ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯಾ ನೂತನ ದಾಖಲೆ ಸೃಷ್ಟಿಸಿದರು. ಚುಟುಕು ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ 9ನೇ ಆಟಗಾರನಾಗಿದ್ದರೆ, ವಿಕೆಟ್ ಪಡೆದ ಮೊದಲ ನಾಯಕನಾಗಿ ಪಾಂಡ್ಯಾ ಸಾಧನೆ ತೋರಿದ್ದಾರೆ.
ಐಪಿಎಲ್ನಲ್ಲಿ ಗುಜರಾತ್ ಟೈಟಾನ್ಸ್ ತಂಡ ಮುನ್ನಡೆಸಿ ಚಾಂಪಿಯನ್ ಪಟ್ಟ ದಕ್ಕಿಸಿಕೊಟ್ಟ ಈ ಆಲ್ರೌಂಡರ್ಗೆ ಐರ್ಲೆಂಡ್ ವಿರುದ್ಧದ ಸರಣಿಯ ನಾಯಕತ್ವವೂ ಒಲಿದಿದೆ. ಹಾಗಾಗಿ, ಭಾರತ ಟಿ20 ತಂಡವನ್ನು ಮುನ್ನಡೆಸಿದ 9ನೇ ನಾಯಕನಾದರೆ, ವಿಕೆಟ್ ಪಡೆದ ಮೊದಲ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು.
ಮಳೆಯಿಂದಾಗಿ 12 ಓವರ್ಗಳಿಗೆ ಕಡಿತವಾದ ನಿನ್ನೆಯ ಪಂದ್ಯದಲ್ಲಿ ಆರಂಭಿಕ ಆಟಗಾರ ಸ್ಟರ್ಲಿಂಗ್ 4 ರನ್ ಗಳಿಸಿ ಆಡುತ್ತಿದ್ದಾಗ, ಪಾಂಡ್ಯಾ ವಿಕೆಟ್ ಕಿತ್ತರು. ಈ ಮೂಲಕ ಟಿ20ಯಲ್ಲಿ ವಿಕೆಟ್ ಪಡೆದ ಮೊದಲ ನಾಯಕ ಎಂಬ ಶ್ರೇಯವೂ ಪಾಂಡ್ಯಾ ಪಾಲಾಯಿತು.
ವೀರೇಂದ್ರ ಸೆಹ್ವಾಗ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ರಿಷಬ್ ಪಂತ್ ಭಾರತ ಟಿ20 ತಂಡಕ್ಕೆ ನಾಯಕರಾಗಿದ್ದರೂ ಯಾರೂ ವಿಕೆಟ್ ಪಡೆದಿಲ್ಲ.
ಇದನ್ನೂ ಓದಿ: ಟಿ-20 ಪವರ್ ಪ್ಲೇ: ಅತಿ ಹೆಚ್ಚು ವಿಕೆಟ್ ಪಡೆದ ಭುವನೇಶ್ವರ್ ಕುಮಾರ್