ETV Bharat / sports

World Cup 2023: ವಿಶ್ವಕಪ್‌ ಪಂದ್ಯಗಳ ಅಂಪೈರ್, ರೆಫರಿಗಳ ಹೆಸರು ಪ್ರಕಟ.. ಭಾರತದ ನಿತಿನ್ ಮೆನನ್, ಜಾವಗಲ್ ಶ್ರೀನಾಥ್​ಗೆ ಸ್ಥಾನ - ETV Bharath Kannada news

Icc announces umpires; ಅಕ್ಟೋಬರ್​ನಿಂದ ಭಾರತದಲ್ಲಿ ಆರಂಭವಾಗಲಿರುವ ಏಕದಿನ ವಿಶ್ವಕಪ್​ನ ಲೀಗ್​ ಹಂತದ ಪಂದ್ಯಗಳಿಗೆ ಅಂಪೈರ್ ಮತ್ತು ರೆಫರಿಗಳನ್ನು ಐಸಿಸಿ ಪ್ರಕಟಿಸಿದ್ದು, ಭಾರತದ ನಿತಿನ್ ಮೆನನ್​ ಮತ್ತು ಜಾವಗಲ್ ಶ್ರೀನಾಥ್​ ಸ್ಥಾನ ಪಡೆದುಕೊಂಡಿದ್ದಾರೆ.

World Cup 2023:
ನಿತಿನ್ ಮೆನನ್ - ಜಾವಗಲ್ ಶ್ರೀನಾಥ್
author img

By ETV Bharat Karnataka Team

Published : Sep 8, 2023, 5:19 PM IST

ದುಬೈ: ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ಲೀಗ್ ಹಂತದ 20 ಪಂದ್ಯದ ಅಧಿಕಾರಿಗಳಲ್ಲಿ ಭಾರತದ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಅಂಪೈರ್‌ಗಳ ಸದಸ್ಯ ನಿತಿನ್ ಮೆನನ್ ಮತ್ತು ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಗಳ ಸದಸ್ಯ ಜಾವಗಲ್ ಶ್ರೀನಾಥ್ ಸೇರಿದ್ದಾರೆ. ಈ ಮೆಗಾ ಟೂರ್ನಮೆಂಟ್‌ನ ಲೀಗ್ ಹಂತದಲ್ಲಿ 16 ಅಂಪೈರ್‌ಗಳು ಕಾರ್ಯನಿರ್ವಹಿಸಲಿದ್ದಾರೆ, ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಎಮಿರೇಟ್ಸ್ ಎಲೈಟ್ ಪ್ಯಾನೆಲ್‌ನ ಎಲ್ಲ 12 ಅಂಪೈರ್‌ಗಳು ಮತ್ತು ಐಸಿಸಿ ಎಮರ್ಜಿಂಗ್ ಅಂಪೈರ್ ಪ್ಯಾನೆಲ್‌ನ 4 ಸದಸ್ಯರಿದ್ದಾರೆ.

12 ಅಂಪೈರ್‌ಗಳ ಐಸಿಸಿ ಎಲೈಟ್ ಪ್ಯಾನೆಲ್: ಕ್ರಿಸ್ಟೋಫರ್ ಗಾಫ್ನಿ (ನ್ಯೂಜಿಲ್ಯಾಂಡ್​ ), ಕುಮಾರ್ ಧರ್ಮಸೇನಾ (ಶ್ರೀಲಂಕಾ), ಮರೈಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ), ಮೈಕೆಲ್ ಗಾಫ್ (ಇಂಗ್ಲೆಂಡ್), ನಿತಿನ್ ಮೆನನ್ (ಭಾರತ), ಪಾಲ್ ರೀಫೆಲ್ (ಆಸ್ಟ್ರೇಲಿಯಾ), ರಿಚರ್ಡ್ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್), ರಿಚರ್ಡ್ ಕೆಟಲ್ಬರೋ (ಇಂಗ್ಲೆಂಡ್), ರಾಡ್ನಿ ಟಕರ್ (ಆಸ್ಟ್ರೇಲಿಯಾ), ಜೋಯಲ್ ವಿಲ್ಸನ್ (ವೆಸ್ಟ್ ಇಂಡೀಸ್), ಅಹ್ಸಾನ್ ರಜಾ (ಪಾಕಿಸ್ತಾನ), ಮತ್ತು ಆಡ್ರಿಯನ್ ಹೋಲ್ಡ್​ಸ್ಟಾಕ್ (ದಕ್ಷಿಣ ಆಫ್ರಿಕಾ).

ಐಸಿಸಿ ಉದಯೋನ್ಮುಖ ಅಂಪೈರ್‌ಗಳು: ಶರಫುದ್ದೌಲಾ ಇಬ್ನೆ ಶಾಹಿದ್ (ಬಾಂಗ್ಲಾದೇಶ), ಪಾಲ್ ವಿಲ್ಸನ್ (ಆಸ್ಟ್ರೇಲಿಯಾ), ಅಲೆಕ್ಸ್ ವಾರ್ಫ್ (ಇಂಗ್ಲೆಂಡ್) ಮತ್ತು ಕ್ರಿಸ್ ಬ್ರೌನ್ (ನ್ಯೂಜಿಲೆಂಡ್). ಕುಮಾರ್ ಧರ್ಮಸೇನಾ, ಮರೈಸ್ ಎರಾಸ್ಮಸ್ ಮತ್ತು ರಾಡ್ ಟಕ್ಕರ್ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ 2019 ರ ಫೈನಲ್​ನಲ್ಲಿ ಕಾರ್ಯನಿರ್ವಹಿಸಿದ್ದರು. ಈ ಫೈನಲ್​ನಲ್ಲಿ ಅಲೀಂ ದಾರ್ ಸಹ ಕಾರ್ಯನಿರ್ವಹಿಸಿದ್ದರು ಅವರು ಈ ಬಾರಿಯ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ವಿಶ್ವಕಪ್​ನ ಮ್ಯಾಚ್​ ರೆಫರಿಗಳು: ಆಂಡಿ ಪೈಕ್ರಾಫ್ಟ್ (ಜಿಂಬಾಬ್ವೆ), ರಿಚಿ ರಿಚರ್ಡ್ಸನ್ (ವೆಸ್ಟ್ ಇಂಡೀಸ್), ಜೆಫ್ ಕ್ರೋವ್ (ನ್ಯೂಜಿಲ್ಯಾಂಡ್​) ಮತ್ತು ಜಾವಗಲ್ ಶ್ರೀನಾಥ್ (ಭಾರತ) ಮ್ಯಾಚ್​ ರೆಫರಿಗಳಾಗಿದ್ದಾರೆ. ಉದ್ಘಾಟನಾ ಪಂದ್ಯದ ಜವಾಬ್ದಾರಿಯನ್ನು ಶ್ರೀನಾಥ್​ಗೆ ನೀಡಲಾಗಿದೆ. ಮೆನನ್ ಮತ್ತು ಧರ್ಮಸೇನಾ ಸ್ಟ್ಯಾಂಡಿಂಗ್ ಅಂಪೈರ್‌ಗಳಾಗಿದ್ದು, ಟಿವಿ ಅಂಪೈರ್ ಆಗಿ ಪಾಲ್ ವಿಲ್ಸನ್ ಮತ್ತು ನಾಲ್ಕನೇ ಅಂಪೈರ್ ಅಗಿ ಸೈಕತ್ ಕಾರ್ಯನಿವಹಿಸಲಿದ್ದಾರೆ.

  • Umpires for the 2023 World Cup:

    Richard Kettleborough, Nitin Menon, Chris Gaffaney, Kumar Dharmasena, Marais Erasmus, Michael Gough, Paul Reiffel, Richard Illingworth, Rod Tucker, Joel Wilson, Ahsan Raza and Adrian Holdstock. pic.twitter.com/w2mabusN4Q

    — Mufaddal Vohra (@mufaddal_vohra) September 8, 2023 " class="align-text-top noRightClick twitterSection" data=" ">

ಐಸಿಸಿ ಕ್ರಿಕೆಟ್‌ನ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಪ್ರಕಟಣೆಯ ನಂತರ ಮಾತನಾಡಿ,"ಇಡೀ ಲೀಗ್ ವಿಭಾಗದ ಅಧಿಕಾರಿಗಳನ್ನು ಘೋಷಿಸಲಾಗಿದೆ, ಪಂದ್ಯಾವಳಿಯ ಸೆಮಿ - ಫೈನಲ್ ಮತ್ತು ಫೈನಲ್‌ನ ಆಯ್ಕೆಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು, ವಿಶ್ವಕಪ್​ನ ರೀತಿಯ ಎಲೈಟ್ ಪಂದ್ಯಗಳಿಗೆ ಉತ್ತಮ ಪ್ರದರ್ಶನ ನೀಡುವವರ ಅಗತ್ಯವಿದೆ. ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಅಂಪೈರ್‌ಗಳು, ರೆಫರಿಗಳು ಮತ್ತು ಉದಯೋನ್ಮುಖ ಅಂಪೈರ್‌ಗಳ ಗುಂಪು ಅಪಾರ ಕೌಶಲ್ಯ, ಅನುಭವ ಮತ್ತು ವಿಶ್ವ ದರ್ಜೆಯ ಗುಣಮಟ್ಟವನ್ನು ಹೊಂದಿದೆ" ಎಂದಿದ್ದಾರೆ.

ಇದನ್ನೂ ಓದಿ: ಭಾರತ - ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯಕ್ಕೆ ಮಳೆ ಅಡ್ಡಿ.. ಆದರೂ ಆತಂಕವಿಲ್ಲ.. ಮೀಸಲು ದಿನದಂದು ನಡೆಯಲಿದೆ ಮ್ಯಾಚ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.