ETV Bharat / sports

ಪಾಕಿಸ್ತಾನ ವಿರುದ್ಧದ 7 ಏಕದಿನ ಪಂದ್ಯಗಳ ಸೋಲಿನ ಸೇಡು ತೀರಿಸಿಕೊಂಡ ಅಫ್ಘಾನಿಸ್ತಾನ! - ETV Bharath Karnataka

ಚೆನ್ನೈನ ಚೆಪಾಕ್​ ಮೈದಾನದಲ್ಲಿ ಅಫ್ಘಾನಿಸ್ತಾನ ಅಮೋಘ ಗೆಲುವು ದಾಖಲಿಸಿತು.

Afghanistan historic win Against Pakistan

author img

By ETV Bharat Karnataka Team

Published : Oct 23, 2023, 11:00 PM IST

ಚೆನ್ನೈ (ತಮಿಳುನಾಡು): ಅಫ್ಘಾನಿಸ್ತಾನ ತಂಡ ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಜಯ ದಾಖಲಿಸಿದೆ. ಸತತ ಏಳು ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿದ್ದ ಅಫ್ಘನ್ನರು ವಿಶ್ವಕಪ್ ವೇದಿಕೆಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ. ಚೆನ್ನೈನ ಚೆಪಾಕ್​ ಮೈದಾನದಲ್ಲಿಂದು ಪಾಕಿಸ್ತಾನ ನೀಡಿದ್ದ 282 ರನ್​ ಗುರಿಯನ್ನು 6 ಬಾಲ್​ ಹಾಗೂ 8 ವಿಕೆಟ್​ ಉಳಿಸಿಕೊಂಡು ಜಯ ದಾಖಲಿಸಿದ್ದಾರೆ. ಇದರಿಂದ ಪ್ಲೇ ಆಫ್​ ಸ್ಪರ್ಧೆಯಲ್ಲಿ ತಾನೂ ಇರುವುದಾಗಿ ಅಫ್ಘನ್​ ಸಂದೇಶ ರವಾನಿಸಿದೆ.

275ಕ್ಕೂ ಹೆಚ್ಚಿನ ಗುರಿ ನೀಡಿದ್ದಾಗ ಈವರೆಗೆ ಏಕದಿನ ಪಂದ್ಯದಲ್ಲಿ ಗೆಲುವು ಕಂಡಿರುವ ಲೆಕ್ಕಾಚಾರದಲ್ಲಿದ್ದ ಪಾಕಿಸ್ತಾನಕ್ಕೆ ಅಫ್ಘನ್​ ಸೋಲಿಸಿತು. ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ಪಾಕಿಸ್ತಾನ ನೀಡಿದ 275+ ಗುರಿಯನ್ನು ಅಫ್ಘನ್​ ಭೇದಿಸಿತು. ಇದು ಅಫ್ಘನ್​ಗೆ ಒಟ್ಟಾರೆ ಮೂರು ವಿಶ್ವಕಪ್​ನಲ್ಲಿ ಮೂರನೇ ಗೆಲುವಾಗಿದೆ. 2015ರ ವಿಶ್ವಕಪ್​ನಲ್ಲಿ ಸ್ಕಾಟ್​ಲ್ಯಾಂಡ್​ ವಿರುದ್ಧ ಗೆಲುವು ದಾಖಲಿಸಿತ್ತು. 2019ರ ವಿಶ್ವಕಪ್​ನಲ್ಲಿ ಒಂದೂ ಗೆಲುವು ಕಾಣದೆ ತವರಿಗೆ ಮರಳಿತ್ತು. ಈ ಬಾರಿ ಇಂಗ್ಲೆಂಡ್ ಮತ್ತು ಪಾಕಿಸ್ತಾನವನ್ನು ಮಣಿಸಿದೆ.

ಅಫ್ಘಾನ್​ ಪರ ಬೆಸ್ಟ್​ ವಿಶ್ವಕಪ್​ ಪಾದಾರ್ಪಣೆ: ಯುವ ಸ್ಪಿನ್ನರ್ ನೂರ್ ಅಹ್ಮದ್ ಐಸಿಸಿ ಕ್ರಿಕೆಟ್ ವಿಶ್ವಕಪ್ ಚೊಚ್ಚಲ ಪಂದ್ಯದಲ್ಲಿ ಆಫ್ಘನ್ ಪರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ದಾಖಲಿಸಿದ್ದಾರೆ. ನೂರ್ ಅವರ 10 ಓವರ್‌ಗಳಲ್ಲಿ 49 ರನ್​ ಕೊಟ್ಟು 3 ವಿಕೆಟ್​ ಕಬಳಿಸಿದರು. ನೂರ್​ ಪಿಚ್​ಗೆ ಹೊಂದಿಕೊಂಡಿದ್ದ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್, ನಾಯಕ ಬಾಬರ್ ಅಜಮ್ ಮತ್ತು ಮೊಹಮ್ಮದ್ ರಿಜ್ವಾನ್ ಅವರ ವಿಕೆಟ್​ಗಳನ್ನು ಇಂದಿನ ಪಂದ್ಯದಲ್ಲಿ ಕಬಳಿಸಿದರು. ಇದು ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲಿ ಅಫ್ಘನ್​ ಪರ ಒಬ್ಬ ಬೌಲರ್​ ಗಳಿಸಿದ ಉತ್ತಮ ಅಂಕಿಅಂಶ ಎನಿಸಿಕೊಂಡಿದೆ. ಇವರಿಗೂ ಮೊದಲು 2015ರ ವಿಶ್ವಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಶಪೂರ್ ಜದ್ರಾನ್ 20 ರನ್​ ಕೊಟ್ಟು 2 ವಿಕೆಟ್​ ಪಡೆದಿದ್ದರು.

ವಿಶ್ವಕಪ್​ ಪಂದ್ಯದಲ್ಲಿ ಅತಿ ಹೆಚ್ಚು ಸ್ಪಿನ್​ ಓವರ್​: ಚೆನ್ನೈನ ಚೆಪಾಕ್​ ಪಿಚ್ ಅ​ನ್ನು ಸ್ಪಿನ್ನರ್​ ಸ್ನೇಹಿ ಎಂದು ಕರೆಯುತ್ತಾರೆ. ಹೀಗಾಗಿ ಅಫ್ಘಾನಿಸ್ತಾನದ ನಾಯಕ ಹಶ್ಮತುಲ್ಲಾ ಶಾಹಿದಿ ತಂಡದಲ್ಲಿರುವ ಎಲ್ಲಾ ಸ್ಪಿನ್​ ಅಸ್ತ್ರಗಳನ್ನು ಪಾಕ್​ ವಿರುದ್ಧ ಪ್ರಯೋಗಿಸಿದ್ದಾರೆ. ಹೀಗಾಗಿ ಪಾಕ್​ ವಿರುದ್ಧದ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 38 ಓವರ್​ಗಳನ್ನು ಸ್ಪಿನ್ನರ್​​ಗಳೇ ಮಾಡಿದ್ದಾರೆ. ವಿಶ್ವಕಪ್​ನಲ್ಲಿ ಇದು ಎರಡನೇ ಬಾರಿಗೆ ಸಂಭವಿಸಿದೆ. 1996 ಮತ್ತು 2011 ರ ವಿಶ್ವಕಪ್​ನಲ್ಲಿ 39 ಓವರ್​ ಸ್ಪಿನ್ನರ್​ಗಳು ಹಾಕಿದ್ದರು. 2019ರ ವಿಶ್ವಕಪ್​ ಪಾಕಿಸ್ತಾನದ ವಿರುದ್ಧವೇ ಅಫ್ಘನ್​ 38 ಓವರ್​ ಮಾಡಿತ್ತು.

ಜದ್ರಾನ್ ಸಹಸ್ರ ರನ್​ ದಾಖಲೆ: ಅಫ್ಘಾನಿಸ್ತಾನದ ಆರಂಭಿಕ ಆಟಗಾರ ಇಬ್ರಾಹಿಂ ಜುದ್ರಾನ್ ಏಕದಿನ ಪಂದ್ಯದಲ್ಲಿ 1000 ರನ್​ ಪೂರೈಸಿದರು. ಅಫ್ಘನ್​ ಪರ ಅವರು ವೇಗವಾಗಿ ಈ ಮೈಲುಗಲ್ಲು ತಲುಪಿದ್ದಾರೆ. 24 ಇನ್ನಿಂಗ್ಸ್​ನಲ್ಲಿ ಜದ್ರಾನ್​ 1000 ರನ್​ ಗಡಿ ಮುಟ್ಟಿದರೆ, ಇವರ ನಂತರ ರಹಮಾನುಲ್ಲಾ ಗುರ್ಬಾಜ್ (27), ರಹಮತ್ ಶಾ (31) ಇದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ ಕ್ರಿಕೆಟ್‌: ಪಾಕಿಸ್ತಾನವನ್ನು 8 ವಿಕೆಟ್‌ಗಳಿಂದ ಮಣಿಸಿ ಐತಿಹಾಸಿಕ ಗೆಲುವು ದಾಖಲಿಸಿದ ಅಫ್ಘಾನಿಸ್ತಾನ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.