ETV Bharat / sports

ಐಪಿಎಲ್​ಗಾಗಿ ತಯಾರಿ ನಡೆಸುತ್ತಿದ್ದೇನೆ, ಏಕದಿನ ವಿಶ್ವಕಪ್​ ಆಡುವ ಗುರಿ ಇದೆ: ದೀಪಕ್​ ಚಹಾರ್​

author img

By

Published : Feb 22, 2023, 10:19 AM IST

ಮಾರ್ಚ್​ 31ರಿಂದ ಐಪಿಎಲ್​ ಆರಂಭ - ಚೆನ್ನೈಗಾಗಿ ಆಡಲು ಸಿದ್ಧರಾದ ದೀಪಕ್​ ಚಹಾರ್​ - ಮ್ಯಾಕ್ಸ್​ವೆಲ್ ಮತ್ತು ಬೂಮ್ರಾ ಆಡುವ ಬಗ್ಗೆ ಇನ್ನೂ ಆಗದ ನಿರ್ಧಾರ ​

Deepak Chahar
ದೀಪಕ್​ ಚಹಾರ್​

ನವದೆಹಲಿ: ಇಂಡಿಯನ್​ ಪ್ರೀಮಿಯರ್​ ಲೀಗ್​ನ ಕಾರ್ನಿವಲ್​ಗೆ ಕೆಲವೇ ದಿನಗಳಿದ್ದು, ಆಟಗಾರರು ಈಗಲೇ ತಯಾರಾಗುತ್ತಿದ್ದಾರೆ. ಲೀಗ್​ನ ಕಾವು ದಿನೇ ದಿನೇ ಏರುತ್ತಿದ್ದು, ಒಂದಲ್ಲಾ ಒಂದು ಸುದ್ದಿ ಬರುತ್ತಲಿದೆ. ಐಪಿಎಲ್​ಗೂ ಮುನ್ನ ಚೊಚ್ಚಲ ಸೀಸನ್ ಡಬ್ಯ್ಲುಪಿಎಲ್​ ಆರಂಭವಾಗಲಿದ್ದು, ಮಹಿಳಾ ಟಿ20 ವಿಶ್ವಕಪ್ ನಂತರ ಈ ಚುಟುಕು ಸಮರ ಆರಂಭವಾಗಲಿದೆ.

ಗಾಯದ ಸಮಸ್ಯೆಯಿಂದ ಎರಡು ಪ್ರವಾಸದಲ್ಲಿ ಟೀಂ ಇಂಡಿಯಾದಿಂದ ಹೊರಗಿದ್ದ, ಭಾರತೀಯ ವೇಗದ ಬೌಲರ್ ದೀಪಕ್ ಚಹಾರ್ ಅವರು ಸಂಪೂರ್ಣವಾಗಿ ಫಿಟ್ ಆಗಿದ್ದಾರೆ. ಮಾರ್ಚ್ 31 ರಿಂದ ಪ್ರಾರಂಭವಾಗುವ ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೂಲಕ ಪೀಲ್ಡ್​ಗೆ ಇಳಿಯಲಿದ್ದಾರೆ. ಈ ಬಗ್ಗೆ ಸ್ವತಃ ದೀಪಕ್​ ಚಹಾರ್​ ಹೇಳಿಕೊಂಡಿದ್ದಾರೆ.

30 ವರ್ಷ ವಯಸ್ಸಿನ ವೇಗದ ಬೌಲರ್ ಒತ್ತಡದಿಂದ ಮತ್ತು ಗ್ರೇಡ್ III ತೊಡೆಯ ಗಾಯದಿಂದ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ತೆಗೆದುಕೊಂಡರು. ಚಹಾರ್​ ಕೊನೆಯ ಬಾರಿಗೆ ಬಾಂಗ್ಲಾದೇಶದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತಕ್ಕಾಗಿ ಆಡಿದರು. ಅಲ್ಲಿ ಅವರು ಕೇವಲ ಮೂರು ಓವರ್‌ಗಳನ್ನು ಬೌಲ್ ಮಾಡಿ ಗಾಯಕ್ಕೆ ತುತ್ತಾದರು. 2022 ರಲ್ಲಿ ಚಹಾರ್ ಭಾರತಕ್ಕಾಗಿ ಕೇವಲ 15 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಗಾಯದ ಕಾರಣ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದರು.

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಪುನರ್ವಸತಿ ನಂತರ ಚಹಾರ್ ಅವರು ಐಪಿಎಲ್‌ಗೆ ತಯಾರಿ ನಡೆಸುತ್ತಿದ್ದಾರೆ. ಐಪಿಎಲ್​ನಲ್ಲಿ ಚಹಾರ್​ಚೆನ್ನೈ ಸೂಪರ್ ಕಿಂಗ್ಸ್​ಗಾಗಿ ಆಡಲಿದ್ದಾರೆ. ಕಳೆದ ಎರಡು-ಮೂರು ತಿಂಗಳಿಂದ ನಾನು ಫಿಟ್‌ನೆಸ್‌ಗಾಗಿ ಶ್ರಮಿಸುತ್ತಿದ್ದೇನೆ, ನಾನು ಸಂಪೂರ್ಣವಾಗಿ ಫಿಟ್ ಆಗಿದ್ದೇನೆ ಮತ್ತು ಐಪಿಎಲ್‌ಗೆ ಉತ್ತಮ ತಯಾರಿ ನಡೆಸುತ್ತಿದ್ದೇನೆ ಎಂದು ಚಹಾರ್ ಹೇಳಿದರು.

ನನಗೆ ಎರಡು ದೊಡ್ಡ ಗಾಯಗಳಾಗಿದ್ದವು. ವೇಗದ ಬೌಲಿಂಗ್​ ಮಾಡುವಾಗ ಕಾಲುಗಳಿಗೆ ಹೆಚ್ಚಿನ ಒತ್ತಡ ಬೀಳುವುದರಿಂದ ಒತ್ತಡ ಮುರಿತ ಉಂಟಾಗಿತ್ತು. ಹಾಗೇ ಗ್ರೇಡ್ III ತೊಡೆಯ ಗಾಯವು ಆಗಿತ್ತು ಹೀಗಾಗಿ ಚೇತರಿಕೆಗೆ ಹೆಚ್ಚಿನ ಸಮಯ ತೆಗೆದು ಕೊಳ್ಳಬೇಕಾಯಿತು. ಟಿ20 ವಿಶ್ವಕಪ್​ ಆಡಬೇಕೆನ್ನುವ ಆಸೆ ಇತ್ತು. ಆದರೆ ಗಾಯದ ಸಮಸ್ಯೆಯಿಂದ ತಂಡದಲ್ಲಿ ಭಾಗವಾಗಲು ಸಾಧ್ಯವಾಗಲಿಲ್ಲ. ಮುಂದೆ ಭಾರತದಲ್ಲಿ ನಡೆಯಲಿರುವ ಏಕ ದಿನ ವಿಶ್ವಕಪ್​ನಲ್ಲಿ ಆಡುವ ಗುರಿಹೊಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

“ಪುರುಷರ ಐಪಿಎಲ್ ವಿಶ್ವ ಕ್ರಿಕೆಟ್​ನಲ್ಲಿ ಬಹಳಷ್ಟು ಬದಲಾವಣೆಗಳನ್ನು ಮಾಡಿತು. ಸಾಕಷ್ಟು ಜನರಿಗೆ ಅಂತರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ಮಾಡಿಕೊಟ್ಟಿತು. ಮಹಿಳಾ ಪ್ರೀಮಿಯರ್ ಲೀಗ್‌ನಲ್ಲೂ ಅದೇ ಸಂಭವಿಸುತ್ತದೆ. ಮಹಿಳಾ ಕ್ರಿಕೆಟ್ ತುಂಬಾ ವೇಗವಾಗಿ ಬೆಳೆಯುತ್ತದೆ. ಏಕೆಂದರೆ ಅವರು ತಮ್ಮ ವೃತ್ತಿಜೀವನದ ಆರಂಭದಲ್ಲಿ ಅಂತಾರಾಷ್ಟ್ರೀಯ ಆಟಗಾರರನ್ನು ಎದುರಿಸುತ್ತಾರೆ. ಮಹಿಳಾ ಆಟಗಾರ್ತಿಯರಿಗೆ ಹೆಚ್ಚು ಸಂಪಾದನೆಯ ಅವಕಾಶವನ್ನು ಈ ಲೀಗ್​ ತೆರೆದಿಟ್ಟಿದೆ. ಮಹಿಳಾ ಕ್ರಿಕೆಟ್​ಗೆ ಹೆಚ್ಚಿನ ಪ್ರಮುಖ್ಯತೆ ಈ ಪಂದ್ಯಗಳಿಂದ ದೊರಕುವ ಸಾಧ್ಯತೆ ಇದೆ" ಎಂದು ಚಹಾರ್ ಹೇಳಿದರು.

ಐಪಿಎಲ್​ಗೆ ಗಾಯದ ಬರೆ: ಗಾಯದ ಸಮಸ್ಯೆ ಐಪಿಎಲ್​ ತಂಡಗಳಿಗೆ ಕಾಡುವ ಸಾಧ್ಯತೆ ಹೆಚ್ಚಿದೆ. ಮುಂಬೈ ಇಂಡಿಯನ್ಸ್​ನ ಸ್ಟಾರ್​ ಪ್ಲೇಯರ್​ ಬೂಮ್ರಾ ಇನ್ನು ಎನ್​ಸಿಎಯಲ್ಲಿ ಇದ್ದಾರೆ. ಆರ್​ಸಿಬಿಯ ಮ್ಯಾಕ್ಸ್​ ವೆಲ್​ಗೆ ಗಾಯವಾಗಿದೆ ಎಂಬ ಸುದ್ದಿಯಿಂದ ಅವರೂ ತಂಡದಿಂದ ಹೊರಗುಳಯುವ ಸಾಧ್ಯತೆ ಹೆಚ್ಚಿದೆ. ವಾರ್ನರ್​ ಮೊಣಕೈ ಗಾಯಕ್ಕೆ ತುತ್ತಾಗಿದ್ದು, ಚೇತರಿಕೆ ಬಗ್ಗೆ ಇನ್ನಷ್ಟೇ ತಿಳಿಯಬೇಕಿದೆ.

ಇದನ್ನೂ ಓದಿ: ದುಬೈ ಟೂರ್ನಿ: ಸೋಲಿನೊಂದಿಗೆ ವೃತ್ತಿಪರ ಟೆನಿಸ್​ಗೆ ಸಾನಿಯಾ ಮಿರ್ಜಾ ಗುಡ್​ಬೈ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.