ETV Bharat / sports

ಅಭಿಷೇಕ್-ಮಾರ್ಕ್ರಮ್ ಅಬ್ಬರ: ಟೈಟನ್ಸ್​ಗೆ 196 ರನ್​ಗಳ ಬೃಹತ್ ಗುರಿ ನೀಡಿದ ಹೈದರಾಬಾದ್​ - ಹಾರ್ದಿಕ್ ಪಾಂಡ್ಯ

ಆಲ್​ರೌಂಡರ್​ಗಳಾದ ಅಭಿಷೇಕ್ ಶರ್ಮಾ 65 ಮತ್ತು ಮಾರ್ಕ್ರಮ್ 56 ರನ್​ಗಳ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್ ತಂಡ ಎದುರಾಳಿ ಗುಜರಾತ್​ ಟೈಟನ್ಸ್​ಗೆ 196ರನ್​ಗಳ ಸ್ಪರ್ಧಾತ್ಮಕ ಗುರಿ ನೀಡಿದೆ.

Gujarat Titans vs Sunrisers Hyderabad
Gujarat Titans vs Sunrisers Hyderabad
author img

By

Published : Apr 27, 2022, 7:22 PM IST

Updated : Apr 27, 2022, 9:33 PM IST

ಮುಂಬೈ: ಅಭಿಷೇಕ್ ಶರ್ಮಾ ಮತ್ತು ಐಡೆನ್ ಮಾರ್ಕ್ರಮ್​ ಅವರ ಭರ್ಜರಿ ಅರ್ಧಶತಕಗಳ ನೆರವಿನಿಂದ ಸನ್​ರೈಸರ್ಸ್ ಹೈದರಾಬಾದ್​ ತಂಡ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 195 ರನ್​ಗಳ ಬೃಹತ್​ ಮೊತ್ತ ಕಲೆಯಾಕಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್​ ತಂಡ 5 ಓವರ್​ಗಳ ಒಳಗೆ ನಾಯಕ ಕೇನ್ ವಿಲಿಯಮ್ಸನ್​(5) ಮತ್ತು ರಾಹುಲ್ ತ್ರಿಪಾಠಿ(16) ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು.

ಆದರೆ 3ನೇ ವಿಕೆಟ್​ಗೆ ಒಂದಾದ ಯುವ ಆರಂಭಿಕ ಬ್ಯಾಟರ್​ ಅಭಿಷೇಕ್ ಶರ್ಮಾ ಮತ್ತು ಮಾರ್ಕ್ರಮ್​ 3ನೇ ವಿಕೆಟ್​ಗೆ 96 ರನ್​ಗಳ ಜೊತೆಯಾಟ ನೀಡಿ ತಂಡವನ್ನು ಸುಸ್ಥಿತಿಗೆ ತಂದರು. ಅಭಿಷೇಕ್ 42 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್​ಗಳ ಸಹಿತ 65 ರನ್​ಗಳಿಸಿದರೆ, ಮಾರ್ಕ್ರಮ್​ 40 ಎಸೆತಗಳಲ್ಲಿ 2 ಬೌಂಡರಿ ಮತ್ತು3 ಸಿಕ್ಸರ್​ ಸಹಿತ 56 ರನ್​ಗಳಿಸಿದರು. ನಂತರ ಬಂದ ವಿಕೆಟ್ ಕೀಪರ್ ಪೂರನ್ 3 ​ ಮತ್ತು ಸುಂದರ್​ ತಲಾ 3 ರನ್​ಗಳಿಸಿ ಪೆವಿಲಿಯನ್​ಗೆ ಮರಳಿದರು.

19ನೇ ಓವರ್​ಗಳಲ್ಲಿ ಹೈದರಾಬಾದ್​ 169 ರನ್​ಗಳಿಸಿತ್ತು. ಫರ್ಗುಸನ್ ಎಸೆದ ಕ ಕೊನೆಯು ಓವರ್​​ನಲ್ಲಿ ಅಬ್ಬರಿಸಿದ ಮಾರ್ಕೊ ಜಾನ್ಸನ್(8)​ ಒಂದು ಸಿಕ್ಸ್ ಮತ್ತು ಶಶಾಂಕ್​ ಸಿಂಗ್ (25) 3 ಸಿಕ್ಸರ್​ ಸಿಡಿಸಿ ತಂಡದ ಮೊತ್ತವನ್ನು 195ಕ್ಕೆ ಕೊಂಡೊಯ್ದರು.

ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ 39 ವಿಕೆಟ್​ಗೆ 3 ವಿಕೆಟ್, ಯಶ್ ದಯಾಲ್ 24ಕ್ಕೆ1, ಅಲ್ಜಾರಿ ಜೋಶೆಫ್ 35ಕ್ಕೆ1 ವಿಕೆಟ್ ಪಡೆದರು.

ಟಾಸ್​ ಅಪ್​ಡೇಟ್​: ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟನ್ಸ್ ತಂಡ ಟಾಸ್​ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಟೈಟನ್ಸ್ ಮೊದಲ ಮುಖಾಮುಖಿಯಲ್ಲಿ ಹೈದರಾಬಾದ್​​ ವಿರುದ್ಧ ಸೋಲು ಕಂಡಿತ್ತು.

ಈ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್ ತಂಡ ಯಾವುದೇ ಬದಲಾವಣೆಯಿಲ್ಲದೆ ಕಣಕ್ಕಿಳಿದಿದ್ದರೆ, ಸನ್​ರೈಸರ್ಸ್​ ಹೈದರಾಬಾದ್​ ತಂಡಕ್ಕೆ ಜಗದೀಶ್​ ಸುಚಿತ್​ ಬದಲಿಗೆ ವಾಷಿಂಗ್ಟನ್ ಸುಂದರ್​ ಕಣಕ್ಕಿಳಿದಿದ್ದಾರೆ.

ಗುಜರಾತ್​ ಟೈಟನ್ಸ್ ಆಡಿರುವ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯದಲ್ಲಿ ಸೋಲು ಕಂಡು 6ರಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಹೈದರಾಬಾದ್​ ಮೊದಲೆರಡು ಪಂದ್ಯಗಳ ಸೋಲಿನ ಬಳಿಕ ಅದ್ಭುತವಾಗಿ ಕಮ್​ಬ್ಯಾಕ್​ ಮಾಡಿ ಸತತ 5 ಗೆಲುವು ಪಡೆದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಕುಳಿತಿದೆ.

ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್ XI): ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೀ), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್

ಗುಜರಾತ್ ಟೈಟಾನ್ಸ್ (ಪ್ಲೇಯಿಂಗ್ XI): ವೃದ್ಧಿಮಾನ್ ಸಹಾ (ವಿಕೀ), ಶುಬ್ಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಶಮಿ

Last Updated : Apr 27, 2022, 9:33 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.