ನವದೆಹಲಿ: ಲಂಕಾಗೆ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದಿದ್ದರೆ, ಅದೃಷ್ಟವಶಾತ್ ಸೆಮೀಸ್ಗೆ ನಾಲ್ಕನೇ ತಂಡವಾಗಿ ಪ್ರವೇಶಿಸುವ ಅವಕಾಶ ಇತ್ತು. ಆದರೆ, ಬಾಂಗ್ಲಾ ಟೈಗರ್ಸ್ ಸಿಂಹಳೀಯರ ಈ ಕನಸನ್ನು ಭಗ್ನ ಮಾಡಿದ್ದಾರೆ. ಶ್ರೀಲಂಕಾ ನೀಡಿದ್ದ 279 ರನ್ಗಳ ಗುರಿಯನ್ನು ಬಾಂಗ್ಲಾದೇಶ 41.1 ಓವರ್ಗೆ 3 ವಿಕೆಟ್ ಉಳಿಸಿಕೊಂಡು ಜಯ ದಾಖಲಿಸಿದೆ.
ವಿಶ್ವಕಪ್ನಲ್ಲಿ ಕೇವಲ ಒಂದು ಗೆಲುವು ಸಾಧಿಸಿದ್ದ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದಿತ್ತು. ಈಗ ಶ್ರೀಲಂಕಾವನ್ನು ಮಣಿಸಿ ಅವರನ್ನು ವಿಶ್ವಕಪ್ ಸೆಮೀಸ್ ರೇಸ್ನಿಂದ ಹೊರಕ್ಕೆ ತಂದಿದೆ. ಇದರಿಂದ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಅಲಂಕರಿಸಿದ್ದು, 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.
-
ICC Men's Cricket World Cup 2023
— Bangladesh Cricket (@BCBtigers) November 6, 2023 " class="align-text-top noRightClick twitterSection" data="
Bangladesh 🆚 Sri Lanka 🏏
Bangladesh won by 3 wickets 🫶 👏
Photo Credit: ICC/Getty#BCB | #SLvBAN | #CWC23 pic.twitter.com/CqbXM01JaY
">ICC Men's Cricket World Cup 2023
— Bangladesh Cricket (@BCBtigers) November 6, 2023
Bangladesh 🆚 Sri Lanka 🏏
Bangladesh won by 3 wickets 🫶 👏
Photo Credit: ICC/Getty#BCB | #SLvBAN | #CWC23 pic.twitter.com/CqbXM01JaYICC Men's Cricket World Cup 2023
— Bangladesh Cricket (@BCBtigers) November 6, 2023
Bangladesh 🆚 Sri Lanka 🏏
Bangladesh won by 3 wickets 🫶 👏
Photo Credit: ICC/Getty#BCB | #SLvBAN | #CWC23 pic.twitter.com/CqbXM01JaY
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ ಬಾಂಗ್ಲಾ ಬೌಲರ್ಗಳ ಮುಂದೆ ಬ್ಯಾಟಿಂಗ್ ಪಿಚ್ನಲ್ಲಿ ಕಷ್ಟಪಟ್ಟು ಆಡಿತ್ತು. ಚರಿತ್ ಅಸಲಂಕಾ ಶತಕ ಮತ್ತು ಪಾತುಮ್ ನಿಸ್ಸಾಂಕ (41), ಸದೀರ ಸಮರವಿಕ್ರಮ (41) ಇನ್ನಿಂಗ್ಸ್ ಬಲದಿಂದ ತಂಡ 49.3 ಓವರ್ಗೆ ಆಲ್ಔಟ್ಗೆ ಶರಣಾಗಿ 280 ರನ್ಗಳ ಗುರಿಯನ್ನು ನೀಡಿತ್ತು. ಇದನ್ನು ಬೆನ್ನಟ್ಟಿದ ಬಾಂಗ್ಲಾದೇಶ ಮೊದಲ ವಿಕೆಟ್ನ್ನು ಬೇಗ ಕಳೆದುಕೊಂಡರೂ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕಿಬ್ ಅಲ್ ಹಸನ್ ಇನ್ನಿಂಗ್ಸ್ ಬಲದಿಂದ 3 ವಿಕೆಟ್ಗಳ ಜಯ ದಾಖಲಿಸಿತ್ತು.
ತಂಜಿದ್ ಹಸನ್ ದಿಲ್ಶನ್ ಮಧುಶಂಕ ಬೌಲಿಂಗ್ನಲ್ಲಿ ವಿಕೆಟ್ ಕೊಟ್ಟರು. ಇದರಿಂದ 17 ರನ್ಗೆ ಬಾಂಗ್ಲಾ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಇನ್ನೋರ್ವ ಆರಂಭಿಕ ಲಿಟ್ಟನ್ ದಾಸ್ (23) ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಆದರೆ, ಮೂರನೇ ವಿಕೆಟ್ಗೆ ಒಂದಾದ ನಜ್ಮುಲ್ ಹೊಸೈನ್ ಶಾಂಟೊ ಮತ್ತು ಶಕಿಬ್ ಅಲ್ ಹಸನ್ 169 ರನ್ ಜೊತೆಯಾಟ ನೀಡಿದ್ದರು. ಇವರ ಪಾಲುದಾರಿಕೆಯಿಂದ ತಂಡ ಗೆಲುವು ಹೆಚ್ಚು ಕಡಿಮೆ ಸಾಧ್ಯ ಎಂಬ ಅಭಿಪ್ರಾಯಕ್ಕೆ ಬಂತು.
ಇಬ್ಬರೂ ಆಟಗಾರರು ಶತಕದ ಅಂಚಿನಲ್ಲಿ ಎಡವಿರು. 65 ಬಾಲ್ ಆಡಿ 12 ಬೌಂಡರಿ ಮತ್ತು 2 ಸಿಕ್ಸ್ನಿಂದ 85 ರನ್ ಗಳಿಸಿ ನಾಯಕ ಶಕೀಬ್ ಅಲ್ ಹಸನ್ ಔಟ್ ಆದರು. 15 ರನ್ನಿಂದ ಹಸನ್ ಶತಕ ವಂಚಿತರಾದರು, ಅವರಂತೆ ಶಾಂಟೊ ಸಹ 10 ರನ್ನಿಂದ ಶತಕ ಮಾಡುವ ಅವಕಾಶ ಕಳೆದುಕೊಂಡರು. ನಜ್ಮುಲ್ ಹೊಸೈನ್ ಶಾಂಟೊ ಇನ್ನಿಂಗ್ಸ್ನಲ್ಲಿ 101 ಬಾಲ್ ಆಡಿ 12 ಬೌಂಡರಿಯಿಂದ 90 ರನ್ ಗಳಿಸಿ ವಿಕೆಟ್ ಕೊಟ್ಟರು.
-
ICC Men's Cricket World Cup 2023
— Bangladesh Cricket (@BCBtigers) November 6, 2023 " class="align-text-top noRightClick twitterSection" data="
Bangladesh 🆚 Sri Lanka 🏏
Bangladesh won by 3 wickets 🫶 👏
Photo Credit: ICC/Getty#BCB | #SLvBAN | #CWC23 pic.twitter.com/CqbXM01JaY
">ICC Men's Cricket World Cup 2023
— Bangladesh Cricket (@BCBtigers) November 6, 2023
Bangladesh 🆚 Sri Lanka 🏏
Bangladesh won by 3 wickets 🫶 👏
Photo Credit: ICC/Getty#BCB | #SLvBAN | #CWC23 pic.twitter.com/CqbXM01JaYICC Men's Cricket World Cup 2023
— Bangladesh Cricket (@BCBtigers) November 6, 2023
Bangladesh 🆚 Sri Lanka 🏏
Bangladesh won by 3 wickets 🫶 👏
Photo Credit: ICC/Getty#BCB | #SLvBAN | #CWC23 pic.twitter.com/CqbXM01JaY
ಈ ಎರಡು ವಿಕೆಟ್ ನಂತರ ಮುಶ್ಫಿಕರ್ ರಹೀಮ್ (10), ಮಹಮ್ಮದುಲ್ಲಾ (22), ಮೆಹಿದಿ ಹಸನ್ ಮಿರಾಜ್ (3) ಔಟ್ ಆದರೆ, ತೌಹಿದ್ ಹೃದಯೊಯ್ (15*) ಮತ್ತು ತನ್ಜಿಮ್ ಹಸನ್ ಸಾಕಿಬ್ (5*) ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯದರು. ಇದರಿಂದ 41.1 ಓವರ್ಗೆ 7 ವಿಕೆಟ್ ಕಳೆದುಕೊಂಡು ಬಾಂಗ್ಲಾ 282 ರನ್ ಗಳಿಸಿ ಪಂದ್ಯ ಗೆದ್ದುಕೊಂಡಿತು. ಲಂಕಾ ಪರ ದಿಲ್ಶನ್ ಮಧುಶಂಕ 3, ಏಂಜೆಲೊ ಮ್ಯಾಥ್ಯೂಸ್ ಮತ್ತು ಮಹೇಶ್ ತೀಕ್ಷ್ಣ ತಲಾ ಎರಡು ವಿಕೆಟ್ ಪಡೆದರು.
- " class="align-text-top noRightClick twitterSection" data="">
ಪಂದ್ಯ ಶ್ರೇಷ್ಠ: ಬೌಲಿಂಗ್ನಲ್ಲಿ 2 ವಿಕೆಟ್ ಮತ್ತು ಬ್ಯಾಟಿಂಗ್ನಲ್ಲಿ 82 ರನ್ ಅದ್ಭುತ ಕೊಡುಗೆ ನೀಡಿ ನಾಯಕತ್ವದ ಜವಾಬ್ದಾರಿಯನ್ನು ಮೆರೆದ ಶಕೀಬ್ ಅಲ್ ಹಸನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ: "ಸಚಿನ್ ದಾಖಲೆ ಸಮಮಾಡಲು ಲೇಸರ್ನಂತೆ ವಿರಾಟ್ ಫೋಕಸ್ ಹೊಂದಿದ್ದರು"- ಎಬಿಡಿ