಿ ನೆದರ್ಲ್ಯಾಂರ್ಡ್ಸ್ ತಂಡದ ವಿರುದ್ಧ ಆಘಾತಕಾರಿ ಸೋಲು ಕಂಡಿದೆ. ಹೀಗಾಗಿ ಸದ್ಯ ದಕ್ಷಿಣ ಆಫ್ರಿಕಾ ಒತ್ತಡಕ್ಕೆ ಸಿಲುಕಿದೆ.
-
A star all-rounder returns for 🏴
— ICC (@ICC) October 21, 2023 " class="align-text-top noRightClick twitterSection" data="
A key player misses out for 🇿🇦
England have won the toss and elected to field against South Africa in Mumbai's #CWC23 debut 🏏#ENGvSA 📝: https://t.co/DOiHnKaVt1 pic.twitter.com/ntkEhmI6XX
">A star all-rounder returns for 🏴
— ICC (@ICC) October 21, 2023
A key player misses out for 🇿🇦
England have won the toss and elected to field against South Africa in Mumbai's #CWC23 debut 🏏#ENGvSA 📝: https://t.co/DOiHnKaVt1 pic.twitter.com/ntkEhmI6XXA star all-rounder returns for 🏴
— ICC (@ICC) October 21, 2023
A key player misses out for 🇿🇦
England have won the toss and elected to field against South Africa in Mumbai's #CWC23 debut 🏏#ENGvSA 📝: https://t.co/DOiHnKaVt1 pic.twitter.com/ntkEhmI6XX
ಇದನ್ನೂ ಓದಿ: ಬೌಂಡರಿ ಲೈನ್ನಲ್ಲಿದ್ದ ಮಿಚೆಲ್ ಮಾರ್ಷ್ಗಾಗಿ ಬರ್ತ್ ಡೇ ಸಾಂಗ್ ಮೂಲಕ ವಿಶ್ ಮಾಡಿದ ಅಭಿಮಾನಿಗಳು
ಮತ್ತೊಂದೆಡೆ, ಆಂಗ್ಲರ ಪ್ರದರ್ಶನವು ಕೊಂಚ ನೀರಸವಾಗಿದೆ. ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿತ್ತು. ನಂತರದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಜಯ ಕಂಡಿತ್ತು. ಆದರೆ, ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ಸಹ ಅಚ್ಚರಿ ಸೋಲಿಗೆ ಶರಣಾಗಿದೆ. ಆದ್ದರಿಂದ ಆಂಗ್ಲರ ತಂಡ ಸಹ ಗೆಲ್ಲಬೇಕಾದ ಒತ್ತಡದಲ್ಲಿ ಇದೆ.
ಈ ಉಭಯ ತಂಡಗಳು ತಮ್ಮ ಹಿಂದಿನ ಪಂದ್ಯಗಳಲ್ಲಿ ಅನನುಭವಿ ತಂಡಗಳ ವಿರುದ್ಧ ಸೋತಿದ್ದು, ಇಂದು ಆ ತಂಡಗಳೇ ಮುಖಾಮುಖಿಯಾಗಿದೆ. ವಿಶ್ವಕಪ್ ಪಾಯಿಂಟ್ ಪಟ್ಟಿಯಲ್ಲಿ ಉತ್ತಮ ಸ್ಥಾನ ಕಾಯ್ದುಕೊಳ್ಳಲು ಎರಡೂ ತಂಡಗಳಿಗೆ ಗೆಲುವು ಅತ್ಯಗತ್ಯವಾಗಿದೆ. ಸದ್ಯ ಪಾಯಿಂಟ್ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ ತಂಡ ಆರನೇ ಸ್ಥಾನದಲ್ಲಿದೆ.
ಎರಡೂ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 69 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಇಂಗ್ಲೆಂಡ್ 30 ಮತ್ತು ದಕ್ಷಿಣ ಆಫ್ರಿಕಾ 33 ಪಂದ್ಯಗಳನ್ನು ಗೆದ್ದಿವೆ. ಉಳಿದಂತೆ 5 ಪಂದ್ಯಗಳು ರದ್ದಾಗಿದ್ದು, ಒಂದು ಪಂದ್ಯದ ಫಲಿತಾಂಶ ಪ್ರಕಟವಾಗಿಲ್ಲ.
ತಂಡಗಳ ವಿವರ ಇಂತಿದೆ:
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಜೆರಾಲ್ಡ್ ಕೊಯೆಟ್ಜಿ, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್ಗಿಡಿ
ಇಂಗ್ಲೆಂಡ್: ಜಾನಿ ಬೈರ್‌ಸ್ಟೋವ್, ಡೇವಿಡ್ ಮಲನ್, ಜೋ ರೂಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಜೋಶ್ ಬಟ್ಲರ್(ವಿಕೆಟ್ ಕೀಪರ್/ನಾಯಕ), ಡೇವಿಡ್ ವಿಲ್ಲಿ, ಆದಿಲ್ ರಶೀದ್, ಗಸ್ ಅಟ್ಕಿನ್ಸನ್, ಮಾರ್ಕ್ ವುಡ್, ರೀಸ್ ಟೋಪ್ಲಿ