ETV Bharat / sports

ಐಸಿಸಿ ಟ್ರೋಫಿ ಗೆಲ್ಲದ ನನ್ನನ್ನು ವಿಫಲ ನಾಯಕ ಎಂದು ಪರಿಗಣಿಸಿದರು; ವಿರಾಟ್​ ಕೊಹ್ಲಿ - ನನ್ನನ್ನು ವಿಫಲ ನಾಯಕ

ತಮ್ಮ ಐಪಿಎಲ್​ ತಂಡವಾದ ರಾಯಲ್​ ಚಾಂಲೆಜರ್ಸ್​​ ಬೆಂಗಳೂರು ಪಾಡ್​ಕಾಸ್ಟ್​ನಲ್ಲಿ ವೃತ್ತಿ ಜೀವನದ ಕುರಿತು ಮಾತನಾಡಿದ್ದಾರೆ

i-was-considered-a-failed-captain-who-did-not-win-an-icc-trophy-virat-kohli

author img

By

Published : Feb 25, 2023, 5:52 PM IST

ನವದೆಹಲಿ: ನನ್ನ ನಾಯಕತ್ವದ ಅವಧಿಯಲ್ಲಿ ಒಂದೇ ಒಂದು ಐಸಿಸಿ ಟ್ರೋಫಿ ಗೆಲ್ಲಲಾರದ ಕಾರಣ ನನ್ನನ್ನು ವಿಫಲ ನಾಯಕ ಎಂದು ಪರಿಗಣಿಸಲಾಗಿದೆ. ಆದರೆ, ಈ ದೃಷ್ಟಿಕೋನದಿಂದ ನನ್ನನ್ನು ನಾನು ಎಂದಿಗೂ ಜಡ್ಜ್​ ಮಾಡಿಕೊಂಡಿಲ್ಲ ಎಂದು ಎಂದು ಕ್ರಿಕೆಟಿಗ ವಿರಾಟ್​ ಕೊಹ್ಲಿ ತಿಳಿಸಿದ್ದಾರೆ. ತಮ್ಮ ಐಪಿಎಲ್​ ತಂಡವಾದ ರಾಯಲ್​ ಚಾಂಲೆಜರ್ಸ್​​ ಬೆಂಗಳೂರು ಪಾಡ್​ಕಾಸ್ಟ್​ನಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.

ವಿರಾಟ್​ ಕೊಯ್ಲಿ ನಾಯಕತ್ವ: ಭಾರತದ ಅಂತ್ಯಂತ ಯಶಸ್ವಿ ಟೆಸ್ಟ್​ ನಾಯಕನಾಗಿರುವ ಅವರು, 40 ಪಂದ್ಯಗಳಲ್ಲಿ ಜಯವನ್ನು ತಂದುಕೊಡುವ ಮೂಲಕ 42 ತಿಂಗಳಗಳ ಕಾಲ ತಂಡವನ್ನು ಟಾಪ್​ ರ್ಯಾಂಕ್​ನಲ್ಲಿರಿಸಿದ್ದ ಕೀರ್ತಿ ಹೊಂದಿದ್ದಾರೆ. ಇದರ ಹೊರತಾಗಿ 65 ಏಕದಿನ ಪಂದ್ಯ ಮತ್ತು 30 ಟಿ20 ಪಂದ್ಯದ ನಾಯಕರಾಗಿ ಕೊಹ್ಲಿ ಸಾಧನೆ ಅವರ ಹೆಸರಲ್ಲಿದೆ. ಕೊಹ್ಲಿ ನಾಯಕತ್ವದ ಅಡಿ 2017 ಚಾಂಪಿಯನ್​ ಟ್ರೋಪಿ ಮತ್ತು 2021ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ ರನ್ನರ್​ ಅಪ್​ ಆಯಿತು. 2019 ರ ಏಕದಿನ ಪಂದ್ಯದಲ್ಲಿ ವಿಶ್ವಕಪ್‌ನ ಸೆಮಿಫೈನಲ್ ತಲುಪಿದನ್ನು ಹೊರತುಪಡಿಸಿ, 2021 ಟಿ20 ವಿಶ್ವಕಪ್‌ನಲ್ಲಿ ಕೊನೆಯ ನಾಲ್ಕು ಹಂತಗಳನ್ನು ತಲುಪಲಿಲ್ಲ.

ಪಂದ್ಯಕ್ಕಿಂತ ಇತರೆ ಅಂಶವೂ ಮುಖ್ಯ: ನಾನು ನನ್ನ ದೃಷ್ಟಿಕೋನದಿಂದ ಎಂದಿಗೂ ನನ್ನನ್ನು ನಿರ್ಣಯಿಸಲಿಲ್ಲ. ತಂಡವಾಗಿ ಸಾಧನೆಯನ್ನು ನಾವು ಕೊನೆಗೊಳಿಸುತ್ತೇವೆ. ಸಾಂಸ್ಕೃತಿಕ ಬದಲಾವಣೆಯಾಗಿ ಸಾಧಿಸಿದ್ದು ನನಗೆ ಯಾವಾಗಲೂ ಹೆಮ್ಮೆಯ ವಿಷಯವಾಗಿದೆ. ಪಂದ್ಯಾವಳಿಯು ಕೆಲವು ನಿರ್ದಿಷ್ಟ ಅವಧಿಗೆ ಮಾತ್ರ ನಡೆಯುತ್ತದೆ. ಆದರೆ ಸಾಂಸ್ಕೃತಿಕತೆ ದೀರ್ಘಕಾಲವಧಿಯದು. ಅದಕ್ಕಾಗಿ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಇದಕ್ಕಾಗಿ ನೀವು ಪಂದ್ಯಕ್ಕಿಂತ ಹೆಚ್ಚಿನ ಅಂಶಗಳು ಪಾತ್ರವಹಿಸುತ್ತವೆ ಎಂದಿದ್ದಾರೆ.

ಸರಿ ವಿಷಯದ ಬಗ್ಗೆ ಇರಲಿ ಗಮನ: ಆಟಗಾರನಾಗಿ ಹಲವು ಸಾಧನೆಗಳು ಹೊಂದಿದ್ದೇನೆ. ಏನು ತಪ್ಪು ಆಯ್ತು ಎನ್ನುವುದನ್ನು ನೋಡುವ ಬದಲಿಗೆ ಯಾವುದು ಸರಿಯಾಯಿತು ಎಂದು ನೋಡಲು ಬಯಸುತ್ತೇನೆ. 2011ರಲ್ಲಿ ನಾನು ವಿಶ್ವಕಪ್ ಮತ್ತು 2013ರಲ್ಲಿ ಚಾಂಪಿಯನ್​ಶಿಪ್​​ ಗೆದ್ದೆ. ಐದು ಟೆಸ್ಟ್​ ತಂಡದ ಭಾಗವಾಗಿ ನಾನು ಇದ್ದೆ. ಈ ದೃಷ್ಟಿಕೋನದಲ್ಲಿ ನೋಡುವುದಾದರೆ, ವಿಶ್ವಕಪ್​ ಗೆಲುವಿನ ಭಾಗವಾಗದ ಅನೇಕ ಜನರು ಇದ್ದಾರೆ. ಇಂತಹ ಸಂದರ್ಭದಲ್ಲಿ ನನ್ನ ಬಳಿ ಹೊಂದಿರುವು ಸಾಧನೆ ಬಗ್ಗೆ ನನಗೆ ಸಂತಸವಿದೆ. 2011ರಲ್ಲಿ ತಂಡದ ಭಾಗವಾಗಿದ್ದಕ್ಕೆ ನಾನು ಅದೃಷ್ಟವಂತ ಎನ್ನಬಹುದು. ಈ ವೇಳೆಯ ಆಯ್ಕೆಯ ಅದ್ಭುತ. ನಾನು ಉತ್ತಮ ಸ್ಕೋರ್​ ಹೊಂದಿದ್ದು, ಉತ್ತಮ ಅಂತ್ಯ ಕಂಡಿದ್ದೇನೆ. ಸಚಿನ್​ ತೆಂಡೂಲ್ಕರ್​​ ಆರನೇ ವಿಶ್ವ ಕಪ್​ ಆಡುವ ತಂಡದಲ್ಲಿ ನಾನು ಮೊದಲ ಪಂದ್ಯ ಆಡಿದೆ ಎಂದು ಘಟನೆ ಮೆಲುಕು ಹಾಕಿದರು.

ನನ್ನ ವೃತ್ತಿ ಜೀವನದಲ್ಲಿ ಯಾವುದು ತಪ್ಪಾಯಿತು ಎಂದು ನೋಡುವುದಾದರೆ, ಯಾವುದು ಸರಿ ಇತ್ತು ಎಂಬುದನ್ನು ನಾನು ನೋಡುತ್ತೇನೆ. ಅದಕ್ಕಾಗಿ ನಾನು ಕೃತಜ್ಞನಾಗಿದ್ದೇನೆ. ಇನ್ನು ಕಳೆದ ವರ್ಷ ತಮ್ಮ ಆಟ ಸೊರಗಿದಾಗ ಎಂಎಸ್​ ಧೋನಿ ಒಬ್ಬರೇ ನನಗೆ ನೆರವಾದರು ಎಂದ ಅವರು, ಹೆಂಡತಿ ಅನುಷ್ಕಾ ತನ್ನ ಜೀವನದ ದೊಡ್ಡ ಬಲ ಎಂದರು.

ಇದನ್ನೂ ಓದಿ: ರಾಕಿಂಗ್​ ಸ್ಟಾರ್ ಯಶ್​ ಭೇಟಿಯಾದ ಭಾರತೀಯ ಕ್ರಿಕೆಟ್​ ಪಟು ದಿನೇಶ್ ಕಾರ್ತಿಕ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.