ETV Bharat / sports

ಗಲ್ಲಿ ಕ್ರಿಕೆಟ್​ to ರಣಜಿ ಟ್ರೋಫಿ.. ಗುಡಿಸಲಿನಲ್ಲಿ ಬೆಳೆದ ಹುಡುಗನ ಅದ್ಭುತ ಕ್ರಿಕೆಟ್​ ಪಯಣ

author img

By

Published : Mar 1, 2022, 8:32 PM IST

Bhuvanagiri Punnaiah cricket Journey.. ಬಡ ಕುಟುಂಬದಿಂದ ಬಂದು ರಣಜಿ ಬಾಗಿಲು ತಟ್ಟಿ ಭಾರತ ತಂಡದಲ್ಲಿ ಆಡುವ ಕನಸಿನ ಕಡೆಗೆ ಮುನ್ನುಗ್ಗುತ್ತಿದ್ದಾರೆ. ಆತನ ಹೆಸರು ಭುವನಗಿರಿ ಪುನ್ನಯ್ಯ. ಹೈದರಾಬಾದ್​ನ ಕಡುಬಡತನದ ಕುಟುಂಬದಿಂದ ಬಂದಂತಹ ಈ ಯುವಕ ರಣಜಿಯಲ್ಲಿ ಪಾದಾರ್ಪಣೆ ಮಾಡಿದ್ದಾರೆ.

Hyderabad cricketer B. Punnaiah's incredible cricket journey
ಭುವನಗಿರಿ ಪುನ್ನಯ್ಯ

ಹೈದರಾಬಾದ್: ಭಾರತ ಕ್ರಿಕೆಟ್​ನಲ್ಲಿ ರಾರಾಜಿಸುತ್ತಿರುವ ಮೊಹಮ್ಮದ್ ಸಿರಾಜ್ ಹೆಸರನ್ನು ಕೇಳಿದರೆ ಆತನ ಹಿನ್ನೆಲೆ ನಮ್ಮ ಕಣ್ಣಮುಂದೆ ಬರುತ್ತದೆ. ಆಟೋ ಓಡಿಸುತ್ತಿದ್ದ ಆತನ ತಂದೆಯ ನೆನಪಾಗುತ್ತದೆ. ಗಲ್ಲಿ ಕ್ರಿಕೆಟ್​ನಿಂದ ಟೀಮ್​ ಇಂಡಿಯಾದ ಪ್ರಧಾನ ಬೌಲರ್​ಗಳಲ್ಲಿ ಒಬ್ಬರಾಗಿ ಹಂತ ಹಂತವಾಗಿ ಬೆಳೆದ ವೇಗದ ಬೌಲರ್​ ನೆನಪಾಗುತ್ತದೆ.

ಇದೀಗ ಆ ಸಿರಾಜ್​ ರೀತಿಯಲ್ಲೇ ಮತ್ತೆ ಮುತ್ತಿನ ನಗರಿಯ ಯುವಕ ಸಾಗುತ್ತಿದ್ದಾನೆ. ಆತನ ಹೆಸರು ಭುವನಗಿರಿ ಪುನ್ನಯ್ಯ. ಹೈದರಾಬಾದ್​ನ ಕಡುಬಡತನದ ಕುಟುಂಬದಿಂದ ಬಂದಂತಹ ಈ ಯುವಕ ರಣಜಿಯಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಬಡ ಕುಟುಂಬದಿಂದ ಬಂದು ರಣಜಿ ಬಾಗಿಲು ತಟ್ಟಿ ಭಾರತ ತಂಡದಲ್ಲಿ ಆಡುವ ಕನಸಿನ ಕಡೆಗೆ ಮುನ್ನುಗ್ಗುತ್ತಿದ್ದಾರೆ.

ಕುಟುಂಬದ ಹಿನ್ನೆಲೆ.. ಕುಕ್ಕಟಪಲ್ಲಿ ಹೌಸಿಂಗ್​ ಬೋರ್ಡ್​ಗೆ ಸೇರಿರುವ ಪುನ್ನಯ್ಯ ಅವರದು ಚಿಕ್ಕದಾದ ಚೊಕ್ಕ ಕುಟುಂಬ. ತಂದೆ ಅಂಜನೇಯುಲು ಆಟೋ ರಿಕ್ಷಾ ಓಡಿಸುತ್ತಿದ್ದರೆ, ತಾಯಿ ಮನೆಗೆಲಸ ಮಾಡುತ್ತಾರೆ. ಚಿಕ್ಕ ಗುಡಿಸಿಲಿನಲ್ಲಿಯೇ ಇವರ ಜೀವನ. ಇಂತಹ ಸ್ಥಿತಿಯಿಂದ ಬಂದ 18 ವರ್ಷದ ಪುನ್ನಯ್ಯ ರಣಜಿ ಮಟ್ಟಕ್ಕೆ ಬೆಳೆಯುವುದೇ ದೊಡ್ಡ ವಿಶೇಷ. ಐದನೇ ತರಗತಿಯಲ್ಲಿದ್ದಾಗ ಭುವನ ವಿಜಯಂ ಮೈದಾನದಲ್ಲಿ ಸಾಮಾನ್ಯವಾಗಿ ಟೆನ್ನಿಸ್‌ ಚೆಂಡಿನಲ್ಲಿ ಆಡುವುದನ್ನು ಆರಂಭಿಸಿದ ಪುನ್ನಯ್ಯ, ಪೇಸ್‌ ಬೌಲಿಂಗ್‌ನಲ್ಲಿ ಎಲ್ಲರ ಗಮನ ಸೆಳೆದರು. ಕೋಚ್ ನರೇಶ್‌ ಉತ್ತೇಜನದೊಂದಿಗೆ ವೇಗದೊಂದಿಗೆ ಸ್ವಿಂಗ್ಅನ್ನು ಅವರು ಕಲಿತಿದ್ದಾರೆ. ಆತನಲ್ಲಿ ಕೌಶಲವನ್ನು ಗುರುತಿಸಿದ ಮಾಜಿ ಆಟಗಾರ ಚಾಮುಂಡೇಶ್ವರೀನಾಥ್‌ ಆರ್ಥಿಕವಾಗಿ ಯುವ ಆಟಗಾರನಿಗೆ ನೆರವು ನೀಡಿ ಉತ್ತೇಜನ ನೀಡಿದ್ದಾರೆ.

ಕೆರಿಯರ್ ಟರ್ನಿಂಗ್ ಪಾಯಿಂಟ್​.. ಹೈಟೆಕ್‌ ಸಿಟಿಯ ರಾಮಾನಾಯ್ಡು ಕ್ರಿಕೆಟ್‌ ಅಕಾಡೆಮಿಯಲ್ಲಿ ಅಭ್ಯಾಸ ಮಾಡುವ ಅವಕಾಶ ಸಿಕ್ಕಿದ್ದು ಆತನ ವೃತ್ತಿಜೀವನದ ಮಹತ್ತರ ತಿರುವು. ಇಲ್ಲೇ ಅವರು ಹೊಸ ಚೆಂಡಿನೊಂದಿಗೆ ಆಡುವುದನ್ನು ಪ್ರಾಕ್ಟೀಸ್‌ ಮಾಡಿ ನಿಧಾನವಾಗಿ ಹಿಡಿತ ಸಾಧಿಸಿದರು. ನಂತರ ಹೆಚ್​ಸಿಎ ಶಿಬಿರದಲ್ಲಿ ಕಾಲಿಟ್ಟ ಅವರು, ಲೀಗ್ಸ್‌ನಲ್ಲಿಯೇ ಎಂಪಿ ಕೋಲ್ಟ್ಸ್​​ ತಂಡದ ವಿರುದ್ಧ ಆರ್ಭಟಿಸಿದರು.

2019 ರಲ್ಲಿ ಹೈದರಾಬಾದ್‌ ಅಂಡರ್‌-19 ರಾಜ್ಯ ತಂಡಕ್ಕೆ ಆಡುವ ಅವಕಾಶ ಪಡೆದುಕೊಂಡ ಪುನ್ನಯ್ಯ ಮುಂಬೈ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ 5 ವಿಕೆಟ್‌ಗಳನ್ನು ಪಡೆದರು. ಅದೇ ಟೂರ್ನಿಯಲ್ಲಿ ಕೇರಳ ವಿರುದ್ಧ ಐದು ವಿಕೆಟ್‌ ಪಡೆದು ವಿಜೃಂಭಿಸಿದರು. ಆ ನಂತರ 2020ರಲ್ಲಿ ಕೂಚ್‌ ಬಿಹಾರ್​ ಟೂರ್ನಿಯಲ್ಲಿ ತ್ರಿಪುರ ವಿರುದ್ಧ 5 ವಿಕೆಟ್‌ಗಳು ಸೇರಿದಂತೆ 20 ವಿಕೆಟ್‌ ಪಡೆದು ಗಮನ ಸೆಳೆದರು.

ಈ ಪ್ರದರ್ಶನದೊಂದಿಗೆ ಆ ವರ್ಷ ಆತನಿಗೆ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಿಂದ ಕರೆ ಬಂದಿತು. ಆದರೆ ಕೋವಿಡ್‌-19 ಕಾರಣ ಎನ್‌ಸಿಎನಲ್ಲಿ ಆಡುವ ಅವಕಾಶವನ್ನು ಪುನ್ನಯ್ಯ ಕಳೆದುಕೊಂಡರು. ಕೋವಿಡ್ ವಿರಾಮದ ನಂತರ 2021ರಲ್ಲಿ ಅಹ್ಮದಾಬಾದ್‌ನಲ್ಲಿ ನಡೆದ ಚಾಲೆಂಜರ್ ಟೋರ್ನಿಯಲ್ಲಿ ಭಾರತ-ಬಿ ತಂಡಕ್ಕೆ ಆಡುವ ಅವಕಾಶ ಒದಗಿಬಂತು. ಈ ಟೂರ್ನಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಹಾಕಿಕೊಂಡ ಪುನ್ನಯ್ಯ ಈ ವರ್ಷ ರಣಜಿಯಲ್ಲಿ ಆಡುವ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಫೆಬ್ರವರಿ 24 ರಂದು ಕಟಕ್‌ನಲ್ಲಿ ಬೆಂಗಾಲ್‌ ವಿರುದ್ಧ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಪುನ್ನಯ್ಯ ಆರಂಭದಲ್ಲೇ ಆಕರ್ಷಕ ಪ್ರದರ್ಶನ ತೋರಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಟಾಪ್‌ಆರ್ಡರ್‌ನ ಎರಡು ಪ್ರಮುಖ ವಿಕೆಟ್‌ಗಳನ್ನು ಪಡೆದರು. ಕೋಚ್​ ಬಿಹಾರ್‌ ಟ್ರೋಫಿ, ಅಂಡರ್‌-19 ಮತ್ತು ಇಂಡಿಯಾ ಚಾಲೆಂಜರ್ಸ್‌ ಟ್ರೋಫಿ, ಸಿ.ಕೆ. ನಾಯ್ಡು ಟ್ರೋಫಿಗಳಲ್ಲಿ ಅತ್ಯುತ್ತಮ ಪ್ರದರ್ಶನದೊಂದಿಗೆ ಮಿಂಚಿದರು. ಭುವನೇಶ್ವರ್‌ ಕುಮಾರ್​ ಮತ್ತು ರಬಾಡರನ್ನು ಆರಾಧಿಸುವ ಈ ಬಲ ಗೈ ಪೇಸರ್‌ಗೆ ಔಟ್‌ ಸ್ವಿಂಗರ್‌ ಪ್ರಧಾನ ಅಸ್ತ್ರವಾಗಿದೆ.

ರಣಜಿಯಲ್ಲಿ ಆಡುತ್ತಿರುವುದಕ್ಕೆ ಸಂತೋಷವಾಗಿದೆ. ನನ್ನ ಕಷ್ಟಗಳಿಗೆ ಇಂದು ಫಲಿತಾಂಶ ಸಿಕ್ಕಿದೆ. ನನಗೆ ಅವಕಾಶ ಕಲ್ಪಿಸಿದ ಹೆಚ್‌ಸಿಎ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ. ಭಾರತ ತಂಡಕ್ಕಾಗಿ ಆಡುವುದು ನನ್ನ ಕಸನು ’’ ಎಂದು ಪುನ್ನಯ್ಯ 'ಈಟಿವಿ ಭಾರತ'ಕ್ಕೆ ಹೇಳಿದ್ದಾರೆ.

ಇದನ್ನೂ ಓದಿ:ಕೊಹ್ಲಿ 100ನೇ ಟೆಸ್ಟ್: ತಂದೆ ಸಾವಿನ ದಿನದಂದೂ ವಿರಾಟ್​ ಬದ್ಧತೆಯ ಆಟ ನೆನೆದ ಪಾರ್ಟ್ನರ್​ ಪುನೀತ್ ಬಿಶ್ತ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.