ನವದೆಹಲಿ: ಮುಂಬೈ ಇಂಡಿಯನ್ಸ್ ತಂಡವು ಯುಪಿ ವಾರಿಯರ್ಸ್ ತಂಡವನ್ನು ಫೈನಲ್‌ನಿಂದ ಹೊರಹಾಕಿದೆ. ನಟಾಲಿ ಸೀವರ್ ಬ್ರಂಟ್ ಮತ್ತು ಇಸ್ಸಿ ವಾಂಗ್ ಯುಪಿಯನ್ನು ಸೋಲಿಸುವಲ್ಲಿ ಗಮನಾರ್ಹ ಕೊಡುಗೆ ನೀಡಿದರು. ಸೀವರ್ ಬ್ರಂಟ್ 38 ಎಸೆತಗಳಲ್ಲಿ 9 ಬೌಂಡರಿ ಮತ್ತು ಎರಡು ಸಿಕ್ಸರ್ನಿಂದ 72 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು. ನಟಾಲಿಯಾ ಅವರ ಅತ್ಯುತ್ತಮ ಬ್ಯಾಟಿಂಗ್‌ಗಾಗಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ನೆಟ್ಲೆ ಹೊರತುಪಡಿಸಿ, ಇಸ್ಸಿ ವಾಂಗ್ ಅದ್ಭುತ ಬೌಲಿಂಗ್ ಮಾಡಿ 15 ರನ್ ನೀಡಿ ನಾಲ್ಕು ವಿಕೆಟ್ ಪಡೆದರು. ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು.
ಇಸ್ಸಿ ವಾಂಗ್ : ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ಇಸ್ಸಿ ವಾಂಗ್ ಇಂಗ್ಲೆಂಡ್‌ನ ವೇಗದ ಬೌಲರ್. ಈ 20 ವರ್ಷದ ಕ್ರಿಕೆಟ್ ತಾರೆ ಇದುವರೆಗೆ ಒಂದು ಟೆಸ್ಟ್, ಮೂರು ಏಕದಿನ ಮತ್ತು 9 ಟಿ20 ಪಂದ್ಯಗಳನ್ನು ಒಳಗೊಂಡಂತೆ 13 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇಸ್ಸಿ 13 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ. ಇಸ್ಸಿ 27 ಜೂನ್ 2022 ರಂದು ಟೆಸ್ಟ್ ಮತ್ತು 15 ಜುಲೈ 2022 ರಂದು ಏಕದಿನಕ್ಕೆ ಪದಾರ್ಪಣೆ ಮಾಡಿದ್ದರು. 21 ಜುಲೈ 2022 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಯ ಚೊಚ್ಚಲ ಪಂದ್ಯವನ್ನು ಆಡಿದ್ದರು.
-
𝙄𝙎𝙎𝙔 as you like! 😎😎
— Women's Premier League (WPL) (@wplt20) March 24, 2023 " class="align-text-top noRightClick twitterSection" data="
Congratulations to @Wongi95 on creating history with the ball and claiming a memorable hat-trick 👏🏻👏🏻
Follow the match ▶️ https://t.co/QnFsPlkrAG#Eliminator | #MIvUPW | #TATAWPL pic.twitter.com/uL5nqFIcUI
">𝙄𝙎𝙎𝙔 as you like! 😎😎
— Women's Premier League (WPL) (@wplt20) March 24, 2023
Congratulations to @Wongi95 on creating history with the ball and claiming a memorable hat-trick 👏🏻👏🏻
Follow the match ▶️ https://t.co/QnFsPlkrAG#Eliminator | #MIvUPW | #TATAWPL pic.twitter.com/uL5nqFIcUI𝙄𝙎𝙎𝙔 as you like! 😎😎
— Women's Premier League (WPL) (@wplt20) March 24, 2023
Congratulations to @Wongi95 on creating history with the ball and claiming a memorable hat-trick 👏🏻👏🏻
Follow the match ▶️ https://t.co/QnFsPlkrAG#Eliminator | #MIvUPW | #TATAWPL pic.twitter.com/uL5nqFIcUI
ಡಬ್ಲ್ಯುಪಿಎಲ್‌ನಲ್ಲಿ 12 ವಿಕೆಟ್: ಇಸ್ಸಿ ವಾಂಗ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಅದ್ಭುತ ಬೌಲಿಂಗ್ ಮಾಡಿದರು. ವಾಂಗ್ ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದ್ದು ಇದರಲ್ಲಿ 12 ವಿಕೆಟ್‌ಗಳನ್ನು ಪಡೆದಿದ್ದಾರೆ. ಗುರುವಾರ ಯುಪಿ ವಾರಿಯರ್ಸ್ ವಿರುದ್ಧ ಇಸ್ಸಿ ಹ್ಯಾಟ್ರಿಕ್ ವಿಕೆಟ್ ಗಳಿಸಿದರು. 13ನೇ ಓವರ್‌ನ ಎರಡನೇ ಎಸೆತದಲ್ಲಿ ನೆಟ್ ಸೀವರ್ ಬ್ರಂಟ್ ಕೈಗೆ ಕಿರಣ್ ನವಗಿರೆ ಕ್ಯಾಚ್ ನೀಡಿ ಔಟಾದರು. ಮೂರನೇ ಎಸೆತದಲ್ಲಿ ಸಿಮ್ರಾನ್ ಶೇಖ್ ಮತ್ತು ನಾಲ್ಕನೇ ಎಸೆತದಲ್ಲಿ ಸೋಫಿ ಎಕ್ಲೆಸ್ಟೋನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಇಸ್ಸಿ ಅವರ ಈ ಬೌಲಿಂಗ್ ದಾಳಿಯಿಂದಾಗಿ ಯುಪಿ ವಾರಿಯರ್ಸ್ 17.4 ಓವರ್‌ಗಳಲ್ಲಿ 110 ರನ್‌ಗಳಿಗೆ ಆಲೌಟ್ ಆಯಿತು.
ಫೈನಲ್ನಲ್ಲಿ ಇಸ್ಸಿ ಮೇಲೆ ಭರವಸೆ: ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಇಸ್ಸಿ ಮೇಲೆ ಹೆಚ್ಚಿನ ಭರವಸೆಗಳಿವೆ. ಡೆಲ್ಲಿ ಕ್ಯಾಪಿಟಲ್ಸ್ನ್ನು ಕಟ್ಟಿಹಾಕುವಲ್ಲಿ ಇಸ್ಸಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಕ್ಯಾಪ್ಟನ್ ಅಭಿಪ್ರಾಯ ವ್ಯಕ್ತ ಪಡೆಸಿದ್ದಾರೆ. ಮೆಗ್ ಲ್ಯಾನಿಂಗ್ ಪಡೆಯೂ ಇಸ್ಸಿಯ ಬೌಲಿಂಗ್ ಎದುರಿಸುವ ತಂತ್ರವನ್ನು ಹೆಣೆಯುವುದಂತೂ ಖಚಿತ.
ನನ್ನ ಕೆಲಸ ಇನ್ನೂ ಮುಗಿದಿಲ್ಲ: ಪಂದ್ಯದ ನಂತರ ಮಾತನಾಡಿದ ಇಸ್ಸಿ,"ನಟಾಲಿ ಸೀವರ್ ಬ್ರಂಟ್ ಉತ್ತಮ ಬ್ಯಾಟರ್ ಅವಳ ಬ್ಯಾಟಿಂಗ್ನಿಂದ ತಂಡಕ್ಕೆ ಗೆಲುವು ಸಾಧ್ಯವಾಯಿತು. ಅವಳು ಗಳಿಸಿದ ರನ್ನಿಂದಾಗಿ ದೊಡ್ಡ ಮೊತ್ತದ ಗುರಿಯನ್ನು ನೀಡಿದೆವು. ವರ್ಷಗಳ ಕಾಲ ಜಿಮ್ನಲ್ಲಿ ಬೆವರಿಳಿಸಿದ್ದು ಸಹಕಾರಯಾಗಿದೆ" ಎಂದು ಹೇಳಿದ್ದಾರೆ.
"ನಾವು ಪಿಚ್ನ್ನು ನೋಡಿಕೊಂಡೆವು, ಸ್ವಿಂಗ್ ಆಗುದರ ಬಗ್ಗೆ ತಿಳಿದು ಅದರ ಲಾಭ ಪಡೆದು ಕೊಂಡೆವು. ನಾನು ಸ್ಟಂಪ್‌ಗಳನ್ನು ಹೊಡೆಯಲು ಪ್ರಯತ್ನಿಸುತ್ತಿದ್ದೆ, ಸೋಫಿ ಎಕ್ಲೆಸ್ಟೋನ್ ಕ್ಲೀನ್ ಬೌಲ್ಡ್ ಆದಳು. ಅವಳು ಉತ್ತಮ ಬ್ಯಾಟಿಂಗ್ ಬಲ್ಲಳು. ಆದರೆ ನಾನು ಅವರ ಆಟವನ್ನು ಬಲ್ಲವಳಾದ್ದರಿಂದ ವಿಕೆಟ್ ಪಡೆಯುವುದು ಸರಳವಾಯಿತು. ಆದರೆ ನನ್ನ ಕೆಲಸ ಮುಗಿದಿಲ್ಲ. ಇರುವ ಇನ್ನೊಂದು ಹೆಜ್ಜೆಯನ್ನು ಸಾಧಿಸ ಬಯಸುತ್ತೇವೆ" ಎಂದು ಇಸ್ಸಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೋಲು: 11 ವರ್ಷಗಳ ನಂತರ ಮುಖಾಮುಖಿಯಲ್ಲಿ ಅಫ್ಘಾನ್ಗೆ ಐತಿಹಾಸಿಕ ಗೆಲುವು