ಪುಣೆ (ಮಹಾರಾಷ್ಟ್ರ): ತೌಹಿದ್ ಹೃದಯೊಯ್ ಅರ್ಧಶತಕ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಅವರ ಇನ್ನಿಂಗ್ಸ್ ಬಲದಿಂದ ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶ ನಿಗದಿತ ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 306 ರನ್ ಕಲೆಹಾಕಿದೆ. ಆಸ್ಟ್ರೇಲಿಯಾಕ್ಕೆ ಇದು ಔಪಚಾರಿಕ ಪಂದ್ಯವಾದರೂ ಬಾಂಗ್ಲಾಕ್ಕೆ 2025ರ ಚಾಂಪಿಯನ್ಸ್ ಟ್ರೋಫಿಯ ಪ್ರವೇಶಕ್ಕೆ ಅತ್ಯಂತ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಬಾಂಗ್ಲಾದೇಶ ಕಾಂಗರೂ ಪಡೆಗೆ 307 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.
-
ICC Men's Cricket World Cup 2023
— Bangladesh Cricket (@BCBtigers) November 11, 2023 " class="align-text-top noRightClick twitterSection" data="
Bangladesh 🆚 Australia 🏏
Australia need 307 Runs to Win
Photo Credit: ICC/Getty#BCB | #AUSvBAN | #CWC23 pic.twitter.com/U5Nw1Ywj7E
">ICC Men's Cricket World Cup 2023
— Bangladesh Cricket (@BCBtigers) November 11, 2023
Bangladesh 🆚 Australia 🏏
Australia need 307 Runs to Win
Photo Credit: ICC/Getty#BCB | #AUSvBAN | #CWC23 pic.twitter.com/U5Nw1Ywj7EICC Men's Cricket World Cup 2023
— Bangladesh Cricket (@BCBtigers) November 11, 2023
Bangladesh 🆚 Australia 🏏
Australia need 307 Runs to Win
Photo Credit: ICC/Getty#BCB | #AUSvBAN | #CWC23 pic.twitter.com/U5Nw1Ywj7E
ನಡೆಯುತ್ತಿರುವ ವಿಶ್ವಕಪ್ನಲ್ಲಿ 7 ಪಂದ್ಯದಲ್ಲಿ 1ನ್ನು ಮಾತ್ರ ಗೆದ್ದಿದ್ದ ಬಾಂಗ್ಲಾದೇಶ ಟೂರ್ನಿಯಿಂದ ಹೊರಬಿದ್ದ ಮೊದಲ ತಂಡವಾಗಿತ್ತು. 8ನೇ ಪಂದ್ಯವನ್ನು ಲಂಕಾ ವಿರುದ್ಧ ಗೆದ್ದು ಚಾಂಪಿಯನ್ಸ್ ಟ್ರೋಫಿಯ ಅರ್ಹತೆ ಎದುರು ನೋಡುತ್ತಿರುವ ಬಾಂಗ್ಲಾಕ್ಕೆ ಇಂದಿನ ಗೆಲುವು ಮುಖ್ಯವಾಗಿದೆ. ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿರುವ ಅಸ್ಟ್ರೇಲಿಯಾಕ್ಕೆ ಸೋಲು ಗೆಲುವು ಹೆಚ್ಚಿನ ಬದಲಾವಣೆ ಮಾಡುವುದಿಲ್ಲ. ಗೆದ್ದಲ್ಲಿ ಮೂರನೇ ಸ್ಥಾನಕ್ಕೆ ಹೋಗುವ ಅವಕಾಶ ಇದೆ. ಆದರೆ, ಆಸ್ಟ್ರೇಲಿಯಾ 3 ಅಥವಾ ನಾಲ್ಕನೇ ಸ್ಥಾನದಿಂದ ಸೆಮೀಸ್ ಪ್ರವೇಶಿಸಿದರೆ, ಅಲ್ಲಿ ಎದುರಾಳಿ ದಕ್ಷಿಣ ಆಫ್ರಿಕಾವೇ ಆಗಿರಲಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೇ ಮೊದಲ ಪವರ್ ಪ್ಲೇನಲ್ಲಿ 60ರ ಗಡಿ ದಾಟಿತು. ತಂಜಿದ್ ಹಸನ್ ಮತ್ತು ಲಿಟ್ಟನ್ ದಾಸ್ 76 ರನ್ಗಳ ಪಾಲುದಾರಿಕೆಯನ್ನು ಮೊದಲ ವಿಕೆಟ್ಗೆ ಮಾಡಿದರು. ತಂಜಿದ್ ಹಸನ್ (36) ಮತ್ತು ಲಿಟ್ಟನ್ ದಾಸ್ (36) ವಿಕೆಟ್ ಪತನದ ನಂತರ ನಜ್ಮುಲ್ ಹೊಸೈನ್ ಶಾಂಟೊ (45) ಮತ್ತು ತೌಹಿದ್ ಹೃದಯೊಯ್ 3ನೇ ವಿಕೆಟ್ಗೆ 64 ಜೊತೆಯಾಟವಾಡಿದರು . ಮಹಮ್ಮುದುಲ್ಲಾ (32) ಮತ್ತು ಮುಶ್ಫಿಕರ್ ರಹೀಮ್ (21) ಜೊತೆಗೆ ವಿಕೆಟ್ ಹಂಚಿಕೊಂಡ ನಜ್ಮುಲ್ ಹೊಸೈನ್ ಶಾಂಟೊ ತಮ್ಮ ಅರ್ಧಶತಕವನ್ನು ಪೂರೈಸಿಕೊಂಡರು.
-
ICC Men's Cricket World Cup 2023
— Bangladesh Cricket (@BCBtigers) November 11, 2023 " class="align-text-top noRightClick twitterSection" data="
Bangladesh 🆚 Australia 🏏
Moments of Bangladesh's Innings 🌟🇧🇩
Photo Credit: ICC/Getty#BCB | #AUSvBAN | #CWC23 pic.twitter.com/pxsk1fD0EN
">ICC Men's Cricket World Cup 2023
— Bangladesh Cricket (@BCBtigers) November 11, 2023
Bangladesh 🆚 Australia 🏏
Moments of Bangladesh's Innings 🌟🇧🇩
Photo Credit: ICC/Getty#BCB | #AUSvBAN | #CWC23 pic.twitter.com/pxsk1fD0ENICC Men's Cricket World Cup 2023
— Bangladesh Cricket (@BCBtigers) November 11, 2023
Bangladesh 🆚 Australia 🏏
Moments of Bangladesh's Innings 🌟🇧🇩
Photo Credit: ICC/Getty#BCB | #AUSvBAN | #CWC23 pic.twitter.com/pxsk1fD0EN
79 ಬಾಲ್ ಎದುರಿಸಿದ ತೌಹಿದ್ ಹೃದಯೊಯ್ 5 ಬೌಂಡರಿ, 2 ಸಿಕ್ಸ್ನ ಸಹಾಯದಿಂದ 74 ರನ್ ಕಲೆಹಾಕಿ ಅಮೂಲ್ಯ ಇನ್ನಿಂಗ್ಸ್ ಕಟ್ಟಿದರು. ತೌಹಿದ್ ಹೃದಯೊಯ್ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದೊಡ್ಡ ಇನ್ನಿಂಗ್ಸ್ ಕಟ್ಟಿದ ಎರಡನೇ ಆಟಗಾರ ಆದರು (ಮುಶ್ಫಿಕರ್ ರಹೀಮ್ 102* 2019ರ ವಿಶ್ವಕಪ್). ಕೊನೆಯಲ್ಲಿ ಮೆಹಿದಿ ಹಸನ್ ಮಿರಾಜ್ (29), ನಸುಮ್ ಅಹ್ಮದ್ (7) ಸಣ್ಣ ಇನ್ನಿಂಗ್ಸ್ ಆಡಿದರು. ಇದರಿಂದ ನಿಗದಿತ 50 ಓವರ್ ಅಂತ್ಯಕ್ಕೆ ಬಾಂಗ್ಲಾದೇಶ 8 ವಿಕೆಟ್ ನಷ್ಟಕ್ಕೆ 306 ಕಲೆಹಾಕಿತು. ಕಾಂಗರೂ ಪರ ಸೀನ್ ಅಬಾಟ್ ಮತ್ತು ಆಡಮ್ ಝಂಪಾ ತಲಾ ಎರಡು, ಮಾರ್ಕಸ್ ಸ್ಟೊಯಿನಿಸ್ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ:ಆಸೀಸ್- ಬಾಂಗ್ಲಾ ಪಂದ್ಯ; ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ